ಗೋಕರ್ಣ:ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಕುಮಟಾ ತಾಲೂಕಿನ ಬೆಟ್ಕುಳಿ ಸಮೀಪ ಈ ಘಟನೆ ನಡೆದಿದ್ದು,ಮೃತ ದುರ್ದೈವಿಯನ್ನು ವಿಠ್ಠಲ ಪಟಗಾರ (45) ಎಂದು ಗುರುತಿಸಲಾಗಿದೆ.
ಕುಮಟಾ ಕಡೆಯಿಂದ ಅಂಕೋಲಾ ಕಡೆ ತೆರಳುತ್ತಿದ್ದ ಕಾರು ಅಪಘಾತಪಡಿಸಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಹೇಳಲಾಗಿದ್ದು, ಹಿರೇಗುತ್ತಿ ಪೊಲೀಸ್ ಚೆಕ್‌ಪೊಸ್ಟ್ ಬಳಿ ಕಾರು ಹಾಗೂ ಚಾಲಕ ವಶಕ್ಕೆ ಪಡೆಯಲಾಗಿದೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಹಿರೇಗುತ್ತಿ ಹೈಸ್ಕೂಲ್ ರಾಷ್ಟçಮಟ್ಟದಲ್ಲಿ ಮಿಂಚುತಿದೆ – ಸತೀಶ ಸೈಲ್
ಕಡಿಮೆ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಆನಂದಾಶ್ರಮ ಪ್ರೌಢಶಾಲೆಯಲ್ಲಿ ಎಕ್ಕುಂಡಿ ಜನ್ಮ ಶತಮಾನೋತ್ಸವ ಆಚರಣೆ