May 7, 2024

Bhavana Tv

Its Your Channel

ರಾಷ್ಟ್ರ ದ್ವಜಕ್ಕೆ ಅಪಮಾನ ಜಿಲ್ಲಾಧಿಕಾರಿಗಳಿಗೆ ದೂರು

ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮ ಪಂಚಾಯತದಲ್ಲಿ ರಾಷ್ಟ್ರ ದ್ವಜಕ್ಕೆ ಅಪಮಾನವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸರಕಾರಿ ಕಛೇರಿಗಳಲ್ಲಿ ಪ್ರತಿ ದಿನ ರಾಷ್ಟç ಧ್ವಜವನ್ನು ಹಾರಿಸಿ ಅದನ್ನು ಸಂಜೆ ೬ ಗಂಟೆಯ ಒಳಗೆ ಇಳಿಸಲಾಗುತ್ತದೆ, ಅದೇ ರೀತಿ ಕುದ್ರಿಗಿ ಗ್ರಾಮ ಪಂಚಾಯತ ಮುಂದೆ ಹಾರಿಸಿದ ದ್ವಜವನ್ನು ಅದೇ ದಿನ ಸಂಜೆ ೬ ಗಂಟೆಗೆ ಇಳಿಸದೆ ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿರುತ್ತಾರೆ. ಗುರುವಾರ ಹಾರಿಸಿದ ದ್ವಜವನ್ನು ಸಂಜೆ ಕೆಳಗೆ ಇಳಿಸಬೇಕಾಗಿತ್ತು, ಆದರೆ ಕುದ್ರಿಗಿ ಗ್ರಾಮ ಪಂಚಾಯತದವರು ದ್ವಜವನ್ನು ಇಳಿಸಲ್ಲೇ ಇಲ್ಲ. ಶುಕ್ರವಾರ ಸಾರ್ವಜನಿಕ ರಜೆ ಇರುವದರಿಂದ ಸಾರ್ವಜನಿಕರ ಗಮನಕ್ಕೆ ಬಂದಿದೆ, ಸಾರ್ವಜನಿಕರು ಪಂಚಾಯತ್ ಸಿಬ್ಬಂದಿಯವರು ನಿರ್ಲಕ್ಷ್ಯ ವಯಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ವಾಟ್ಸಪ್ಪ್ ಮೂಲಕ ದೂರು ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಕೋರೋನ ಲಸಿಕೆ ಪಡೆಯುವಾದಕ್ಕಾಗಿ ಪಂಚಾಯತ್ ಕಚೇರಿಯ ಅಂಗಳದಲ್ಲಿ ಬೆಳಿಗ್ಗೆ ೩ ಗಂಟೆಯಿAದ ಸಾಲಿನಲ್ಲಿ ಜನರು ಸೇರಿದ್ದರು. ಆ ಸಂದರ್ಭದಲ್ಲಿ ದ್ವಜವನ್ನು ಇಳಿಸದೆ ಇರುವುದನ್ನು ನೋಡಿ ಬೆಳಿಗ್ಗೆ ೬.೩೦ಕ್ಕೆ ಅಲ್ಲಿ ಬಂದ ಸಾರ್ವಜನಿಕರು ವಿಡಿಯೋ ಮತ್ತು ಫೋಟೋ ತೆಗೆದಿದ್ದಾರೆ.

ನಂತರ ೭ ಗಂಟೆಗೆ ತಾಲೂಕಾ ಪಂಚಾಯತ್ ಅಧಿಕಾರಿ(ಈಓ) ಗಮನಕ್ಕೆ ತಂದು ಅವರನ್ನು ಸ್ಥಳಕ್ಕೆ ಬರಲು ವಿನಂತಿಸಿಕೊAಡಿದದಾದ್ರು ಯಾರು ಸ್ಥಳಕೆ ಭೇಟಿ ಕೊಟ್ಟಿಲ್ಲ. ಪಂಚಾಯತ್ ಸದಸ್ಯರಾದ ಕಾಂಚನ ಸುಧಾಕರ ನಾಯ್ಕ ಕುದ್ರಿಗಿ ಗ್ರಾಮ ಪಂಚಾಯತ್ ಪಿಡಿಒ ಯವರಿಗೆ ಫೋನಿನ ಮೂಲಕ ಬರಲು ವಿನಂತಿಸಿದರೆ ವಿಷಯವನ್ನು ಅರಿತು ನನಗೆ ಆರೋಗ್ಯ ಏರು-ಪೆರು ಎಂಬ ಉತ್ತರ ಕೊಟ್ಟಾಗ, ಪಿಡಿಒ ರವರು ಫೋನಿನಲ್ಲಿ ಗ್ರಾಮಸ್ಥರ ಗಲಾಟೆ ಕೇಳೀದ ನಂತರ ಸ್ಥಳಕ್ಕೆ ಬಂದು ಯಾರ ಹತ್ತಿರನು ದ್ವಜದ ಬಗ್ಗೆ ಮಾತಾಡದೆ ೧೫ ನಿಮಿಷಗಳಲ್ಲಿ ನನಗೆ ತಾಲೂಕಾ ಪಂಚಾಯತ್ ಅಲ್ಲಿ ಕೆಲಸ ಇದೆ ಎಂದು ಹೊರಟರು ಎಂದು ದೂರುದಾರರು ತಿಳಿಸಿದ್ದಾರೆ.

ರಾಷ್ಟ್ರ ದ್ವಜಕೆ ಅಪಮಾನ ಮಡಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳಬೇಕು ಎಂದು ಸ್ಥಳೀಯರಾದ ಜೈವಂತ್ ಪೈ, ಗ್ರಾಮ ಪಂಚಾಯತ ಸದಸ್ಯರಾದ ಕಾಂಚನ ಸುಧಾಕರ್ ನಾಯ್ಕ, ಸಾವಿತ್ರಿ ಹಳ್ಳೆರ, ಶ್ರೀಪಾದ ಗೌಡ, ಗ್ರಾಮಸ್ಥರಾದ ಗಿರೀಶ್ ಎಸ್ ಕಾಣ್ಕೋಣ್ಕರ್, ಹನುಮಂತ ಹಳ್ಳೆರ್, ನಾಗರಾಜ್ ಹಳ್ಳೆರ್,ಆರ್ ವಿ ಕುದ್ರಿಗಿ, ವಿನೋದ್ ಪುರ್ಸು ನಾಯ್ಕ, ಸುಧಾಕರ್ ನಾಯ್ಕ, ದಿನೇಶ್ ಈಶ್ವರ್ ನಾಯ್ಕ, ರಾಘು ಹಳ್ಳೆರ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

error: