May 9, 2024

Bhavana Tv

Its Your Channel

ಟೊ೦ಕ ಸ್ವಚ್ಚತೆಗೆ ಖಾಸಗಿ ಕಂಪನಿಗೆ ಪತ್ರ ಬರೆದ ವಿವಾದ : ಮೀನುಗಾರರಿಂದ ಕಾಸರಕೋಡ ಗ್ರಾಮ ಪಂಚಾಯತಕ್ಕೆ ಮುತ್ತಿಗೆ

ಹೊನ್ನಾವರ ತಾಲ್ಲೂಕಿನ ಕಾಸರಕೋಡು ಗ್ರಾಮ ಪಂಚಾಯತದಿAದ ಹೊನ್ನಾವರ ಪ್ರೈವೇಟ್ ಕಂಪನಿಗೆ ಟೊ೦ಕ ೧ ಮತ್ತು ೨ ನೇ ಮಜರೆಯಲ್ಲಿ ಬರುವ ರಸ್ತೆಯಲ್ಲಿ ಅಡ್ಡವಾಗಿ ಬೆಳೆದ ಗಿಡ ಗಂಟಿಗಳನ್ನು ಕತ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಪತ್ರ ಬರೆದನ್ನು ವಿರೋಧಿಸಿ ಟೊ೦ಕ ಭಾಗದ ಮೀನುಗಾರರು ಗ್ರಾಮ ಪಂಚಾಯತಕ್ಕೆ ಮುತ್ತಿಗೆಹಾಕಿ ಧಿಕ್ಕಾರಕೂಗಿದ ಘಟನೆ ಸೋಮವಾರ ನಡೆದಿದೆ.

ಕಾಸರಕೋಡಟೊಂಕಾ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಸ್ಥಳೀಯ ಮೀನುಗಾರರು ವಿರೋಧಿಸುತ್ತಲೇಬಂದಿದ್ದಾರೆ. ಕಾಸರಕೋಡ ಗ್ರಾಮ ಪಂಚಾಯತ ಅನುಮತಿ ನೀಡಬಾರದು ಎಂದು ಒತ್ತಾಯಿಸುತ್ತಾ ಬಂದಿದ್ದಾರೆ. ಹೀಗಿದ್ದಾಗಿಯೂ ಟೊಂಕಾದ ಸ್ವಚ್ಚತೆ ಕುರಿತು ಅಧ್ಯಕ್ಷರು ಹೊನ್ನಾವರ ಪ್ರೆöÊವೆಟ್ ಕಂಪನಿಯವರಿಗೆ ಮನವಿ ಮಾಡಿರುವ ಬಗ್ಗೆ ವಿಷಯ ತಿಳಿದ ಟೊಂಕಾದ ಮೀನುಗಾರರು ಗ್ರಾಮ ಪಂಚಾಯತಕ್ಕೆ ಆಗಮಿಸಿ ವಿರೋಧ ವ್ಯಕ್ತ ಪಡಿಸಿದರು.
ಈಗಾಗಲೇ ವಾಣಿಜ್ಯ ಬಂದರು ಕಾಮಗಾರಿ ಗುತ್ತಿಗೆ ಪಡೆದ ಖಾಸಗಿ ಕಂಪನಿಗೆ ಸಂಬAಧ ಪಟ್ಟ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಹೀಗಿರುವಾಗ ನೀವು ಯಾವ ಆಧಾರದ ಮೇಲೆ ಖಾಸಗಿ ಕಂಪನಿಗೆ ಪತ್ರ ಬರೆದಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೆ ಸಮಯದಲ್ಲಿ ಮಾಧ್ಯಮದವರೊಂದಿಗೆ ಮೀನುಗಾರರ ಪರವಾಗಿ ಮಾತನಾಡಿದ ವಿವನ್ ಫರ್ನಾಂಡಿಸ್‌ರವರು ಕಾಸರಕೋಡ ವಾಣಿಜ್ಯ ಬಂದರು ಸಂಭAದಿಸಿದAತೆ ಹೈಕೋರ್ಟನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಿದ್ದರೂ ಕಾಸರಕೋಡ ಗ್ರಾಮ ಪಂಚಾಯತ ಅಧ್ಯಕ್ಷರು ಸ್ವಚ್ಚತೆ ಕುರಿತಂತೆ ಹೊನ್ನಾವರ ಪೋರ್ಟಕಂಪನಿಯವರಿಗೆ ಪತ್ರ ಬರೆದಿದ್ದು ಸರಿಯಲ್ಲಎಂದರು.
ಗ್ರಾಮ ಪಂಚಾಯತ ಸದಸ್ಯ ಜಗದೀಶ ತಾಂಡೇಲ ಮಾತನಾಡಿ ನಾವು ಈ ಹಿಂದೆ ಸಂಬoಧ ಪಟ್ಟ ಇಲಾಖೆಗೆ ಪತ್ರ ಬರೆಯಲು ಠರಾವು ಮಾಡಿದ್ದೇವೆ. ಖಾಸಗಿ ಕಂಪನಿಗೆ ಪತ್ರ ಬರೆದ ವಿಚಾರ ನಮ್ಮನ್ನು ಮರೆಮಾಚಿ ನಡೆದಿದೆ ಎಂದರು.

ಗ್ರಾಮ ಪಂಚಾಯತ ಅಧ್ಯಕ್ಷ ಮಂಜುಗೌಡ ಮಾತನಾಡಿ ಪಂಚಾಯತ ವ್ಯಾಪ್ತಿಯ ಅಭಿವೃದ್ಧಿ ದ್ರಷ್ಟಿಯಿಂದ ಕೆಲವೊಂದು ಆಗಬೇಕಾದ ಕೆಲಸದ ಬಗ್ಗೆ ಎಲ್ಲಾ ಇಲಾಖೆಗೂ ಪತ್ರ ಬರೆದಿದ್ದೇವೆ. ಅದರಂತೆ ಖಾಸಗಿ ಕಂಪನಿಗೂ ಬರೆದಿದ್ದೇವೆ. ಅಲ್ಲಿಯ ಜನರಿಗೆ ತೊಂದರೆಯಾದರೆ ಖಾಸಗಿ ಕಂಪನಿಗೆ ನೀಡಿದ ಪತ್ರ ಹಿಂದಕ್ಕೆ ಪಡೆಯುತ್ತೇವೆಎಂದು ಹೇಳಿದರು.

ಈ ಸಂದರ್ಭದಲ್ಲಿಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ತಾಂಡೇಲ್, ಪ್ರೀತಿ ತಾಂಡೇಲ್, ಲಲಿತಾ ತಾಂಡೇಲ್, ಮೀನುಗಾರರ ಮುಖಂಡರಾದ ಗಣಪತಿ ತಾಂಡೇಲ, ವಿವನ್ ಫರ್ನಾಂಡೀಸ್, ರಾಜು ತಾಂಡೇಲ್ ಟೊಂಕ, ಭಾಸ್ಕರ ತಾಂಡೇಲ್, ಮುಂತಾದವರು ಉಪಸ್ಥಿತರಿದ್ದು, ಅಧ್ಯಕ್ಷರಿಗೆ,ಸದಸ್ಯರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ತರಾಟೆಗೆತೆಗೆದುಕೊಂಡರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: