May 6, 2024

Bhavana Tv

Its Your Channel

ಡಾಕ್ಟರ್ ಎನ್. ಆರ್ .ನಾಯಕ ರವರಿಗೆ ಸನ್ಮಾನ

ಹೊನ್ನಾವರ:-ಬೆಟಗೇರಿ ಕೃಷ್ಣ ಶರ್ಮರವರ ಪ್ರಶಸ್ತಿಗೆ ಪುರಸ್ಕೃತರಾದ ಡಾಕ್ಟರ್ ಎನ್. ಆರ್ .ನಾಯಕ ರವರಿಗೆ ಜಿಲ್ಲಾ ಮತ್ತು ತಾಲೂಕ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎನ್. ಆರ್. ನಾಯಕ ರವರು ಪ್ರಶಸ್ತಿ ಸಂತೋಷ ತಂದಿದೆ. ಕನ್ನಡ ಉಳಿಸಿಕೊಂಡು ಬಂದವರು ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ತರು ಹಾಗಾಗಿ ಅಂತವರಿಗೂ ಮುಂದಿನ ದಿನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ನೋಂದಣಿಗೆ ಅವಕಾಶ ಮಾಡಿಕೊಡಬೇಕು ಎಂದರು.

ರಾಜ್ಯದಲ್ಲಿ ಕನ್ನಡ ಉಳಿಯಬೇಕು, ಬೇರೆಯವರು ಇಲ್ಲಿ ಬಂದರೆ ಕನ್ನಡ ಕಲಿತು ಮಾತನಾಡಲಿ, ಅವರ ಊರಿಗೆ ಹೋದಾಗ ಅವರ ಸಂಸ್ಕೃತಿ, ಭಾಷೆ ಬಳಸಲಿ, ಇಲ್ಲಿ ಇದ್ದಾಗ ಮಾತ್ರ ಕನ್ನಡ ಬಳಸುವಂತಾಗ ಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ ನಮ್ಮೆಲ್ಲರ ಗುರುಗಳು, ಜನಪದ ಜ್ಞಾನಕೋಶ ಇಂತಹ ಮಹಾನ್ ಸಾಧಕರಿಗೆ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಸುಮುಖಾನAದ ಜಲವಳ್ಳಿ ಮಾತನಾಡಿ ಸಾಹಿತ್ಯದ ತಿರುಳನ್ನು ನಮಗೆ ದಾರೆ ಎರೆದು ಬೆಳೆಸಿದ್ದಾರೆ. ಡಾ. ನಾಯಕರಿಗೆ ಪ್ರಶಸ್ತಿ ಸಿಕ್ಕಿರುವುದು ಅವರ ಸಾಧನೆಗೆ ಸಿಕ್ಕ ಗೌರವ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್. ಡಿ. ಹೆಗಡೆ, ಹೊನ್ನಪ್ಪಯ್ಯ ಗುನಗ, ಭವಾನಿಶಂಕರ ನಾಯ್ಕ, ಎಂ.ಜಿ ನಾಯ್ಕ ಸುಧೀಶ ನಾಯ್ಕ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾದ ಭಾವನಾ ವಾಹಿನಿ ಮುಖ್ಯಸ್ಥ ಭವಾನಿಶಂಕರ್ ರವರನ್ನು ಸಾಹಿತ್ಯ ಪರಿಷತ್ ಪರಾವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮ ದಲ್ಲಿ ಹೊನ್ನಾವರ ಸಾಹಿತ್ಯ ಪರಿಷತ ಅಧ್ಯಕ್ಷ ಎಸ್ ಎಚ್ ಗೌಡ, ಜಿಲ್ಲಾ ಗೌರವ ಕಾರ್ಯದರ್ಶಿ ಪಿ ಆರ್ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಎಂ ಜಿ ನಾಯ್ಕ ,ಸುಧೀಶ ನಾಯ್ಕ, ಗಜಾನನ ಜಿ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು..
ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: