May 10, 2024

Bhavana Tv

Its Your Channel

ನಾಳೆ  ಕ್ರೈಸ್ತರ ದೋಣಿ ಹಬ್ಬ

ಹೊನ್ನಾವರ:- ಸಂತ ಜೊನ ಬ್ಯಾಪ್ತಿಸ್ಟ್ ಈ ಸಂತರು ಪರಮ ಯೇಸು ಕ್ರಿಸ್ತರು ಈ ಭೂಮಿಯಲ್ಲಿ ಬರುವ ಪೂರ್ವದಲ್ಲಿ ಯೊರ್ದಾನ ಹೊಳೆಯಲ್ಲಿ ಅವರಿಂದ ಜನರು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. ಕರ್ತನ ದಾರಿಯನ್ನು ಸಿದ್ಧಮಾಡಿರಿ. ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುತ್ತಿದ್ದರು. ಈ ಶಬ್ಧವದೆ ಎಂಬುದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವರೆ ಸ್ನಾನಿಕನಾದ ಯೋಹಾನನ್ನು ಅಥವಾ ಜೊನ್ ಬ್ಯಾಪ್ಟಿಸ್ಟ್ ಎನ್ನುತ್ತೇವೆ. ಸತ್ಯದ ಕಡೆಗೆ ಸಹನೆ ಹಾಗೂ ತಾಳ್ಮೆವುಳ್ಳವರು. ಇವರಿಂದಲೇ ಪ್ರಭು ಯೇಸು ಕ್ರಿಸ್ತರು ಯೊರ್ದಾನ್ ಹೊಳೆಯಲ್ಲಿ ಪವಿತ್ರ ದಿಕ್ಷಾಸ್ನಾನ ಪಡೆದುಕೊಂಡರು. ಕ್ರೆöÊಸ್ತರ ಪವಿತ್ರ ಸಭೆ ಇವರ ಜನ್ಮದಿನ ಅತಿ ವಿಜೃಂಭಣೆಯಿAದ ಆಚರಿಸುತ್ತಾರೆ.

ಜೂನ್ 23 ರಂದು ಪ್ರತಿ ಚರ್ಚಿನಲ್ಲಿ ವಿಶೇಷವಾದ ಪೂಜೆಯ ಜೊತೆಗೆ ಹಬ್ಬದ ವಾತಾವರಣ ಎಲ್ಲರ ಮನೆಯಲ್ಲಿ ವಿಶೇಷವಾಗಿರುತ್ತದೆ. ಸ್ಥಳೀಯ ಸಹೋದರರು ಹೇಳುವ ಪ್ರಕಾರ ಈ ಹಬ್ಬದಂದು ಮಳೆಗಾಲದ ಅರ್ಧ ಮಳೆಗಾಲ ಮುಕ್ತಾಯವಾಯಿತು ಎಂಬ ವಾಡಿಕೆವಿದೆ. ಆದರೆ ಅರ್ಧ ಮಳೆಗಾಲ ಮುಕ್ತಾಯವಲ್ಲ. ಸ್ನಾನಿಕ ಯೋಹಾನನ ಜನ್ಮದಿನಾಚರಣೆಯು ಮಳೆಗಾಲದಲ್ಲಿ ಆಚರಿಸುತ್ತಾರೆ. ಇದರ ಅಂಗವಾಗಿ ಕರಾವಳಿ ಪ್ರದೇಶದಲ್ಲಿ ಆ ದಿನ ನಿರಾಟದ ಹಬ್ಬ ಎಂಬ ಉಲ್ಲೇಖವಾಗಿರುತ್ತದೆ ಇದು ಸತ್ಯವಾಗಿದೆ. ಈ ಭಾಗದ ಜನರು ವಿಶೇಷವಾಗಿ ಹೊಳೆಯಲ್ಲಿ ಡಿಂಗಿ ಹಾಗೂ ದೋಣಿಯಲ್ಲಿ ಧ್ವನಿವರ್ಧಕ ಬಳಸಿ ತಮ್ಮ ಸಂತೋಷ ವ್ಯಕ್ತಪಡಿಸುತ್ತಾರೆ. ಅದರಂತೆ ಬಹಳ ವರ್ಷದಿಂದ ಆಯಾ ಚರ್ಚಿನಲ್ಲಿ  ಕ್ರೈಸ್ತರರಿಗೆ ದೋಣಿ ಚಲಿಸುವ ಸ್ಪರ್ಧೆ ಇಟ್ಟುಕೊಳ್ಳುತ್ತಾರೆ ಹಾಗೂ ಈ ಸಂಸ್ಕೃತಿ ಈಗಲೂ ಕೆಲವು ಕಡೆ ನಾವು ನೋಡುತ್ತೇವೆ. ಈ ಸಂಸ್ಕೃತಿ ಐದುವರೆ ದಶಕಗಳ ಹಿಂದೆ ದೈವಾದಿನ ರೇ|ಫಾ| ರೊನಾಲ್ಡ್ ಮಿನೇಜಸ್, ಗುಂಡಿಬಾಳ ಇವರ ನೇತೃತ್ವದಲ್ಲಿ ನಡೆದು ಬಂದ ಸಂಗತಿ ಈಗಲೂ ಸಹ ಕಾಣಬಹುದು. ನಾವು ನೀರಿನಲ್ಲಿ ಬೆಂಕಿಯಲ್ಲಿ ಹಾಗೂ ಗಾಳಿಯಲ್ಲಿ ನಮ್ಮ ಪ್ರದರ್ಶನ ಅತಿರೇಗಕ್ಕೆ ತೆಗೆದುಕೊಂಡು ಹೋಗಬಾರದು ನಮ್ಮ ಪ್ರತಿಭೆ ಹೊರ ಚೆಲ್ಲುವಾಗ ದೇವರ ಕೃಪಾಶೀರ್ವಾದ ಹಿರಿಯರ ಮಾರ್ಗದರ್ಶನ ಅತಿ ಮುಖ್ಯವಾದುದು. ಕೆಲವೊಂದು ಸಲ ನಮ್ಮ ಮೊಜು ಅತಿಯಾದ ಆತ್ಮವಿಶ್ವಾಸಕ್ಕೆ ಧಕ್ಕೆಯಾದಾಗ ನಮ್ಮ ಜೀವಕ್ಕೆ ನೋವುಂಟಾಗುತ್ತದೆ. ಆದ ಇಂತಹ ಕಾರಣದಿಂದ ಕೆಲವು ಕಡೆಯಲ್ಲಿ ದೋಣಿ ಸ್ಪರ್ಧೆ ಸ್ಥಗಿತವಾಗಿದೆ. ದೇವರ ಮೇಲೆ ವಿಶ್ವಾಸವಿಟ್ಟು ನಮ್ಮ ಸಂಸ್ಕೃತಿ ಮುಂದುವರಿಸಿಕೊAಡು ಹೋಗಬೇಕು. ಸಮುದಾಯದ ಜನರಿಗೆ ಮನರಂಜನೆ ನೀಡುವಗೋಸ್ಕರ ಕಳೆದ 2016ನೇ ಇಸ್ವಿಯಿಂದ ಕ್ರಿಯಾತ್ಮಕವಾಗಿ ಚಿಂತಿಸುವ ಉತ್ಸಾಹಿ ಹಡಿನಬಾಳ 4 ಸ್ಥಳೀಯ ಕ್ರೆöÊಸ್ತರಾದ ಪ್ರಕಾಶ್ ಡಾಯಸ್, ಮರಿಯಾಣ ಮಿರಾಂದ್, ಹೆಂಡ್ರಿಕ ರೊಡ್ರಿಗಸ್ ಹಾಗೂ ಸುರೇಶ ಲೋಪಿಸ್ ಇವರು ತಾಲೂಕ ಮಟ್ಟದ ದೋಣಿ ಸ್ಪರ್ಧೆ ಅಚ್ಚುಕಟ್ಟಾಗಿ ಶಿಸ್ತಿನಿಂದ ಹಾಗೂ ಸಂಬAಧಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದು ಯೋಗ್ಯವಾದ ಬಂದೋಬಸ್ತನೊAದಿಗೆ ಈ ಹಬ್ಬದ ಸವಿ ಎಲ್ಲಾ ಸಮುದಾಯದವರಿಗೆ ನೀಡುತ್ತಿದ್ದಾರೆಂಬುದು ಶ್ಲಾಘನೆಯಾಗಿದೆ. ಕಾರ್ಯಕ್ರಮ ಸಂಘಟಿಸುವುದು ಎಷ್ಟೋ ಮುಖ್ಯವೋ ಅಷ್ಟೆ ಜವಾಬ್ದಾರಿ ಮುಖ್ಯವಾದದ್ದು. ಸಂತ ಜೋನ್ ಬ್ಯಾಪ್ಟಿಸ್ಟರವರು ನಡೆದು ಬಂದ ದಾರಿ. ಅವರಿಂದ ದಿಕ್ಷಾಸ್ನಾನ ಪಡೆದ ಯೇಸುಸ್ವಾಮಿಯ ಕೃಪಾಶೀರ್ವಾದ ಎಲ್ಲಾ ಕ್ರೆöÊಸ್ತರ ಮೇಲೆ ಬೀಳಲಿ. ಪ್ರತಿವರ್ಷ ಕ್ರೆöÊಸ್ತರ ದೋಣಿ ಹಬ್ಬ ಎಲ್ಲರ ಪ್ರಶಂಸೆಗೆ ಕಾರಣವಾಗಲಿದೆ.

error: