May 10, 2024

Bhavana Tv

Its Your Channel

ನ್ಯೂ ಇಂಗ್ಲಿಷ್ ಸ್ಕೂಲ್, ಹೊನ್ನಾವರದಲ್ಲಿ ಸದ್ಭಾವನಾ ಪ್ರತಿಜ್ಞಾ ಸ್ವೀಕಾರ.

ಹೊನ್ನಾವರ:*-ಇಲಾಖಾ ಸೂಚನೆಯ ಪ್ರಕಾರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಪ್ರಯುಕ್ತ ಅವರ ಆದರ್ಶ ಪಾಲನೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜಾತಿ, ಮತಧರ್ಮ, ಭಾಷೆ, ಪ್ರಾದೇಶಿಕತೆಯನ್ನು ಮೀರಿ, ಭಾರತೀಯತೆಯನ್ನು ಮನದಲ್ಲಿ ಮೂಡಿಸಿಕೊಳ್ಳುವ ಹಾಗೂ ಸತ್ಯಅಹಿಂಸೆ, ಸಾಂವಿಧಾನಿಕ ಮೌಲ್ಯಗಳನ್ನು ರೂಢಿಸಿ ಕೊಳ್ಳುವ ಸಂಕಲ್ಪ ಕೈಗೊಂಡರು. ವಿದ್ಯಾರ್ಥಿ ಸಂಘದ ಕು/ ಎಮ್. ಜಿ. ಕಾವ್ಯ ಪ್ರತಿಜ್ಞೆ ಬೋಧಿಸಿದಳು, ಮುಖ್ಯಾಧ್ಯಾಪಕರು ಮತ್ತು ಎಲ್ಲ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: