
ಹೊನ್ನಾವರ ತಾಲೂಕಿನ ಬಾಳೆಮೆಟ್ಟು ಗ್ರಾಮದ ಮರಾಠಿ ಸಮುದಾಯದವರ ಹರಿಸೇವಾ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಭಾನುವಾರ ಸಂಪನ್ನಗೊOಡಿತು.
ಕುಟುAಬಗಳ ಮತ್ತು ಗ್ರಾಮದಲ್ಲಿನ ತೊಂದರೆ ತಾಪತ್ರಯಗಳು ಪರಿಹಾರಗೊಂಡು ನೆಮ್ಮದಿ ನೆಲೆಗೊಂಡು ಜನರು ಸುಖ ಜೀವನ ನಡೆಸಬೇಕು ಎಂಬ ಆಶಯದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
ದೇವರ ಹೇಳಿಕೆಯ ಹಿನ್ನೆಲೆಯಲ್ಲಿ ಬಾಳೆಮೆಟ್ಟು ಗ್ರಾಮದ ಮರಾಠಿ ಸಮುದಾಯದವರು ಕಳೆದ ಮೂರು ತಿಂಗಳ ಹಿಂದೆ ವ್ರತವನ್ನು ಪ್ರಾರಂಭ ಮಾಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು.
ನಂತರ ವೆಂಕಟಾಪುರದ ದೇವರಲ್ಲಿ ಪ್ರಸಾದ ಇಟ್ಟು ಅಲ್ಲಿ ಒಪ್ಪಿಗೆ ನೀಡಿದ ನಂತರ ದೇವಕಾರ್ಯ ಮಾಡಲಾಯಿತು. ಸಂಪ್ರದಾಯದAತೆ ಚಪ್ಪರ ಮತ್ತು ಅಂತರ ಚಪ್ಪರ ಹಾಕಿದರು. ಬಾಳೆಕಾಯಿ ಹಣ್ಣು ಮಾಡಲು ಇಡಲಾಯಿತು. ದೇವರ ಹೇಳಿಕೆಯಂತೆ ತೀರ್ಥಯಾತ್ರೆಯನ್ನು ಕೈಗೊಂಡ ಈ ಸಮುದಾಯದವರು
ಇಡಗುಂಜಿ, ಆನೆಗುಡ್ಡ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ತಿರುಪತಿ, ಕಾಳಹಸ್ತಿ, ಮಂತ್ರಾಲಯ, ಸಿರಸಿ, ಮಂಜುಗುಣಿ ದೇವಾಲಯಗಳ ದರ್ಶನ ಮಾಡಿದರು.
ಯಾತ್ರೆ ಕೈಗೊಂಡು ಗ್ರಾಮಕ್ಕೆ ಆಗಮಿಸಿದ ಗ್ರಾಮಸ್ಥರು ಸಂಪ್ರದಾಯದAತೆ ಕೆಲವು ದಿನಗಳ ಕಾಲ ಬಯಲಿನಲ್ಲಿ ಚಪ್ಪರ ನಿರ್ಮಿಸಿ ಕಲಶವನ್ನು ಇಟ್ಟು ಅಲ್ಲಿಯೇ ವಾಸವಾಗಿದ್ದರು. ನಿರಂತರ ದೇವರ ಆರಾಧನೆ ಮಾಡಿದರು.
ಶನಿವಾರ ಬಾಳೆಮೆಟ್ಟು ಮತ್ತು ಹೊರ ಊರಿನ ಸಾವಿರಾರು ಜನರು ಸೇರಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಸಿದರು. ದರ್ಶನಪಾತ್ರಿಗಳಿಗೆ ದೇವರ ಆವಾಹನೆಯಾಯಿತು. ದರ್ಶನಪಾತ್ರಿಯೊಂದಿಗೆ ಭಕ್ತರು ಕುಣಿಯುತ್ತ ಬಯಲಿನಲ್ಲಿದ್ದ ಕಲಶವನ್ನು ಮತ್ತು ದೇವರನ್ನು ಮರಾಠಿ ಸಮಾಜ ಮುಖಂಡ ವಿಠ್ಠಲ ಗೌಡ ಅವರ ಮನೆಯಲ್ಲಿ ನಿರ್ಮಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. “ಗೋವಿಂದ” ನಾಮ ಸ್ಮರಣೆಯೊಂದಿಗೆ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಹಣ್ಣುಕಾಯಿ ಸಿಯಾಳ ಸೇವೆ ಸಲ್ಲಿಸಲಾಯಿತು. ಹರಿನಾಮ ಸ್ಮರಣೆ ಮಾಡುತ್ತ ಪೂಜಿಸಲಾಯಿತು.
ಮರಾಠಿ ಸಮಾಜ ಮುಖಂಡ ವಿಠ್ಠಲ ಗೌಡ ಮಾತನಾಡಿ . “ನಮ್ಮ ಸಮಾಜದಲ್ಲಿ ಉನ್ನತಿಯನ್ನು ಸಾಧಿಸುವ ಉದ್ದೇಶದಿಂದ ವಿಶೇಷವಾದ ಧಾರ್ಮಿಕ ಆಚರಣೆಯನ್ನು ನಡೆಸಲಾಗುತ್ತಿದೆ. ಈ ಮೊದಲು 14 ವರ್ಷಗಳ ಹಿಂದೆ ಹರಿಸೇವಾ ಕಾರ್ಯಕ್ರಮ ಆಚರಿಸಲಾಗಿತ್ತು. ಇಂದು ಶ್ರದ್ದಾಭಕ್ತಿಯಿಂದ ದೇವತಾ ಕಾರ್ಯಕ್ರಮವನ್ನು ನಡೆಸಲಾಗಿದೆ. ದೇವರು ಸಂತುಷ್ಟಗೊOಡು ನಮ್ಮನ್ನೆಲ್ಲ ಹರಸುತ್ತಾನೆ ಎಂಬ ನಂಬಿಕೆಯಿAದ ಈ ಆಚರಣೆಯನ್ನು ನಡೆಸಲಾಗಿದೆ.”ಎಂದರು.

More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ