May 2, 2024

Bhavana Tv

Its Your Channel

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡ್ ನಲ್ಲಿ ಅದ್ದೂರಿಯಾಗಿ ಕಲಿಕಾ ಹಬ್ಬ ಆಚರಣೆ

ಹೊನ್ನಾವರ: ದಿನಾಂಕ 30.1.2023 ರಿಂದ 31.01.20 23ರ ವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡ್ ನಲ್ಲಿ ಅದ್ದೂರಿಯಾಗಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು.

ಶಿಕ್ಷಣ ಇಲಾಖೆ ಆದೇಶದಂತೆ ಮಕ್ಕಳ ಕಲಿಕಾ ಚೇತರಿಕೆಯ ಸಲುವಾಗಿ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಲು ಆದೇಶ ನೀಡಿತ್ತು ಆದ್ದರಿಂದ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಬರುವ 13 ಶಾಲೆಗಳ ಮಕ್ಕಳನ್ನು ಒಗ್ಗೂಡಿಸಿ ಅದ್ದೂರಿಯಾಗಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು, ಕಲಿಕಾ ಹಬ್ಬದ ಉದ್ಘಾಟನೆಯನ್ನು ಕುಂಭ ಕಳಶದ ಮೆರವಣಿಗೆಯ ಮುಖಾಂತರ ತಾಲೂಕ ವೈದ್ಯಾಧಿಕಾರಿಗಳಾದಂತಹ ರಾಜೇಶ್ ಕಿಣಿ ಅವರು ಚಾಲನೆ ನೀಡಿದರು ಅವರ ಜೊತೆಗೆ ಶಾಲೆಯ ಎಸ್ ಟಿ ಎಂ ಸಿ ಅಧ್ಯಕ್ಷರಾದ ರಾಮಚಂದ್ರ ಮೇಸ್ತ, ಸುದೀಶ್ ನಾಯ್ಕ, ಸಿಆರ್‌ಪಿ ರಮೇಶ್ ಮಲ್ಲಪ್ಪ , ಪ್ರಮೋದ್ ನಾಯ್ಕ, ಗ್ರಾಂ ಪಂಚಾಯತ್ ಅಧ್ಯಕ್ಷರಾದಂತಹ ಮಂಜು ಗೌಡ ಹಾಗೂ ಇನ್ನಿತರ ಗ್ರಾಂ ಪಂಚಾಯತ್ ಸದಸ್ಯರು ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಊರ ನಾಗರಿಕರು ಶಾಲಾ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಶಾಲಾ ವಿದ್ಯಾರ್ಥಿಗಳ ಪಾಲಕರು ಶಿಕ್ಷಕರು ಸಮನ್ವಯ ಸಮಿತಿಯ ಸದಸ್ಯರುಗಳು ಸರ್ವರು ಹಾಜರಿದ್ದರು.

error: