December 21, 2024

Bhavana Tv

Its Your Channel

ಹೊನ್ನಾವರದ ಕಾಸರಕೋಡ ಟೊ೦ಕಾದಲ್ಲಿ ಲೈಟ್ ಫಿಶಿಂಗ್ ನಿಷೇದ ಮಾಡಲು ಕ್ರಮಕ್ಕೆ ಮುಂದಾದಾಗ ಮೀನುಗಾರರ ತಡೆ

ಹೊನ್ನಾವರ : ಶುಕ್ರವಾರ ಹೊನ್ನಾವರದ ಕಾಸರಕೋಡ ಟೊ೦ಕಾದಲ್ಲಿ ಲೈಟ್ ಫಿಶಿಂಗ್ ನಿಷೇದ ಮಾಡಲು ಕ್ರಮಕ್ಕೆ ಮುಂದಾದಾಗ ಮೀನುಗಾರರು ತಡೆ ಒಡ್ಡಿದ ಘಟನೆ ನಡೆಯಿತು.
ಜಿಲ್ಲೆಯ ಸಮುದ್ರ ವ್ಯಾಪ್ತಿಯಲ್ಲಿ ಬೆಳಕು ಮೀನುಗಾರಿಕೆಯನ್ನು ( ಲೈಟ್ ಫಿಶಿಂಗ್ ) ಬಂದ್ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ಕರಾವಳಿಯ ಮೀನುಗಾರರ ಹಿತರಕ್ಷಣಾ ಸಂಘವು ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ನೀಡಿ, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲರ್ ನಿಷೇಧವಿದ್ದಾಗಲೂ ಕಾನೂನು ಉಲ್ಲಂಘಿಸುವ ಬೋಟ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹಾಗೂ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಸಿದ್ದರು.

ಕಾಸರಕೋಡ ಟೊ೦ಕಾ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು, ಕರಾವಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರು, ಹೊನ್ನಾವರ ಪೊಲೀಸ್ ಠಾಣೆಯ ಪಿ. ಎಸ್. ಐ ರವರು ಲೈಟ್ ಫಿಶಿಂಗಗೆ ಅಳವಡಿಸಿದ ಜನರೇಟರ್ ಲೈಟ್ ತೆರವುಗೊಳಿಸಲು ಮುಂದಾದಾಗ ಸ್ಥಳೀಯ ಕಾರ್ಮಿಕರ ಸಂಘಟನೆ, ಬೋಟ್ ಮಾಲಕರ ಸಂಘಟನೆ ಮತ್ತು ಮೀನುಗಾರರ ನಡುವೆ ವಾಗ್ವಾದ ನಡೆಯಿತು.

ಸ್ಥಳೀಯ ಮೀನುಗಾರರು ಮೀನುಗಾರಿಕೆ ಜಂಟಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗು ಗೋವಾ ರಾಜ್ಯದ ಮೀನುಗಾರರು ಪಾಲಿಸುವ ಕ್ರಮವನ್ನು ನಮ್ಮ ಹೊನ್ನಾವರ ಮೀನುಗಾರರು ಪಾಲಿಸುತ್ತೇವೆ. ಈಗ ಸದ್ಯದ ಮಟ್ಟಿಗೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಕೊಟ್ಟು ೪ ದಿನಗಳ ಕಾಲ ಲೈಟ್ ಫಿಶಿಂಗ ಬ೦ದ ಮಾಡುತ್ತೇವೆ. ಅಷ್ಟರಲ್ಲಿ ಉಳಿದೆಲ್ಲ ಕಡೆಯಲ್ಲಿಯೂ ಲೈಟ್ ಫಿಶಿಂಗ್ ಬಂದ ಮಾಡಿ, ಎಲ್ಲಾ ಕಡೆಯಲ್ಲಿಯು ಬಂದಾದಲ್ಲಿ ನಾವು ಕೂಡ ಬಂದ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರಾವಳಿ ಮೀನುಗಾರರ ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಶ್ ತಾಂಡೇಲ್, ಕಾರ್ಯದರ್ಶಿ ರಾಜು ತಾಂಡೇಲ್, ಬೋಟ್ ಮಾಲೀಕರ ಅಧ್ಯಕ್ಷ ಅಮಜಾ ಪಟೇಲ್, ಅಬ್ಬಾಸ್ ಸಾಬ್ ಟ್ರಾಲ್ ಬೋಟ್ ಸಂಘದ ಅಚ್ಚಾ ಸಾಬ್, ಸ್ಥಳೀಯ ಮೀನುಗಾರ ಜಗದೀಶ್ ತಾಂಡೇಲ್ ಮೀನುಗಾರ ಕಾರ್ಮಿಕರು, ಮಾಲಕರು ಹಾಜರಿದ್ದರು.

error: