July 14, 2024

Bhavana Tv

Its Your Channel

ಮೀನುಗಾರರಿಗೆ ಪಟ್ಟಣದ ಬಂದರ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ

ಹೊನ್ನಾವರ ತಾಲೂಕಿನ ಗ್ರಾಮಾಂತರ ಪ್ರದೇಶದ ಮೀನುಗಾರರಿಗೆ ಪಟ್ಟಣದ ಬಂದರ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು. ಮೀನು ವ್ಯಾಪಾರಕ್ಕೆ ವಿರೋಧಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ಭದ್ರತೆ ನೀಡಬೇಕು ಎಂದು ಅಗ್ರಹಿಸಿ ತಾಲೂಕಿನ ಮಂಕಿ, ಕರ್ಕಿ, ಸೇರಿದಂತೆ ಇನ್ನುಳಿದ ಗ್ರಾಮದ ಮೀನು ವ್ಯಾಪಾರಸ್ಥರು ಶುಕ್ರವಾರ ತಹಶಿಲ್ದಾರ ರವರಿಗೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮತ್ತು ಪೋಲಿಸ್ ವೃತ ನಿರಿಕ್ಷಕರಿಗೆ ಮನವಿ ಸಲ್ಲಿಸಿದರು.

ಸಾಂಪ್ರದಾಯಿಕ ಮೀನುಗಾರಿಕೆ ಮಾಡುವ ಖಾರ್ವಿ, ಹರಿಕಂತ್ರ ಅಲ್ಲದೇ ಮುಸ್ಲಿಂ ಸಮುದಾಯದ ಮೀನುಗಾರರು ತಾಲೂಕಿನ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಾ ಬಂದಿರುತ್ತೇವೆ. ನಾವು ಮೀನುಗಾರಿಕೆ ನಡೆಸಿ, ಹಿಡಿದ ಮೀನುಗಳನ್ನು ಹೊನ್ನಾವರ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡಲು ಸ್ಥಳೀಯ ಮೀನುಗಾರರು ವಿರೋಧಿಸುತ್ತಿದ್ದಾರೆ. ಅಲ್ಲದೇ, ನಾವು ತಂದ ಮೀನನ್ನು ಅವರು ಹೇಳಿದ ಕನಿಷ್ಠ ಬೆಲೆಯಲ್ಲಿ ಅವರಿಗೆ ಕೊಡಬೇಕೆಂದು ಷರತ್ತನ್ನು ಹಾಕುತ್ತಿದ್ದಾರೆ. ಮೀನು ಮಾರಲು ಬಂದಾಗ ನಮ್ಮ ಮಹಿಳೆಯರನ್ನು ಹಾಗೂ ಪುರುಷರನ್ನು ಅವಾಚ್ಯವಾಗಿ ಬೈಯುವುದಲ್ಲದೇ ಹೊಡೆದಾಟಕ್ಕೆ ಬರುತ್ತಾರೆ. ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಕುಳಿತು ಮೀನು ವ್ಯಾಪಾರ ಮಾಡಲು ಸಹ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಮೀನುಗಾನುಗಾರರು ತಹಶಿಲ್ದಾರ ಅವರಿಗೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮತ್ತು ಪೋಲಿಸ್ ವೃತ ನಿರಿಕ್ಷಕರಿಗೆ ಮನವಿ ಸಲ್ಲಿಸಿದರು. ಮನವಿಯನ್ನು ತಹಶಿಲ್ದಾರ ರವಿರಾಜ ದಿಕ್ಷಿತ್, ಪಟ್ಟಣ ಪಂಚಾಯತ ಮುಖ್ಯಾಧಿಕಾಗಿ ಪ್ರವೀಣಕುಮಾರ ಮನವಿ ಸ್ವೀಕರಿಸಿದರು,

ಮನವಿ ಸಲ್ಲಿಸಿದ ಬಳಿಕ ಮಾದ್ಯಮದವರೋಂದಿಗೆ ಮೀನುಗಾರರಾದ ನಾಗರಾಜ ಖಾರ್ವಿ ಮಾತನಾಡಿ ಮೀನುಗಾರಿಕೆ ಕುಲಕಸಬು ಆಗಿದೆ. ಇದೇ ಸ್ಥಳದಲ್ಲಿ ಈ ಹಿಂದಿನಿAದಲೂ ಮಾರಾಟ ಮಾಡುತ್ತಿದ್ದು, ಇತ್ತೀಚಿಗೆ ಮೀನನ್ನು ಹೊಳೆಗೆ ಎಸೆದು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡುವುದು ಮಾಡುತ್ತಿದ್ದಾರೆ. ಈ ಸಂಬದ ಅಧಿಕಾರಿಗೆ ಮನವಿ ಮೂಲಕ ಮಾಹಿತಿ ನೀಡಲಾಗಿದೆ ಎರಡು ದಿನಕಾಲವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಮಾರಾಟಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಮೀನುಗಾರ ಅಣ್ಣಪ್ಪ ಖಾರ್ವಿ ಮಾತನಾಡಿ ಹಲವು ವರ್ಷದಿಂದ ಮಾರಾಟ ಮಾಡುತ್ತಿದ್ದು, ಏಕಾಏಕಿ ಮಾರಾಟ ಮಾಡಲು ಅವಕಾಶ ಇಲ್ಲ ಎಂದರೆ ಹೇಗೆ. ಸಾಲ ಮಾಡಿ ದೋಣಿ ಖರೀದಿ ಮಾಡಿ ಕಂಗಾಲಾಗಿದ್ದೇವೆ. ನ್ಯಾಯಕ್ಕಾಗಿ ಅಧಿಕಾರಿಗಳಿಗೆ ಜನಪ್ರತಿನಿಧಿಗೆ ಮನವಿ ಮಾಡುತ್ತಿದ್ದೇವೆ.

ಮೀನುಗಾರ ಮಹಿಳೆ ಲಲಿತಾ ಖಾರ್ವಿ ಮಾತನಾಡಿ ನಾನು ೪೨ ವರ್ಷದಿಂದ ಮಾರಾಟ ಮಾಡಿ ಈಗ ಬೇಡ ಎಂದರೆ ಎಲ್ಲಿ ಹೋಗಬೇಕು. ಹಲ್ಲೆ ಮಾಡಿ ನಿಂದಿಸಲಾಗುತ್ತಿದೆ. ನಮಗೂ ವ್ಯಾಪಾರಕ್ಕೆ ಅನುಮತಿ ನೀಡಿ ಎಂದು ಮೀನುಗಾರ ಮಹಿಳೆಯರು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶದ ಮೀನುಗಾರ ಮಹಿಳೆಯರು, ಪುರುಷರು ಇದ್ದರು.

error: