ಹೊನ್ನಾವರ ತಾಲೂಕಿನ ಗೇರುಸೊಪ್ಪೆಯ ನಂಜೂರಿನಲ್ಲಿ ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನದ ರಾಜಗೋಪುರ ಮತ್ತು ನೂತನ ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು
ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಪರಿಷತ್ತಿನ ಅಧ್ಯಕ್ಷರಾದ ಎನ್ ಕೆ ನಾಯಕ್ ಪುನಾ, ರಾಜೇಶ ಸಾಲೆಹಿತ್ತಲ್,, ತಾಲೂಕ್ ಪಂಚಾಯತ್ ಸದಸ್ಯರಾದ ವಿನೋದ ನಾಯ್ಕ್ ಮತ್ತು ಗಣ್ಯರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಶರಾವತಿ ತಟದ ಹೊನ್ನೂರು ಹೊನ್ನಾವರದ ಜಡ್ಡಿ ಕೇರಿಯ ಶ್ರೀ ಆದಿಶಕ್ತಿ ಜಗದಂಬ ದೇವಸ್ಥಾನಕ್ಕೆ ಸುಮಾರು ಎರಡು ಕೋಟಿ ಮೊತ್ತದಲ್ಲಿ 63 ಅಡಿ ಎತ್ತರದ ಭವ್ಯವಾದ ಶ್ರೀ ರಾಜಗೋಪುರ ಮತ್ತು ವಿಶಾಲ ಸಭಾಭವನವನ್ನು ಭಕ್ತಾದಿಗಳ ನೆರವಿನಿಂದ ನಿರ್ಮಿಸಲಾಗಿದೆ. ಶ್ರೀ ಆದಿಶಕ್ತಿ ಜಗದಂಬಾ ಮೂಲತಹ ಕೇರಳದ ಕಾಲಡಿಯಲ್ಲಿ ಶ್ರೀ ಶಂಕರಾಚಾರ್ಯರಿoದ ಸ್ಥಾಪಿತಳಾಗಿ ಹೊನ್ನಾವರದ ಕಟ್ಟೆಮನೆಯ ಚಂದ್ರಭಾಗೀ ಎಂಬ ಭಕ್ತೆಯ ಸಂಕಷ್ಟ ಕಾಲದಲ್ಲಿ ಆಕೆಯ ಕಷ್ಟವನ್ನು ಪರಿಹರಿಸಿ ಅವಳ ಇಚ್ಛೆಯ ಮೇರೆಗೆ ಹೊನ್ನಾವರದ ಜಡ್ಡಿ ಕೇರಿಯಲ್ಲಿ ಬಂದು ನೆಲೆಸಿದಳೆಂಬುದು ಪ್ರತೀತಿ. ಭಕ್ತಾದಿಗಳ ಕಾಮಧೇನುವಾಗಿ, ಶಕ್ತಿ ಸ್ವರೂಪಿಣಿಯಾಗಿ ಕಾಪಾಡುತ್ತಿರುವ ಮಾತೆ ಜಗದಂಬಾ ದೇವಸ್ಥಾನ ವೆಂದು ನವ ಮಧುವಿನಂತೆ ಸಿಂಗಾರಗೊAಡಿದೆ .ಇದೇ ಬರುವ ಏಪ್ರಿಲ್ 8, 9 10 ರಂದು ಶ್ರೀ ರಾಜಗೋಪುರ ಮತ್ತು ಸಭಾಭವನದ ಉದ್ಘಾಟನೆ, ವರ್ಧಂತಿ ಉತ್ಸವ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜೊತೆಗೆ ಸಭಾ ಕಾರ್ಯಕ್ರಮ ಮತ್ತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿವೆ; ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವಿಯ ದರುಶನ ಪಡೆದು ತನು ಮನ ಧನ ಸಹಾಯ ನೀಡಿ ದೇವಿಯ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ವಾಗತ ಸಮಿತಿಯವರು ಭಕ್ತಾದಿಗಳಲ್ಲಿ ವಿನಂತಿಸಿಕೊAಡಿದ್ದಾರೆ .
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ