ಹೊನ್ನಾವರ; ದಂಡುಪಾಳ್ಯದ ಗ್ಯಾಂಗ್ ಕಟ್ಟಿಕೊಂಡು ಮಾವಿನಕುರ್ವಾದಲ್ಲಿ ಮಾಜಿ ಶಾಸಕರು ಎಷ್ಟೆ ಸಭೆ ಮಾಡಿದರೂ ಪ್ರಯೋಜನವಿಲ್ಲ. ಕೇವಲ ಆರು ತಿಂಗಳೊಳಗೆ ಈ ಗ್ರಾಮದ ಸೇತುವೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಸುನೀಲ್ ನಾಯ್ಕ ಮಾಜಿ ಶಾಸಕ ಮಂಕಾಳ ವೈದ್ಯರಿಂಗ್ ಟಾಂಗ್ ನೀಡಿದರು.
ಮಾವಿನಕುರ್ವಾ ವಿಜಯ ಸಂಕಲ್ಪ ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿ ಧರ್ಮ ಮತ್ತು ಅಧರ್ಮದಲ್ಲಿ ಎಂದಿಗೂ ಧರ್ಮವೇ ಗೆಲ್ಲಲಿದೆ. ಮಾವಿನಕುರ್ವಾ ಸೇತುವೆ ನನಗೆ ಸವಾಲಿನ ಕೆಲಸವಾಗಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯುರಪ್ಪನವರ ಸಹಕಾರದಿಂದ ಊರಿನವರ ಶ್ರಮದ ಫಲವಾಗಿ ಸೇತುವೆ ಮಂಜೂರಾಗಿ ಕಾಮಗಾರಿ ಆರಂಭವಾಗಿ ಕೇಲವೇ ದಿನದಲ್ಲಿ ಲೋಕಾರ್ಪಣೆಯಾಗಲಿದೆ. ಮಾಜಿ ಶಾಸಕರು ಅಧಿಕಾರ ಹಂಬಲದಿAದ ಜನರನ್ನು ಸುಳ್ಳುಗಳ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಿ. ಜಿ ಶಂಕರ್ ಅವರು ರಾಜಿನಾಮೆ ಕೊಟ್ಟು ಪುನಃ ಚುನಾವಣೆ ಎದುರಿಸಿ ಆಯ್ಕೆಯಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎನ್ನುತ್ತಾರೆ . ಅದಕ್ಕೂ ಮೊದಲು ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ನಿಮಗೆ ತಾಕತ್ತಿದ್ರೆ,ಧಮ್ ಇದ್ರೆ ಅಭ್ಯರ್ಥಿ ಯಾರೆಂದು ಹೇಳಿ, ಜಿ.ಜಿ ಅವರ ರಾಜಿನಾಮೆ ಕೊಡಿಸಿ ಗೆಲ್ಲಿಸಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು. ನಿಮ್ಮ ಸುಳ್ಳಿನ ಸರಮಾಲೆಯು ಈ ಬಾರಿ ಮತ್ತೆ ಪತನವಾಗಲಿದೆ ಎಂದರು.
ಶಾಸಕ ಸುನೀಲ್ ನಾಯ್ಕ ಅವರನ್ನು ಗ್ರಾಮಸ್ಥರು,ಅಭಿಮಾನಿಗಳು ಬ್ರಹತ್ ಮಾಲಾರ್ಪಣೆ ಮೂಲಕ ಸನ್ಮಾನಿಸಿ ಗೌರವಿಸಿದರು.
ಮಾವಿನಕುರ್ವಾ ಗ್ರಾಪಂ ಅಧ್ಯಕ್ಷ ಜಿ.ಜಿ ಶಂಕರ್ ಮಾತನಾಡಿ, ಬೀಳುವ ಮರವನ್ನು ಮುಟ್ಟುವ ಕಾಯಕ ಮಾಡಬಾರದು ಎಂದು ತಿರ್ಮಾನಿಸಿದ್ದೆ. ಅಂದು ಮಾವಿನಕುರ್ವಾ ಸೇತುವೆ ಅಳ್ವೇಕೊಡಿಗೆ ಸ್ಥಳಾಂತರಿಸಿದ ಯಾವ ಅರಳು-ಮರಳು ಶಾಸಕ ಎನ್ನುವುದು ಎಲ್ಲರಿಗೂ ತಿಳಿದಿದೆ. ನನ್ನನ್ನು ಗೆಲ್ಲಿಸಿದ್ದು ತಾನೇ ಎನ್ನುತ್ತಾರೆ. ಹಾಗಾದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿರುವುದೆ ತಾವೆ ಎಂದು ಒಪ್ಪಿಕೊಂಡAತಾಯಿತು. ಗ್ರಾ.ಪಂ.ಸದಸ್ಯನಾಗಿ ಗೆಲ್ಲಿಸಿದ್ದು ಜನರು ಎಂದು ನಾವು ಭಾವಿಸಿದ್ದೇವು. ಆದರೆ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಿದ್ದು, ನೀವೆ ಎಂದು ಇದೀಗ ಅರ್ಥವಾಯಿತು. ನಗರಬಸ್ತಿಕೇರಿ ಬ್ಲಾಕ್ ಅಧ್ಯಕ್ಷರಾದ ಗೊವಿಂದ ನಾಯ್ಕ ಸೋಲಿಸಿದ್ದು ನಿವೇನಾ ಎನ್ನುವ ಅನುಮಾನ ಕಾಡುತ್ತಿದೆ. ಕಾಂಗ್ರೇಸ್ ಸೋಲಿಸುದು ಕಾಂಗ್ರೇಸ್ ಪಕ್ಷವೇ ಆಗಿದೆ. ಇದು ನಿಮ್ಮ ಸಂಪ್ರದಾಯವೇ?ಮಾವಿನಕುರ್ವಾದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಇಲ್ಲಿ ಶಾಂತಿ ನೆಲಸಿದೆ. ಆದರೆ ಈ ನೆಲವನ್ನು ಕದನನೆಲವಾಗಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯರ ವಿರುದ್ದ ಹರಿಹಾಯ್ದರು.
ಮಾವಿನಕುರ್ವಾ ಗ್ರಾಪಂ ಸದಸ್ಯ ಪೀಟರ್ ಮೆಂಡಿಸ್ ಮಾತನಾಡಿ, ಊರಿನಲ್ಲಿ ಮತ್ತೆ ಹುಚ್ಚುನಾಯಿ ಬೊಗಳುತ್ತಿದೆ. ಜಾಗೃತರಾಗದೇ ಹೊದಲ್ಲಿ ಇಡೀ ಗ್ರಾಮಕ್ಕೆ ಹುಚ್ಚು ಹಿಡಿಸಲಿದೆ. ಸಮಾಜದಲ್ಲಿ ಅಕ್ರಮ,ಅನಧಿಕೃತ ದಂಧೆ ನಡೆಸಿದವರು ಮುಂದಿನ ಚುನಾವಣೆಗೆ ಸಿದ್ದರಾಗಿದ್ದಾರೆ. ಮಾವಿನಕುರ್ವಾ ಸೇತುವೆ ತಾನು ತಂದಿದ್ದು ಎಂದು ಬೊಬ್ಬೆ ಹೊಡೆಯುವ ಮಾಜಿ ಶಾಸಕ ಮಂಕಾಳ ವೈದ್ಯ ಸೇತುವೆ ತಂದ ದಾಖಲೆ ಬಿಡುಗಡೆಗೊಳಿಸಲಿ. ಇಲ್ಲವಾದರೆ ಯಾರು ತಂದಿರುವುದು ಎಂದು ನಾನು ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಸವಾಲ್ ಎಸೆದರು.
ಸೇತುವೆಗಾಗಿ ಹೋರಾಟ ಮಾಡಿದ ನನ್ನನ್ನು ನಕ್ಸಲೈಟ್ ಪಟ್ಟಕೊಟ್ಟು ಗರ್ನಲ್ ಅನ್ನು ಬಾಂಬ್ ಎಂದು ಆರೋಪಿಸಿ ಜೈಲು ವಾಸ ಅನುಭವಿಸುವಂತೆ ಮಾಡಿದರು. ಆದರು ಎದೆಗುಂದದೆ ನಮ್ಮ ಹೋರಾಟ ನಿರಂತರವಾಗಿ ಶಾಸಕ ಸುನೀಲ್ ನಾಯ್ಕ ಅವರ ಸಹಕಾರದಿಂದ ಮಂಜೂರಾಗಿ ಸ್ಥಳಾಂತರವಾದ ಸೇತುವೆ ಪುನಃ ನಮ್ಮ ಮಾವಿನಕುರ್ವಾಕ್ಕೆ ಬರುವಂತಾಯಿತು ಎಂದರು.
ಗ್ರಾ.ಪo ಅಧ್ಯಕ್ಷರುಗಳಾದ ಮಂಜುನಾಥ ನಾಯ್ಕ,ಪ್ರಮೋದ್ ನಾಯ್ಕ, ವಿಘ್ನೇಶ್ವರಹೆಗಡೆ,ಮಂಜುಳಾ ಗೌಡ,ಗೋವಿಂದ ಗೌಡ,ಸದಸ್ಯರಾದ ಹರಿಶ್ಚಂದ್ರ ನಾಯ್ಕ,ಕೇಶವ ನಾಯ್ಕ ಬಳ್ಕೂರು,ಶಿವಾನಂದ ಗೌಡ,ಬಿಜಿಪಿ ಮಂಡಲಾಧ್ಯಕ್ಷ ರಾಜು ಬಂಢಾರಿ,ಮಾಜಿ ತಾಪಂ ಅಧ್ಯಕ್ಷ ಶಂಭು ಬೈಲಾರ,ಮಹಾಲಕ್ಷ್ಮಿ ನಾಯ್ಕ,ವಿ.ಡಿ ಭಟ್ಟ ಬಾಲು ಗೌಡ ಮತ್ತಿತರಿದ್ದರು. ವಾಸು ನಾಯ್ಕ ಸ್ವಾಗತಿಸಿದರು.
ಮಂಕಾಳ ವೈದ್ಯ ಒರ್ವ ಭಸ್ಮಾಸುರ.ಮಾಳ್ಕೋಡ ಭಾಗಕ್ಕೆ ಸೇತುವೆಗೆ ಕಲ್ಲು ಹಾಕಿದವರು ಯಾರು, ಮಾವಿನಕುರ್ವಾ ಸೇತುವೆ ನಿಲ್ಲಿಸಿದ್ದು, ಯಾರು ಎನ್ನುವ ಮಾಹಿತಿ ಎಲ್ಲರಿಗೂ ಇದೆ. ದಿ.ಶಂಭು ಗೌಡರ ಮೂರು ಪ್ರಮುಖ ಬೇಡಿಕೆ ಈಡೇರಿಸಿದ ಶಾಸಕ ಸುನೀಲ ನಾಯ್ಕ ಎಂದರು– ಶಂಭು ಬೈಲಾರ ಮಾಜಿ ತಾ.ಪಂ.ಅಧ್ಯಕ್ಷ
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ