September 16, 2024

Bhavana Tv

Its Your Channel

ಮಾವಿನಕುರ್ವಾ ಗ್ರಾಮದಲ್ಲಿ ಮಹಿಳೆಯರಿಗೆ ಉದ್ಯೋಗ ಒದಗಿಸಲು ಶಾಸಕ ಸುನೀಲ ನಾಯ್ಕ ಮನವಿ ಸಲ್ಲಿಕೆ

ಹೊನ್ನಾವರ: ಮಾವಿನಕುರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸರಿಸುಮಾರು 2500 ಮಹಿಳೆಯರಿದ್ದು, ಉದ್ಯೋಗದ ಅವಶ್ಯಕತೆ ಇದ್ದು ಗ್ರಾಮೀಣ ಜನರಿಗೆ ಉದ್ಯೋಗ ಮಾಡಲು ಯಾವುದಾದರು ಒಂದು ಕೈಗಾರಿಕೆ ಆರಂಭಿಸುವAತೆ ಶರಾವತಿ ನಂಜೀವಿನಿ ವೇದಿಕೆಯ ವತಿಯಿಂದ ಶಾಸಕ ಸುನೀಲ ನಾಯ್ಕ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮಾವಿನಕುರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದೇ ಇರುವುದರಿಂದ ಪಂಚಾಯತ ವ್ಯಾಪ್ತಿಯಲ್ಲಿನ ಶರಾವತಿ ಸಂಜೀವಿನಿ ಒಕ್ಕೂಟದ 30 ಸಂಘಗಳ ಪರವಾಗಿ ಈ ಬೇಡಿಕೆ ಇಟ್ಟರು. ಸರಿಸುಮಾರು 2500 ರಷ್ಟು ಮಹಿಳೆಯರು ಮಾವಿನಕುರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿದ್ದು, ನಮಗೆ ಉದ್ಯೋಗದ ಅವಶ್ಯಕತೆ ಇರುತ್ತದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಮಾಡಲು ಯಾವುದಾದರು ಒಂದು ಕೈಗಾರಿಕೆ ಅಥವಾ ಮಹಿಳೆಯರು ಉದ್ಯೋಗ ಮಾಡುವಂತಹ ಯಾವುದಾದರೂ ಉದ್ಯೋಗಕ್ಕೆ ಸದಾವಕಾಶ ಮಾಡಿಕೊಟ್ಟು ಜನರ ಜೀವನ ಮಟ್ಟವನ್ನು ಉನ್ನತಿಕ್ಕೇರಿಸುವ ಕಾರ್ಯವನ್ನು ಮಾಡಬೇಕಾಗಿ ಒತ್ತಾಯಿಸಿದರು. ಈ ಬಗ್ಗೆ ಶಾಸಕ ಸುನೀಲ ನಾಯ್ಕ ಪ್ರತಿಕ್ರಿಯಿಸಿ ಈಗಾಗಲೇ ಗ್ರಾಮದಲ್ಲಿ ಪ್ಯಾಕಿಂಗ್ ಯೂನಿಟ್ ಆರಂಭಿಸುವ ಕಾರ್ಯಕ್ಕೆ ಸಜ್ಜಾಗುತ್ತಿದ್ದೇವೆ. ಇದರಿಂದ ಈ ಗ್ರಾಮದ ಜೊತೆ ಜೊತೆಗೆ ಇತರೆ ಗ್ರಾಮದ ಮಹಿಳೆಯರಿಗೂ ಅನೂಕೂಲವಾಗಲಿದೆ ಎಂದು ಭರವಸೆ ನೀಡಿದರು.

error: