December 4, 2024

Bhavana Tv

Its Your Channel

ನಾಡಿನ ಒಳಿತಿಗಾಗಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಂತೆ ಶಾರದಾ ಶೆಟ್ಟಿ ಕರೆ

ಹೊನ್ನಾವರ : ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ.ಸರಕಾರ ಜನರ ಸಮಸ್ಯೆಯನ್ನು ಬಗೆಹರಿಸದೇ, ಸುಳ್ಳು ಆಶ್ವಾಸನೆ ಕೊಡುವುದರಲ್ಲೇ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಆಪಾದಿಸಿದರು.

ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಕಾಂಗ್ರೆಸ್ ಪಕ್ಷ ಜಾರಿಯಲ್ಲಿ ತರಲು ಉದ್ದೇಶಿಸಿರುವ ಗೃಹಲಕ್ಷಿö್ಮÃ ಮತ್ತು ಗೃಹ ಜ್ಯೋತಿ ಯೋಜನೆಯ ಗ್ಯಾರಂಟಿ ಕಾರ್ಡ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೊಟ್ಟ ಮಾತಿನಂತೆ ನಡೆಯುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್. ಈ ಹಿಂದಿನ ಸಿದ್ದರಾಮಯ್ಯ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಬಡವರ ಪರ ಅನೇಕ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದು, ತನ್ನ ಚುನಾವಣೆಯ ಪ್ರನಾಳಿಕೆಯಲ್ಲಿ ನೀಡಿದ ಎಲ್ಲಾ ಬರವಸೆಗಳನ್ನು ಈಡೇರಿಸಿ ಬಡವರ ಪಾಲಿನ ಆಪತ್ಬಾಂದವ ಸರಕಾರವಾಗಿತ್ತು ಎಂದರು. ಆದರೆ ಇಂದಿನ ಕೇಂದ್ರದ ಮೋದಿ ಸರಕಾರ ಮತ್ತು ರಾಜ್ಯದ ಬೊಮ್ಮಾಯಿ ಸರಕಾರ ಜನರಿಗೆ ಸುಳ್ಳು ಹೇಳುವುದೇ ಜನಪರ ಕೆಲಸವೆಂದು ತಿಳಿದಂತಿದೆ ಎಂದು ವ್ಯಂಗ್ಯವಾಡಿದರು. ಪಕ್ಷದ ಕಾರ್ಯಕರ್ತರು ಮುಂಬರುವ ದಿನದಲ್ಲಿ ಕಾಂಗ್ರೆಸ್ ಜಾರಿಯಲ್ಲಿ ತರಲು ಉದ್ದೇಶಿಸಿರುವ ಗೃಹಲಕ್ಷಿö್ಮÃ ಮತ್ತು ಗೃಹ ಜ್ಯೋತಿ ಯೋಜನೆಯ ಬಗ್ಗೆ ಪ್ರತಿ ಮನೆಮನೆಗೆ ತೆರಳಿ ತಿಳಿಹೇಳುವಂತೆ ಮನವಿ ಮಾಢಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರಾಜ್ಯ ಮತ್ತು ದೇಶ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತಿದ್ದು, ನಮ್ಮನ್ನಾಳುವ ಸರಕಾರಗಳು ಕೇವಲ ಸುಳ್ಳಿನಿಂದಲೇ ಮಾತಿನ ಮಂಟಪ ಕಟ್ಟುತ್ತಿದೆ ಎಂದರು. ಕಾಂಗ್ರೆಸ್ ಪಕ್ಷ ಎಂದಿಗೂ ಬಢವರ ಧ್ವನಿಯಾಗಿ ಕೆಲಸ ಮಾಡುತಿದ್ದು, ವಿರೋಧಿಗಳ ಅಪಪ್ರಚಾರಕ್ಕೆ ಕಾರ್ಯಕರ್ತರು ದಿಟ್ಟ ಉತ್ತರ ನೀಡಬೇಕಾಗಿದೆ ಎಂದರು. ಕಾಂUಸ್ ಅಧಿಕಾರಕ್ಕೆ ಬಂದಲ್ಲಿ ಗೃಹಲಕ್ಷಿö್ಮÃ ಮತ್ತು ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಈ ಕುರಿತಂತೆ ಗ್ಯಾರಂಟಿ ಕಾರ್ಡ ವಿತರಣೆಯನ್ನು ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಜನರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಎಂ.ಎನ್.ಸುಬ್ರಮಣ್ಯಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಾಮೋದರ ನಾಯ್ಕ, ಶ್ರೀಮತಿ ಲಿಲ್ಲಿ ಪರ್ನಾಂಡಿಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಸೇವಾದಳದ ಅಧ್ಯಕ್ಷ ಮೋಹನ್ ಆಚಾರಿ, ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶ್ರೀಮತಿ ಶಾರದಾ ಶೆಟ್ಟಿಯವರ ನೇತ್ರತ್ವದಲ್ಲಿ ಹೊನ್ನಾವರ ಪಟ್ಟಣದ ಕಿಂತಲಕೇರಿಯಲ್ಲಿರುವ ಹಲವಾರು ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡನ್ನು ವಿತರಿಸಿದರು.

error: