ಪ್ರತಿಷ್ಟಿತ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ೨೦೨೨-೨೩ ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಗಣನೀಯ ಸಾಧನೆಯನ್ನು ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಶೇ.೯೯.೩೨, ಕಲಾ ವಿಭಾಗದಲ್ಲಿ ಶೇ.೯೬,ವಾಣಿಜ್ಯ ವಿಭಾಗದಲ್ಲಿ ಶೇ.೮೬.೬೨ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ ಹೆಮ್ಮೆಯನ್ನು ತಂದಿರುತ್ತಾರೆ.
ಹೊನ್ನಾವರ; ವಿಜ್ಞಾನ ವಿಭಾಗದಲ್ಲಿ ರ‍್ಯಾಂಕ್ ಪಡೆದ ಅನಿಷಾ ಬೆನಾ ಡಿಸೋಜಾ, ರಂಜಿತಾ ಶಾನಭಾಗ್, ಸಂಜನಾ ಕಮಲಾಕರ ಶೇಟ್,ದಿಶಾ ವಿನೋದ ಸಿರ್ಸಿಕರ್, ಶ್ರೀಲಕ್ಷ್ಮೀ ಕೃಷ್ಣ ಹೆಗಡೆ , ವಾಣಿಜ್ಯ ವಿಭಾಗದಲ್ಲಿ ಪ್ರೀತಿ ನಾಗರಾಜ ನಾಯಕ್, ತಬಸ್ಸುಮ್ ಅಬ್ದುಲ್ ಸತ್ತಾರ್ ಶೇಖ್, ಭೂಮಿಕಾ ವಾಮನ್ ಭಟ್ ,ಕಲಾ ವಿಭಾಗದಲ್ಲಿ ಸ್ಫೂರ್ತಿ ಗಣೇಶ್ ನಾಯ್ಕ,ರಂಜಿತಾ ಕೃಷ್ಣಪ್ಪ ನಾಯ್ಕ ,ನಿಖಿಲ್ ಗಜಾನನ ನಾಯ್ಕ ಇವರುಗಳನ್ನು ಎಂ.ಪಿ.ಸೊಸೈಟಿ ಶಾಲು ಹೊದೆಸಿ ಆತ್ಮೀಯವಾಗಿ ಗೌರವಿಸಿತು. ಇದೇ ವೇಳೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಾಲಕರು ಸಹ ಉಪಸ್ಥಿತರಿದ್ದರು. ತಮ್ಮ ಮಕ್ಕಳ ಕಾರಣದಿಂದ ನಾವು ವೇದಿಕೆ ಮೇಲೆ ಹತ್ತಿತ್ತಿರುವುದು ಸಂತಸವನ್ನು ತಂದಿದೆ. ಕಾಲೇಜು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ಎಲ್ಲಾ ಸೌಲಭ್ಯವನ್ನು ನೀಡಿ ಕಾರ್ಯವನ್ನು ನಿರ್ವಹಿಸುತ್ತಿದೆ.ಸಂತಸದ ಗಳಿಗೆಯನ್ನು ತಂದುಕೊಟ್ಟಿದ್ದಿರಿ.ಎ0.ಪಿ.ಇ ಸೊಸೈಟಿ ಒಂದು ಸ್ಫೂರ್ತಿದಾಯಕ ಸಂಸ್ಥೆ ಎಂದು ಪಾಲಕರು ಕಾಲೇಜಿನ ಹಾಗೂ ಸಂಸ್ತೆಯ ಕುರಿತು ಹೆಮ್ಮೆಯ ಮಾತುಗಳನ್ನಾಡಿದರು.
ಕಾಲೇಜು ಆಡಳಿತ ಮಂಡಳಿಯ ಜಂಟಿ ಕರ್ಯದರ್ಶಿ ಜಿ.ಪಿ.ಹೆಗಡೆ ಮತನಾಡಿ ಇದು ಆತ್ಮೀಯ ಹಾಗೂ ಭಾವನಾತ್ಮಕ ಸಮಾರಂಭ ಇದನ್ನು ಪಾಲಕರು ಹಗೂ ವಿದ್ಯರ್ಥಿಗಳು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳಬೆಕಾದ ಕಾರ್ಯಕ್ರಮ.ವಿದ್ಯಾರ್ಥಿಗಳ ಶ್ರಮ ಸಾರ್ಥಕವಾದ ಸಂದರ್ಭವೂ ಹೌದು. ಕಾಲೇಜು ಉತ್ತಮವಾದ ಫಲಿತಾಂಶವನ್ನು ನೀಡಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಉಪನ್ಯಾಸಕರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನು ವಹಿಸಿದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ,ಶಿವಾನಿ ಮಾತನಾಡಿ ಸ್ಫರ್ಧಾತ್ಮಕಯುಗದಲ್ಲಿ ನಾವಿದ್ದೇವೆ. ಎಷ್ಟೆ ಸವಾಲುಗಳಿ ಎದುರಾದರೂ ಸಹ ತನ್ನತನವನ್ನು ಕಾಯ್ದುಕೊಂಡು ಹೋದÀ ಕಾಲೇಜು ನಮ್ಮದು. ಶಿಕ್ಷಕರು ವಿದ್ಯಾರ್ಥಿಗಳ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಮ್ಮ ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ತಂದೆ -ತಾಯಿಯಂತೆ ಕೆಲಸವನ್ನು ಮಾಡುತತಾರೆ. ಶಿಕ್ಷಕರ ಪರಿಶ್ರಮ ಈ ಸಾಧನೆಯನ್ನು ಮಡಲು ಕಾರಣವಾಗಿದೆ. ಉತ್ತಮ ಫಲಿತಾಂಶ0ವನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯವನ್ನು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ ಸ್ವಾಗತಿಸಿದರು,ಡಾ.ರಾಜು ಮಳಗಿಮನಿ ವಂದಿಸಿದರು. ಉಪನ್ಯಾಸಕ ಎಂ.ಎನ್. ಅಡಿಗುಂಡಿ ನಿರೂಪಿಸಿದರು.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಹೊನ್ನಾವರದ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆ.