ಹೊನ್ನಾವರ ; ಮೊದಲ ಪ್ರಯತ್ನದಲ್ಲೇ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸಗೆರಿಯ ವಿಷ್ಣು ಮರಾಠಿ ಮತ್ತು ರಾಧಾ ಮರಾಠಿ ಅವರ ಮಗನಾದ ನಿತ್ಯಾನಂದ ವಿಷ್ಣು ಮರಾಠಿ ಈ ಸಾಧನೆ ಮಾಡಿದ ಛಲಗಾರ. ಕುಂಬ್ರಿ ಮರಾಠಿ ಸಮುದಾಯದ ಈತನು ಸಾಧಾರಣ ಸರ್ಕಾರಿ ಶಾಲಾ ಕಾಲೇಜಿನಲ್ಲಿ ಯಾವುದೇ ತರಬೇತಿ ಕೇಂದ್ರದ ಸಹಕಾರವಿಲ್ಲದೆ ಸ್ವ ಪ್ರಯತ್ನದಿಂದ ತನ್ನ ಪರೀಕ್ಷೆಯನ್ನು ಮುಗಿಸಿದ್ದಾನೆ. ಸಿಎ ಜಿ ಎಸ್ ಕಾಮತ್ & ಕಂಪನಿಯಲ್ಲಿ ಇಂರ‍್ನಸಿಪ್ ಮುಗಿಸಿ ಅಲ್ಲಿಯೂ ತನ್ನ ಹೆಸರನ್ನು ಸಾಧಿಸಿದ್ದಾನೆ.
ಸಿಎ ಆಗಬೇಕೆಂಬುದು ಹಲವಾರು ವಿದ್ಯಾರ್ಥಿಗಳ ಕನಸು. ಸಾಮಾನ್ಯ ಕೃಷಿ ಕುಟುಂಬದ ಈ ಛಲಗಾರ ತನ್ನ ಕನಸನ್ನು ನನಸು ಮಾಡುವಲ್ಲಿ ಸಫಲಾನಗಿದ್ದಾನೆ. ಇದರೊಂದಿಗೆ ತನ್ನ ಸಾಧನೆಯನ್ನು ಮನೆಯವರಿಗೆ, ಗುರುವೃಂದಕ್ಕೆ, ಸಮುದಾಯಕ್ಕೆ ಕೀರ್ತಿ ತಂದಿದ್ದಾನೆ.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ