May 5, 2024

Bhavana Tv

Its Your Channel

“ಜೀವನದಿ” ಪರಿಪೂರ್ಣಗೊಂಡ ಅಭಿನಂದನಾ ಗ್ರಂಥ ಬಿಡುಗಡೆ

ಹೊನ್ನಾವರ; ಜೀಯು ಅಭಿನಂದನೆಯ “ಜೀವನದಿ” ಪರಿಪೂರ್ಣಗೊಂಡ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಎಸ್.ಡಿ.ಎಂ. ಕಾಲೇಜಿನ ಆವರಣದಲ್ಲಿ ರವಿವಾರ ನೆರವೇರಿತು.


ಸಮಿತಿಯ ಗೌರವಾಧ್ಯಕ್ಷರಾದ ಆರ್.ಎಸ್.ರಾಯ್ಕರ್ ಮಾತನಾಡಿ ಶರಾವತಿ ಎಡಬಲದಂಡೆಯ ನಿವಾಸಿಗಳ ಸಂಕಷ್ಟಕ್ಕೆ ತಮ್ಮ ಪತ್ರಿಕೆಯ ಮೂಲಕ ಸರ್ಕಾರದ ಗಮನ ಸೆಳೆದು ಹಲವು ಸಮಸ್ಯೆ ಜಿ.ಯು ಭಟ್ ಬಗೆಹರಿಸಲು ಯಶ್ವಸಿಯಾಗಿದ್ದರು. ಈ ಕಾರ್ಯವನ್ನು ಆ ಭಾಗದ ನಿವಾಸಿಗಳು ಇಂದಿಗೂ ಸ್ಮರಿಸುತ್ತಾರೆ. ಜಿಲ್ಲೆಯ ಪತ್ರಿಕಾ ರಂಗದ ಸೇವೆ ಅನನ್ಯವಾದದು ಎನ್ನುವುದಕ್ಕೆ ಅಭಿನಂದನಾ ಸಮಾರಂಭವು ಸಾಕ್ಷಿಯಾಯಿತು. ಮುಂದಿನ ದಿನದಲ್ಲಿ ಇವರಿಂದಲೂ ಪತ್ರಿಕಾ ರಂಗದ ಜೊತೆ ವಿವಿಧ ರಂಗದ ಸೇವೆ ಮುಂದುವರೆಯಲಿ ಎಂದು ಶುಭಹಾರೈಸಿದರು.
ಸಮಿತಿಯ ಕಾರ್ಯಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಸಮಾನ ಮನಸ್ಕರೆಲ್ಲರ ಒಗ್ಗೂಡುವಿಕೆಯಿಂದ ಕಾರ್ಯಕ್ರಮ ಯಶ್ವಸಿಯಾಗಿದೆ. ಇಂತಹ ಒಂದು ಕಾರ್ಯಕ್ರಮ ಮುಂದಿನ ದಿನದಲ್ಲಿ ಆಯೋಜಿಸಲು ಈ ಕಾರ್ಯಕ್ರಮವು ಭದ್ರಬುನಾದಿ ಹಾಕಿದೆ. ಕೇವಲ 13 ದಿನದ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಿ ಯಶ್ವಸಿಯಾಗಿರುವುದು ವಿಶೇಷವಾಗಿದೆ. ಕಾರ್ಯಕ್ರಮದ ಆರಂಭದಿAದ ಕೊನೆಯವರೆಗೂ ಎಲ್ಲರೂ ತೊರಿದ ಸಹಕಾರಕ್ಕೆ ಅಭಿನಂದಿಸಿದರು.
ಅಭಿನಂದನಾ ಸಮಾರಂಭದ ಪೋಟೋ ಆಲ್ಬಮ್ ಜಿಯು ದಂಪತಿಗಳಿಗೆ ಹಸ್ತಾಂತರಿಸಲಾಯಿತು. ಪುಸ್ತಕದ ಸಂಪಾದಕರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ಯಾವ ಕೊರತೆ ಇಲ್ಲದೆ ಇರುವ ರೀತಿ ನಮ್ಮ ಒಡನಾಡಿಯಾಗಿ ಹಿಂದಿನಿAದಿಲೂ ನಮ್ಮೊಡನೆ ಈ ಭಾಗದವರು ಇದ್ದಾರೆ. ನಮ್ಮ ಕಷ್ಟ ಸುಖದಲ್ಲಿ ನಮ್ಮ ಜೊತೆ ಇರುವುದಲ್ಲದೇ ಈ ಅಭಿನಂದನಾ ಕಾರ್ಯಕ್ರಮದಲ್ಲಿ ತೋರಿಸಿದ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಾರ್ಯಕ್ರಮದ ಯಶ್ವಸಿಯನ್ನು ಪುಸ್ತಕದ ಮೂಲಕ ಉತ್ತಮವಾಗಿ ಮುದ್ರಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಅಭಿನಂದನಾ ಸಮಿತಿ ಅಧ್ಯಕ್ಷ ವೆಂಕ್ರಟಮಣ ಹೆಗಡೆ, ಎಸ್.ಎಂ.ಭಟ್, ಜಿ.ಪಿ.ಹೆಗಡೆ, ಅಭಿನವ ಪ್ರಕಾಶನದ ನ. ರವಿಕುಮಾರ, ಕಿರಣ ಭಟ್, ತಾರಾ ಭಟ್, ಡಾ. ಎನ್. ಆರ್. ನಾಯಕ, ಶಾಂತಿ ನಾಯಕ, ವಿ.ಜಿ.ಹೆಗಡೆ,ಇಸ್ಮಾಯಿಲ್ ತಲಕಣಿ, ಡಾ.ಕೃಷ್ಣಾಜಿ, ಶಂಭು ಭಟ್, ಕೆ.ವಿ.ಹೆಗಡೆ, ಎಂ.ಆರ್.ಹೆಗಡೆ, ಎಂ.ವಿ.ಹೆಗಡೆ, ಅಶೋಕ ಹುಗ್ಗಣ್ಣನವರ್, ದಾಮೋದರ ನಾಯ್ಕ, ನಾರಾಯಣ ಯಾಜಿ ಸಾಲಿಬೈಲ್,ಎಲ್.ಎಂ.ಹೆಗಡೆ, ಪತ್ರಕರ್ತರಾದ ಕೃಷ್ಣಮೂರ್ತಿ ಹೆಬ್ಬಾರ ಜಿ.ಯು ಅಭಿಮಾನಿಗಳು ಉಪಸ್ಥಿತರಿದ್ದರು. ಸಂಪಾದಕರಾದ ನಾಗರಾಜ ಹೆಗಡೆ ಸ್ವಾಗತಿಸಿ, ಪ್ರಶಾಂತ ಹೆಗಡೆ ಮೂಡಲಮನೆ ವಂದಿಸಿದರು.

error: