May 13, 2024

Bhavana Tv

Its Your Channel

ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾ0ತ ಕೊಚರೇಕರ ಆಗ್ರಹ

ಜಿಲ್ಲೆಯ ಅರಣ್ಯ ಭೂಮಿ ಒತ್ತುವರಿ ಸಕ್ರಮಕ್ಕೆ ತೊಡಕಾಗಿರುವ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಅನುಚ್ಛೇದ 2 ನಿಯಮಾವಳಿಗೆ ತಿದ್ದುಪಡಿ ಸೂಚಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ರಾಜ್ಯದ ಪ್ರಸ್ತಾವನೆಗೆ ಅಂಗೀಕಾರ ನೀಡಲು ಮತ್ತು ಈ ಸಂಬ0ಧ ಅಗತ್ಯ ಅಧಿಸೂಚನೆಯನ್ನು ಹೊರಡಿಸಲು ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಮಾಡಬೇಕು ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾ0ತ ಕೊಚರೇಕರ ಆಗ್ರಹ ಪಡಿಸಿದ್ದಾರೆ.
ಜೀವನೋಪಾಯಕ್ಕಾಗಿ ವಸತಿ ಮತ್ತು ಬೇಸಾಯದೊಂದಿಗೆ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿರುವ ಜಿಲ್ಲೆಯ 85757 ಕುಟುಂಬಗಳ ಹಿತರಕ್ಷಣಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.ಅರಣ್ಯ ಭೂಮಿಯಲ್ಲಿನ ಬಗರ ಹುಕ್ಕುಂ ಸಾಗುವಳಿಯ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆ ಮತ್ತು ತಪ್ಪು ಅಭಿಪ್ರಾಯ ಇದೆ.ಇಂದು ಅರಣ್ಯವಾಸಿಗಳಿಂದಾಗಿ ಅರಣ್ಯದ ರಕ್ಷಣೆಯಾಗುತ್ತಿದೆ.ಗಿಡಮರಗಳಿಂದ ಕಾಡು ಹಸಿರಾಗಿದೆ. ಬಗರ ಹುಕುಮ್ ಸಾಗುವಳಿಗೆ ಸಂಬ0ಧ ಪಟ್ಟಂತೆ ಜಿಲ್ಲೆಯ ಸುಮಾರು 50,000ಕ್ಕೂ ಹೆಚ್ಚಿನ ಪ್ರಕರಣಗಳು ಅಭಿವೃದ್ಧಿ ಹೊಂದಿದ ಗ್ರಾಮೀಣ ಮತ್ತು ನಗರಭಾಗಗಳ ಜನವಸತಿ ಪ್ರದೇಶಕ್ಕೆ ಸಂಬAಧಿಸಿದ ಕಂದಾಯ ಗ್ರಾಮದಲ್ಲಿನ ಅರಣ್ಯ ಭೂಮಿಗೆ ಸಂಬ0ಧಿಸಿದ ಹಾಗೂ ಮೂರು ತಲೆಮಾರುಗಳ ಪೂರ್ವದ ಕ್ಲೇಮುಗಳಾಗಿವೆ ಎನ್ನುವುದನ್ನು ಸರ್ಕಾರ ಗಮನಿಸಬೇಕು. ಅರಣ್ಯ ಹಕ್ಕು ಉಪವಿಭಾಗೀಯ ಸಮಿತಿಗಳು ಸ್ಥಳ ತನಿಖೆ ನಡೆಸಿ ಸ್ಥಳದಲ್ಲಿನ ವಾಸ್ತವಾಂಶವನ್ನು ಪರಿಗಣಿಸಿ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಭೂಮಿಯ ಹಕ್ಕುಪತ್ರ ನೀಡಲು ಈಗಾಗಲೇ ಪರಿಗಣಿಸಬೇಕಿತ್ತು.ಆದರೆ ಮಾನವೀಯ ನೆಲೆಯಲ್ಲಿಯೂ ಸಹ ಈ ಸಮಸ್ಯೆಯನ್ನು ಬಗೆಹರಿಸದೇ ಇರುವದು ನಮ್ಮ ಜಿಲ್ಲೆಯ ಜನರ ದುರಾದೃಷ್ಟವೇ ಸರಿ ಎಂದು ಕೊಚರೇಕರ ತಮ್ಮ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.ಇತರ ಪಾರಂಪರಿಕ ಅರಣ್ಯ ವಾಸಿಗಳ ಬಗರ ಹುಕುಮ್ ಸಾಗುವಳಿಯ ಸಕ್ರಮಕ್ಕೆ ಸಂಬ0ದಿಸಿದ ನಿಯಮಗಳ ಕುರಿತು ಕೆಲವರಲ್ಲಿ ಇರುವ ದ್ವಂದ್ವವನ್ನು ಬಗೆಹರಿಸಲು ಮತ್ತು ಅರಣ್ಯ ಭೂಮಿಯಲ್ಲಿನ ಒಂದು ತಲೆಮಾರಿನ ಪೂರ್ವದ ಬಗರ ಹುಕುಮ್ ಸಾಗುವಳಿಯನ್ನು ಸಕ್ರಮಪಡಿಸಲು ಸಾಧ್ಯವಾಗುವಂತೆ ಅರಣ್ಯ ಹಕ್ಕು ಕಾಯ್ದೆಯ ಪರಿಚ್ಛೇದ 2ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ಸೂಚಿಸಿ ಕೇಂದ್ರ ಸರ್ಕಾರಕ್ಕೆ 2020ರಲ್ಲೇ ಪ್ರಸ್ತಾವನೆಯನ್ನು ಸಲ್ಲಿಸಿದೆ.ಕಳೆದ ಮೂರು ವರ್ಷಗಳಿಂದ ಈ ಪ್ರಮುಖ ಪ್ರಸ್ತಾವನೆ ಕೇಂದ್ರದ ಮುಂದೆ ಪರಿಶೀಲನೆ ಹಂತದಲ್ಲಿರುವದು ನಮ್ಮನ್ನು ನಾವು ಪ್ರಶ್ನಿಸಿ ಕೊಳ್ಳುವಂತಾಗಿದೆ. ರಾಜ್ಯದ ಈ ಪ್ರಮುಖ ಪ್ರಸ್ತಾವನೆಗೆ ಅನುಮೋದನೆ ದೊರಕಿಸಿಕೊಡುವಂತೆ ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರು ಈಗಲಾದರೂ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಬೇಕು ಮತ್ತು ರಾಜ್ಯ ಸರ್ಕಾರವು ಅರಣ್ಯ ಹಕ್ಕು ಕ್ಲೇಮುಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು ಹಾಗೂ ಸ್ಥಳದಲ್ಲಿನ ವಾಸ್ತವಾಂಶವನ್ನು ಪರಿಗಣಿಸಿ ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು ಪತ್ರಗಳನ್ನು ನೀಡಲು ಪರಿಗಣಿಸಬೇಕೆಂದು ಚಂದ್ರಕಾAತ ಕೊಚರೇಕರ ಆಗ್ರಹ ಪಡಿಸಿದ್ದಾರೆ.

error: