June 26, 2024

Bhavana Tv

Its Your Channel

ಅಗ್ನಿಶಾಮಕ ಠಾಣೆಯ ಸಿಬ್ಬಂದಿ ನಾಗೇಶ ಪೂಜಾರಿಯವರಿಗೆ 2024 ನೇ ಸಾಲಿನ ಮುಖ್ಯಮಂತ್ರಿಯವರ ಚಿನ್ನದಪದ

ಹೊನ್ನಾವರ: ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಗ್ನಿಶಾಮಕರಾದ ನಾಗೇಶ ಪೂಜಾರಿಯವರಿಗೆ 2024 ನೇ ಸಾಲಿನ ರಾಜ್ಯ ಸರ್ಕಾರ ನೀಡುವ ಮುಖ್ಯಮಂತ್ರಿಯವರ ಚಿನ್ನದಪದಕಕ್ಕೆ ಭಾಜನರಾಗಿದ್ದಾರೆ.

ಇವರು ನೆರೆಯ ಉಡುಪಿ ಜಿಲ್ಲೆಯ ಸಾಲಿಗ್ರಾಮದವರಾಗಿದ್ದು, ಮಂಗಳೂರು,ಉಡುಪಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಹೊನ್ನಾವರ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತಿದ್ದಾರೆ. ಇವರ ಸೇವಗೆ ಮುಖ್ಯಮಂತ್ರಿ ಚಿನ್ನದ ಪದಕ ದೊರೆತಿದ್ದು ಗೃಹ ಸಚಿವ ಜಿ ಪರಮೇಶ್ವರ್ ರವರು ಬೆಂಗಳೂರಿನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: