
ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾಗೇರಿ ಪತ್ನಿ, ಪುತ್ರಿ ಹಾಗೂ ಪ್ರಮುಖ ಮುಖಂಡರೊAದಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿ, ಬಿಜೆಪಿ ಗೆಲ್ಲಲಿದೆ ಎಂದು ಘೋಷಿಸಿದರು. ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ್ ಗೆ ಕಾಗೇರಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟೂ ಮೂರು ನಾಮಪತ್ರ ಸಲ್ಲಿಕೆ ಮಾಡಿದರು.

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದು, ಉತ್ತರ ಕನ್ನಡ ಕ್ಷೇತ್ರವನ್ನು ಅವರಿಗೆ ಕೊಡುಗೆಯಾಗಿ ನೀಡೋಣ ಎಂದು ಕರೆ ನೀಡಿದರು. ನಾಮಪತ್ರ ಸಲ್ಲಿಕೆಯ ಮುನ್ನ ಕಾಗೇರಿ ಅವರು ಕಾರವಾರದ ದೈವಜ್ಞ ಸಭಾಭವನದಿಂದ ನಗರದಾದ್ಯಂತ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್, ಬಸವನಗೌಡ ಯತ್ನಾಳ್ , ಶಾಸಕ ಸುನೀಲ್ ಕುಮಾರ್ ,ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ್, ಧಾರವಾಡ ಶಾಸಕ ಅರವಿಂದ ಬೆಲ್ಲದ್, ಚುನಾವಣಾ ಉಸ್ತುವಾರಿ ಹರತಾಳು ಹಾಲಪ್ಪ,ಶಾಸಕ ದಿನಕರ್ ಶಟ್ಟಿ ಎಂಎಲ್‌ಸಿ ಗಣಪತಿ ಉಳ್ವೇಕರ್ ಸಾಥ್ ನೀಡಿದರು. ಬೃಹತ್ ಹೂವಿನ ಹಾರ ಹಾಕುವ ಮೂಲಕ ಬಿಜೆಪಿ ಕಾರ್ಯಕರ್ತರು ಭರ್ಜರಿಯಾಗಿ ಸಂಭ್ರಮಿಸಿದರು. ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗಿಯಾದರು.

ನಾಮಪತ್ರ ಸಲ್ಲಿಕೆಗೂ ಮೊದಲು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ನಿ ಸಮೇತ ಸಮುದ್ರ ಪೂಜೆ ,ಗೋ ಪೂಜೆ ನೆರವೇರಿಸಿದರು. ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಕಾಗೇರಿ ಸಮುದ್ರ ಪೂಜೆ ನೆರವೇರಿಸಿದ್ದು, ಸಮುದ್ರ ಪೂಜೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ,ಜಿಲ್ಲಾ ಚುನಾವಣಾ ಉಸ್ತುವಾರಿ ಹರತಾಳು ಹಾಲಪ್ಪ ,ಕಾರ್ಕಳ ಶಾಸಕ ಸುನಿಲ್ ಕುಮಾರ್ ,ಶಾಸಕ ಅರವಿಂದ್ ಬೆಲ್ಲದ್ ಭಾಗಿಯಾದರು.
ಬಿಜೆಪಿ ಶಾಸಕರಾಗಿ, ಚುನಾವಣಾ ಪ್ರಚಾರದಿಂದ ಹಾಗೂ ಪಕ್ಷದ ಚಟುವಟಿಕೆಗಳಿಂದ ದೂರ ಇರುವ ಹೆಬ್ಬಾರ್ ಕುರಿತು ಪ್ರತಿಕ್ರಿಯಿಸಿದ ಕಾಗೇರಿ, ಹೆಬ್ಬಾರ್ ತಾಂತ್ರಿಕವಾಗಿ ಬಿಜೆಪಿ ಯಲ್ಲಿದ್ದಾರೆ. ಅವರದ್ದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ನಡುವಳಿಕೆಯಲ್ಲ. ಸಂಸದೀಯ ವ್ಯವಸ್ಥೆಗೆ ಶೋಭೆ ತರುವ ವ್ಯವಸ್ಥೆ ಅಲ್ಲ. ಒಬ್ಬ ಜನಪ್ರತಿನಿಧಿಯಾಗಿ ಶಾಸಕನಾಗಿರುವಂತವರು ಮಾಡಬಾರದ್ದನ್ನು ಮಾಡಿದರೇ ಏನೆಲ್ಲಾ ಮೌಲ್ಯ ಕುಸಿತ,ನೈತಿಕ ದಿವಾಳಿ ಯನ್ನ ಕಾಣಬಹುದು ಎಂಬುದನ್ನ ಹೆಬ್ಬಾರ್ ನಲ್ಲಿ ಕಾಣಬಹುದು ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಅನಂತಕುಮಾರ್ ಹೆಗಡೆ ಮುಂದೆ ಪ್ರಚಾರಕ್ಕೆ ಬರುತ್ತಾರೆ. ಸಂದಾನದ ಬಗ್ಗೆ ದೊಡ್ಡವರು ಅವರ ಜೊತೆ ಮಾತನಾಡುತ್ತಾರೆ..

ಸಂದಾನ ಮಾತುಕತೆಗಳು ನಡೆಯುತ್ತಿವೆ. ಹಿರಿಯರು ಸರಿ ಮಾಡುತ್ತಾರೆ. ಅನಂತಕುಮಾರ್ ಹೆಗಡೆ ಬಂಡಾಯ ಎಂದು ಹೇಳಿಲ್ಲ ಎಂದ ಹರತಾಳು, ಹೆಬ್ಬಾರ್ ರವರದ್ದು ಒಳ್ಳೆಯ ರಾಜಕಾರಣ ಅಲ್ಲ. ಅವರ ಬಗ್ಗೆ ಕ್ರಮ ಕೈಗೊಳ್ಳಲು ಆಗದೇ ಇರುವುದಕ್ಕೆ ತಾಂತ್ರಿಕ ಕಾರಣಗಳಿವೆ. ರಾಜಕೀಯದಲ್ಲಿ ಅವರು ಮೋಸ ಮಾಡಿದರು ಇವರು ಮೋಸ ಮಾಡಿದರು ಅನ್ನುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.

More Stories
ಗಾನಶ್ರೀ -2024-ಜಿಲ್ಲಾ ಮಟ್ಟದ ಹಾಡುವ ಸ್ಪರ್ಧೆ
ಕಾಗೇರಿ ಗೆಲವು, ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗೆ ಮುಖಭಂಗ..ಗೆಲುವಿನ ಬೆನ್ನಲ್ಲೇ ಹೆಬ್ಬಾರ್ ,ಹೆಗಡೆಗೆ ಚಾಟಿ ಬೀಸಿದ ಕಾಗೇರಿ..
ಮಹಿಳೆಯರ ಮೇಲೆ ದೌರ್ಜನ್ಯ, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ