
ಕಾರವಾರ: ಸಾವಿರಾರು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣನನ್ನ ತಕ್ಷಣವೇ ಬಂಧಿಸುವAತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್‌ನಿAದ ಪ್ರತಿಭಟಿಸಲಾಯಿತು.

ಪ್ರಜ್ವಲ್ ರೇವಣ್ಣ ವಿರುದ್ಧ ಫಲಕ ಪ್ರದರ್ಶಿಸಿ ಘೋಷಣೆ ಕೂಗಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು, ಫಲಕವನ್ನ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಕೆಲಸದಾಕೆ ಸೇರಿದಂತೆ ಸಾವಿರಾರು ಹೆಣ್ಣುಮಕ್ಕಳ ಮೇಲೆ ಹೀನ ಕೃತ್ಯ ಎಸಗಿರುವುದು ಅಕ್ಷಮ್ಯ. ರಾಜಕೀಯ ಪ್ರಭಾವ ಬಳಸಿ ಹೆಣ್ಣುಮಕ್ಕಳನ್ನ ಬಳಸಿಕೊಂಡಿರುವ ಅಂಥವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನೇ ನೀಡಬಾರದು ಎಂದು ಆಗ್ರಹಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವ್ಕರ್, ಅತ್ಯಾಚಾರಿ ಪ್ರಜ್ವಲ್ ರೇವಣ್ಣ ಅವರನ್ನ ಶೀಘ್ರವೇ ಬಂಧಿಸಬೇಕು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ‘ಭೇಟಿ ಬಚಾವೋ ಭೇಟಿ ಪಡಾವೋ’ ಎನ್ನುವ ಬಿಜೆಪಿಗರು ಈ ಪ್ರಕರಣದ ಬಗ್ಗೆ ಸೊಲ್ಲೆತ್ತದೆ ತಾವು ಮಹಿಳಾ ವಿರೋಧಿ ಎಂದು ತೋರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
More Stories
ಗಾನಶ್ರೀ -2024-ಜಿಲ್ಲಾ ಮಟ್ಟದ ಹಾಡುವ ಸ್ಪರ್ಧೆ
ಕಾಗೇರಿ ಗೆಲವು, ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗೆ ಮುಖಭಂಗ..ಗೆಲುವಿನ ಬೆನ್ನಲ್ಲೇ ಹೆಬ್ಬಾರ್ ,ಹೆಗಡೆಗೆ ಚಾಟಿ ಬೀಸಿದ ಕಾಗೇರಿ..
ಕಾಗೇರಿ ಕಣ್ಣಲ್ಲಿ ರಕ್ತವಿಲ್ಲ, ಬಡಜನರ ಕಾಳಜಿ ಇಲ್ಲ: ಮಾರ್ಗರೇಟ್ ಆಳ್ವಾ ವಾಗ್ದಾಳಿ