December 22, 2024

Bhavana Tv

Its Your Channel

೧ ಲಕ್ಷ ರು. ಮೌಲ್ಯದ ಪರಿಕರಗಳನ್ನು ಮಾಜಿ ಶಾಸಕಿ ಶಾರದಾ ಶೆಟ್ಟಿ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಹಸ್ತಾಂತರ

ಕುಮಟಾ: ದೇಶಪಾಂಡೆ ಟ್ರಸ್ಟ್ ನಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ನೀಡಲಾದ ಸುಮಾರು ೧ ಲಕ್ಷ ರು. ಮೌಲ್ಯದ ಪರಿಕರಗಳನ್ನು ಮಾಜಿ ಶಾಸಕಿ ಶಾರದಾ ಶೆಟ್ಟಿ ಆಸ್ಪತ್ರೆಗೆ ಹಸ್ತಾಂತರಿಸಿದರು.

ನಂತರ ಮಾತನಾಡಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕುಮಟಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ ನಾಯ್ಕ ಡಯಾಲಿಸಿಸ್ ಕೇಂದ್ರಕ್ಕೆ ಉಪಕರಣಗಳ ಕೊರತೆಯಿಂದ ರೋಗಿಗಳಿಗೆ ತೀವೃ ತೊಂದರೆಯಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದರು. ಡಯಾಲಿಸಿಸ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ವಿ.ಆರ್.ದೇಶಪಾಂಡೆ ಟ್ರಸ್ಟ್ ಮೂಲಕ ಸುಮಾರು ೧ ಲಕ್ಷ ರು. ಮೌಲ್ಯದ ವಿವಿಧ ವಸ್ತುಗಳನ್ನು ನೀಡಿದ್ದಾರೆ.

ಹೊನ್ನಾವರ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿರುವ ಉಪಕರಣದ ಮದರ್‌ಬೋರ್ಡ್ ಕೆಟ್ಟಿದ್ದು, ೧.೫೦ ಲಕ್ಷ ರು. ಮೌಲ್ಯದ ಮದರ್‌ಬೋರ್ಡ್ ಕಳುಹಿಸಿದ್ದು, ದುರಸ್ಥಿ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಆರ್.ವಿ.ದೇಶಪಾಂಡೆ ಹಾಗೂ ಅವರ ಪುತ್ರ ಪ್ರಶಾಂತ ದೇಶಪಾಂಡೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದರ ಸಂಪೂರ್ಣ ಪ್ರಯೋಜನಗಳನ್ನು ರೋಗಿಗಳು ಪಡೆದುಕೊಳ್ಳಬೇಕು ಎಂದರು.

ಜಿ.ಪಂ ಸದಸ್ಯ ರತ್ನಾಕರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಪುರಸಭಾ ಸದಸ್ಯರಾದ ಎಂ.ಟಿ.ನಾಯ್ಕ, ವಿನಯಾ ಜಾರ್ಜ್, ಲಕ್ಷ್ಮೀ ಗೊಂಡ, ಅಲ್ಪಸಂಖ್ಯಾತರ ತಾಲೂಕಾಧ್ಯಕ್ಷ ಮುಜಾಫರ್, ಪಕ್ಷದ ಪ್ರಮುಖರಾದ ಸಚಿನ ನಾಯ್ಕ, ಮನೋಜ ನಾಯಕ, ವಿಜಯ ವೆರ್ಣೇಕರ್, ವೀಣಾ ನಾಯಕ ತಲಗೇರಿ, ನಿತ್ಯಾನಂದ ನಾಯ್ಕ, ಮೈಕಲ್ ರೊಡ್ರಗೀಸ್, ದತ್ತು ಶೆಟ್ಟಿ, ಗಣೇಶ ಶೆಟ್ಟಿ, ರಾಘವೇಂದ್ರ ಗಾಡಿಗ ಇದ್ದರು.

error: