May 17, 2024

Bhavana Tv

Its Your Channel

ಎರಡು ವರ್ಷದ ಪುಟಾಣಿ ಬಾಲಕಿ ದ್ಯುತಿ ಇಂಡಿಯಾ ಬುಕ್ ಬುಕ್ ಆಫ್ ರೆಕಾರ್ಡ್ಸ್ ಆಯ್ಕೆ

ಕುಮಟಾ : ಎರಡು ವರ್ಷದ ಪುಟಾಣಿ ಬಾಲಕಿ ದ್ಯುತಿ ವಿನೋದ ರಾವ್ ಇಂಡಿಯಾ ಬುಕ್ ಬುಕ್ ಆಫ್ ರೆಕಾರ್ಡ್ಸ್ ಆಯ್ಕೆ ಆಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ . ಜಿಲ್ಲೆಯ ಕುಮಟಾ ತಾಲ್ಲೂಕಿನ ಹೆರವಟ್ಟಾದ ವಿನೋದ ರಾವ್ ಮತ್ತು ರಂಜನಾ ದಂಪತಿ ಮಗಳಾದ ದ್ಯುತಿ ವಿನೋದ ರಾವ್ ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾಳೆ .

೩೫ ಪ್ರಾಣಿಗಳು , ೧೫ ಪಕ್ಷಿಗಳು , ೧೨ ರೀತಿಯ ಬಣ್ಣಗಳು , ೩೦ ರೀತಿಯ ತಿಂಡಿಗಳು , ೨೩ ತರಕಾರಿಗಳು , ೨೦ ರೀತಿಯ ಹಣ್ಣುಗಳು , ೧೭ ರೀತಿಯ ಹೂಗಳು , ೧೬ ವಾಹನಗಳು , ೧೨ ರೀತಿಯ ಆಕೃತಿಗಳು , ೨೦ ಜನ ರಾಜಕಾರಿಣಿಗಳು , ೧೩ ಜನ ಸ್ವಾತಂತ್ರ‍್ಯ ಹೋರಾಟಗಾರರು , ೧೮ ಜಾತಿಯ ಕೀಟಗಳು , ೧೫ ಜನ ಕ್ರಿಕೇಟರ್ ಗಳು ೩೫ ಜನ ಸೆಲಬ್ರಿಟಿಗಳು , ೮ ಜನ ಮಹಿಳಾ ಸಾಧಕರು , ೨೯ ರಾಜ್ಯಗಳು , ೨೦ ಜಾತಿಯ ನಾಯಿಗಳು , ೧ ರಿಂದ ೨೦ ರವರೆಗಿನ ಹಿಂದಿ ಸಂಖ್ಯೆಗಳು , ೧ ರಿಂದ ೧೦ ರ ವರೆಗಿನ ಆಂಗ್ಲಾ ಸಂಖ್ಯೆಗಳು , ೧ ರಿಂದ ೧೦ ರ ವರೆಗಿನ ಕನ್ನಡ ಸಂಖ್ಯೆಗಳು , ಂಃಅಆ ಯಿಂದ Z ವರೆಗೆ , ೨ ಇಂಗ್ಲೀಷ್ ರೈಮ್ಸ್ , ೨ ಭಗವದ್ಗೀತೆಯ ಶ್ಲೋಕಗಳು , ೧೨ ತಿಂಗಳುಗಳು , ವಾರದ ೭ ದಿನಗಳು , ಹಾಗೂ ವಿವಿಧ ಅಂತರಾಷ್ಟ್ರೀಯ ೨೮೦ ಕ್ಕು ಹೆಚ್ಚಿನ ಕಂಪನಿಗಳ ಲೋಗೊಗಳನ್ನು ಗುರುತಿಸುತ್ತಾಳೆ . ದ್ಯುತಿ ವಿನೋದ ರಾವ್ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ .

ಒಟ್ಟಾರೆ ಪುಟ್ಟ ವಯಸ್ಸಿನಲ್ಲಿಯೇ ಇಷ್ಟೊಂದು ಜ್ಞಾನವಂತನಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ದ್ಯುತಿ ವಿನೋದ ರಾವ್ ಮುಂದಿನ ದಿನಗಳಲ್ಲಿ ಇನ್ನಷ್ಟೂ ನೂತನ ಸಾಧನೆಗಳನ್ನು ಮಾಡಲಿ , ಆ ಮೂಲಕ ದೇಶಕ್ಕೆ ಉತ್ತಮ ಹೆಸರು ತಂದುಕೊಡಲಿ ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ .

error: