December 22, 2024

Bhavana Tv

Its Your Channel

ಕುಮಟಾ ಲಯನ್ಸ್ ಕ್ಲಬ್ ವತಿಯಿಂದ ಮಹಿಳಾ ಸಬಲೀಕರಣ ಯೋಜನೆಯಡಿ ಹೊಲಿಗೆ ಯಂತ್ರಗಳ ತರಬೇತಿ

ಕುಮಟಾ: ಲಾಕ್ ಡೌನ್‌ನಿಂದ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಅಂಥವರಿಗೆ ಸ್ಥಳೀಯವಾಗಿ ಸ್ವಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕುಮಟಾ ಲಯನ್ಸ್ ಕ್ಲಬ್ ಹಮ್ಮಿಕೊಂಡಿರುವ ಯೋಜನೆ ಅತ್ಯಂತ ಪ್ರಯೋಜನಕಾರಿ ಎನಿಸಲಿದೆ ಎಂದು ಲಯನ್ಸ್ ನ ಮಹಿಳಾ ಸಬಲೀಕರಣ ಪ್ರಾಜೆಕ್ಟ್ ಚೇರ್ ಮೆನ್ ರವಿ ಹೆಗಡೆ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಲಯನ್ಸ್ ಸೇವಾಭವನದಲ್ಲಿ ಮಹಿಳಾ ಸಬಲೀಕರಣ ಯೋಜನೆಯಡಿ ಹೊಲಿಗೆ ಯಂತ್ರಗಳ ತರಬೇತಿ ತರಗತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೊಲಿಗೆ ಕಲಿಯಲು ಆಸಕ್ತಿ ಹೊಂದಿದವರು ಸಾಕಷ್ಟು ಮಂದಿಯಿದ್ದರೂ ಪ್ರಾದೇಶಿಕವಾಗಿ ಸೂಕ್ತ ತರಬೇತಿಯ ಕೊರತೆ ಕಂಡು ಬಂದಿತ್ತು. ಎಷ್ಟೋ ಮಂದಿ ಬಡವರು ಅಲ್ಪಸ್ವಲ್ಪ ಹೊಲಿಗೆ ಕಲಿತರೂ ಅದನ್ನೇ ಉದ್ಯಮವಾಗಿ ರೂಪಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ, ಲಯನ್ಸ್ ನಿಂದ ಅಂಥವರಿಗೆ ಪ್ರೇರಣೆ ನೀಡುವ ಕಾರ್ಯ ಆಗಬೇಕು ಎಂಬುದು ಡಾ.ಗಿರೀಶ ಕುಚಿನಾಡು ಅವರ ಆಶಯವೂ ಆಗಿತ್ತು. ಉತ್ತಮ ಯೋಜನೆಯಾದ ಕಾರಣ ಜಿಲ್ಲೆಯೆಲ್ಲೆಡೆ ಇದನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಲಯನ್ಸ್ ಕ್ಲಬ್ ನ ಜಿಲ್ಲಾ ಗವರ್ನರ್ ಡಾ.ಗಿರೀಶ ಕುಚಿನಾಡು, ನಿರುದ್ಯೋಗ ಸಮಸ್ಯೆ ನೀಗಿಸುವುದಷ್ಟೆ ಅಲ್ಲದೆ, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಭವಿಷ್ಯದ ಪ್ರತಿಯೊಂದು ಹೆಜ್ಜೆಗಳನ್ನು ಆತ್ಮವಿಶ್ವಾಸದೊಂದಿಗೆ ಇಡಲು ಇಂತಹ ತರಗತಿಗಳು ಅನುಕೂಲಕರ ಎಂದರು.

ಈ ಸಂದರ್ಭದಲ್ಲಿ ಲಯನ್ಸ ಕ್ಲಬ್ ಅಧ್ಯಕ್ಷೆ ವಿನಯಾ ಹೆಗಡೆ, ಕಾರ್ಯದರ್ಶಿ ಎಸ್.ಎಸ್. ಹೆಗಡೆ ಹೊಲನಗದ್ದೆ, ಎನ್.ಕೆ.ಶಾನಭಾಗ, ನೀರಜಾ ನಾಯಕ, ಎಂ.ಎo.ಹೆಗಡೆ, ರೇವತಿ ರಾವ್ ಮುಂತಾದವರು ಇದ್ದರು.

error: