December 21, 2024

Bhavana Tv

Its Your Channel

ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ ಕೆ ಹರಿಪ್ರಸಾದ

ಕುಮಟಾ : ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬರೀ ಸುಳ್ಳು ಭರವಸೆಗಳ ಮೂಲಕ ಜನರ ದಾರಿತಪ್ಪಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಮತ್ತು ಮಾಜಿ ಸಂಸದ ಬಿ ಕೆ ಹರಿಪ್ರಸಾದ ಹೇಳಿದರು.

ಅವರು ಪಟ್ಟಣದ ವೈಭವ ಹೋಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರ ಘೋಷಿಸಿದ್ದ ೩೫ ಸಾವಿರ ಕೋಟಿ ಲಸಿಕೆ ಹಣ ಲೆಕ್ಕತಪ್ಪಿದೆ. ಮೇ ೧ರಿಂದ ಲಸಿಕೆ ಉತ್ಸವ ಆರಂಭಿಸುತ್ತೇವೆ ಎಂದು ಸರ್ಕಾರ ಘೋಷಿಸಿದೆ. ಇದೊಂದು ಅಪ್ಪಟ ಪ್ರಚಾರದ ಘೋಷಣೆ. ಕೊರೋನಾದಿಂದ ಜೀವ ಕಳೆದುಕೊಂಡವರಿಗೆ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡದ ಸರ್ಕಾರ ಏಳು ದಿನಗಳ ಕಾಲ ಶವ ಸಂಸ್ಕಾರಕ್ಕಾಗಿ ಕಾಯುವ ದುಃಸ್ಥಿತಿ ಎದುರಾಗಿದೆ. ಇದೊಂದು ಅಮಾನವೀಯ ಸನ್ನಿವೇಷವಾಗಿತ್ತು. ಇಂಥ ಕಠೋರ ಪರಿಸ್ಥಿತಿಯಲ್ಲಿ ನೊಂದ ಜನರಿಗೆ ಸರ್ಕಾರ ಸೌಜನ್ಯಕ್ಕೂ ಸಾಂತ್ವನ ಹೇಳಿಲ್ಲ. ಸರ್ಕಾರ ೨೬೦ ಕೋಟಿ ಲಸಿಕೆ ಘೋಷಿಸಿತ್ತು. ಆದರೆ ಇದನ್ನು ಕಾರ್ಯಗತಗೊಳಿಸದೇ ಜನರ ಮೂಗಿಗೆ ತುಪ್ಪ ಸವೆದಿದೆ. ಕೊರೋನಾ ಮೊದಲ ಅಲೆಯ ನಂತರ ಕೇಂದ್ರ ಸರ್ಕಾರ ೨೧ ಲಕ್ಷ ಕೋಟಿ ಕ್ಯಾರಫಂಡ್ ಘೋಷಿಸಿತ್ತು. ಇದರ ಮಾಹಿತಿ ಎಲ್ಲಿಯೂ ಲಭ್ಯವಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕೊರೋನಾ ನಿರ್ವಹಣೆಯಲ್ಲಿ ವಿಫಲಗೊಂಡಿದ್ದಲ್ಲದೇ ಜನರನ್ನು ಆರ್ಥಿಕ ಸಂಕಷಕ್ಕ್ಕೆ ದೂಡಿದೆ. ಪ್ರಕೃತಿವಿಕೋಪ ಮತ್ತು ದೇಶದಲ್ಲಿ ದುರಂತಗಳು ಸಂಭವಿಸಿದಾಗ ಜನರ ರಕ್ಷಣೆ ಮಾಡುವುದು ಸರ್ಕಾರಗಳ ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಈ ಕಾರ್ಯ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ವಿಕೃತ ಮನಸ್ಥಿತಿಯನ್ನು ಹೊಂದಿದೆ. ಇಂಥ ಕಷ್ಟಕರ ಪರಿಸ್ಥಿತಿಯಲ್ಲಿ ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಲಂಗುಲಗಾಮ್ ಇಲ್ಲದೇ ಏರಿಸುತ್ತಿರುವುದು ದೇಶದ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ದೇಶವನ್ನು ಕೊರೋನಾ ಮುಕ್ತಗೊಳಿಸುವೇ ಕಾಂಗ್ರೆಸ್ ಉದ್ದೇಶವಾಗಿದ್ದರಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಮನೆ ಮನೆಗೆ ಸಹಾಯ ಹಸ್ತ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.


ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಮಾತನಾಡಿ, ಕೊರೋನಾದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮವನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ ಅವರು ಚಾಲನೆ ನೀಡಿದ್ದಾರೆ. ಸರ್ಕಾರ ಜನರ ಬಗ್ಗೆ ಕಾಳಜಿ ವಹಿಸದೇ ಇದ್ದರೂ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದರು.
ಕಾAಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿಯಾದ ಜಿ ಎ ಭಾವಾ, ವಿ ಎಸ್ ಆರಾಧ್ಯ, ನವೀನಚಂದ್ರ ಶೆಟ್ಟಿ, ಅಬ್ದುಲ್ ಮಜೀದ್, ಬಸವರಾಜ ದೊಡ್ಡಮನಿ, ಕಾಂಗ್ರೆಸ್ ಪ್ರಮುಖರಾದ ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ಸುರೇಖಾ ವಾರೇಕರ್, ಪುರಸಭೆ ಸದಸ್ಯರು, ಗ್ರಾಪಂ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

error: