December 22, 2024

Bhavana Tv

Its Your Channel

ಹುನಗುಂಡಿ ಗ್ರಾಮದಲ್ಲಿ ಕೆಂಚಮ್ಮ ದೇವಸ್ಥಾನದಲ್ಲಿ ಸಿದ್ಧರೂಢರ ಪುರಾಣ, ಶಿವಾನಂದರ ಪುರಾಣ ಹಾಗೂ ಕೀರ್ತನ ಮುಕ್ತಾಯ ಸಮಾರಂಭ

ಹುನಗುಂಡಿ : ಹುನಗುಂಡಿ ಗ್ರಾಮದಲ್ಲಿ ಕೆಂಚಮ್ಮ ದೇವಸ್ಥಾನದಲ್ಲಿ ಸಿದ್ಧರೂಢರ ಪುರಾಣ, ಶಿವಾನಂದರ ಪುರಾಣ ಹಾಗೂ ಕೀರ್ತನ ಮುಕ್ತಾಯ ಸಮಾರಂಭ ಜರುಗಿತು. ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಸವಂತಪ್ಪ ಎಚ್. ತಳವಾರ ರೋಣ ತಾಲೂಕ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹಾಗೂ ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷ ಇವರು ಮಾತನಾಡಿ ಪುರಾತನ ಕಾಲದಿಂದ ಬಂದAತಹ ಪುರಾಣ, ಕೀರ್ತನ, ಈಗ ಸದ್ಯ ಮಾಯವಾಗಿವೆ. ಪುನಶ್ವೇತನ ಮಾಡಲಿಕ್ಕೆ ಗ್ರಾಮೀಣ ಪ್ರದೇಶದಲ್ಲಿ ಹಿರಿಯರು, ಯುವಕರು, ಗ್ರಾಮದಲ್ಲಿ ಪುರಾಣ ಪ್ರವಚನ ಯಶಸ್ವಿಯಾಗಿ ಪ್ರಾರಂಭ ಮಾಡಿದರು. ಈ ಪುರಾಣ ಕೀರ್ತನೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಬಹಳ ತತ್ವಗಳನ್ನು ತಿಳಿದುಕೊಂಡು ಸಮಾಜದಲ್ಲಿ ಉತ್ತಮರಾಗಿ ಬಾಳಬೇಕು. ಬರೆ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮಾಡಿದರೆ ಸಾಲದು ಇದರ ಜೊತೆಗೆ ಪುರಾಣದ ತತ್ವಗಳನ್ನು ತಿಳಿದುಕೊಳ್ಳಬೇಕು. ಮಹಾಸ್ವಾಮಿಗಳು ಪುರಾಣದಲ್ಲಿ ಇಲ್ಲಿಯವರೆಗೆ ಹೇಳಿದ ಎಲ್ಲಾ ತತ್ವಗಳನ್ನು ತಿಳಿದುಕೊಂಡು ಜನರಿಗೆ ಮನವರಿಕೆಯಾಗುವಂತೆ ತಿಳುವಳಿಕೆ ಹೇಳಬೇಕು. ಅಮಾವಾಸ್ಯೆ, ಹುಣ್ಣಿಮೆ, ಒಳ್ಳೆಯ ದಿನಗಳು ಬರುವುದರಿಂದ ಪೂಜೆ, ಪುರಸ್ಕಾರ, ಗ್ರಾಮೀಣ ಪ್ರದೇಶದಲ್ಲಿ, ನಗರಗಳಲ್ಲಿ ಪೂಜೆಗಳನ್ನು ಮಾಡುವುದರಿಂದ ಭಕ್ತಿ ಭಾವದಿಂದ ನಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಪುರಾಣ, ಪ್ರವಚನಗಳಲ್ಲಿ ಹಿರಿಯರು, ಯುವಕರು, ಮಹಿಳೆಯರು, ಉತ್ತಮ ಸಂದೇಶಗಳನ್ನು ತಿಳಿದುಕೊಂಡು ಸಮಾಜದಲ್ಲಿ ಬೆಳೆಯಬೇಕೆಂದು ಯುವಕರಿಗೆ ಕರೆ ನೀಡಿದರು. ನಂತರ ಪುರಾಣದ ಸಿದ್ಧಾರೂಢರ, ಶಿವಾನಂದರ ಫೋಟೋ ಕೆಂಚಮ್ಮದೇವಿ ಪ್ರಾರಂಭಗೊAಡು ಎಲ್ಲಾ ದೇವಾಲಯಗಳಿಗೆ ಮೆರವಣಿಗೆಯನ್ನು ಸಂಗೀತದಿAದ ರಾಯಣ್ಣ ಮಹಿಳಾ ಡೊಳ್ಳು ಕುಣಿತ ಕೊಣ್ಣೂರು ಇವರಿಂದ ಹಾಗೂ ಬೀರಲಿಂಗೇಶ್ವರ ಡೊಳ್ಳಿನ ಸಂಘ ಹುನಗುಂಡಿ, ಗ್ರಾಮದಲ್ಲಿ ರಸ್ತೆಗಳ ಮುಖಾಂತರ ಮೆರವಣಿಗೆ ಮಾಡಿದರು. ನಂತರ ಅನ್ನಪ್ರಸಾದ ನೆರವೇರಿತು.


ಈ ಸಭೆಯಲ್ಲಿ ಸಾನಿಧ್ಯ ವಹಿಸಿದ ನಿಜಗುಣ ಮಹಾಸ್ವಾಮಿಗಳು ಹಳಕಟ್ಟಿ ಅಶೀರ್ವಚನ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಪುರಾಣ ಪುಣ್ಯತಿಥಿಗಳನ್ನು ಬಹಳ ನಶಿಸಿಹೋಗಿವೆ. ಪುನಃ ಗ್ರಾಮದಲ್ಲಿ ಸಿದ್ಧಾರೂಢರ ಪುರಾಣ ಶಿವಾನಂದರ ಪುರಾಣ, ಕೀರ್ತನ, ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಮಾಡಿದ್ದೀರಿ ದೇವರು ನಿಮ್ಮೆಲ್ಲರಿಗೂ ಆಶೀರ್ವಾದಮಾಡಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಇದೇ ಸಂದರ್ಭದಲ್ಲಿ ಚಿದ್ರುಪಾನಂದ ಮಹಾಸ್ವಾಮಿಗಳು ಹನ್ನೊಂದು ದಿನಗಳವರೆಗೆ ಪುರಾಣ, ಕೀರ್ತನ, ಬಹಳ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದರು. ಪುರಾಣದ ಬಗ್ಗೆ ಬಹಳ ತತ್ವಗಳನ್ನು ಹೇಳಿ ಜನರಿಗೆ ಒಳ್ಳೆಯ ಮಾರ್ಗದರ್ಶನ ನೀಡಿದರು. ಈ ಸಭೆಯಲ್ಲಿ ಹನ್ನೊಂದು ದಿನಗಳವರೆಗೆ ಕೀರ್ತನಗಳನ್ನು ಸಕ್ಕರಗೌಡ್ರ ಶಾಸ್ತ್ರಿಗಳು ಯಶಸ್ವಿಯಾಗಿ ಗ್ರಾಮೀಣ ಪ್ರದೇಶದ ಪುರಾಣದ ಸಿದ್ಧಾರೂಢ ಶಿವಾನಂದರ ಪುರಾಣ ಕೀರ್ತನಗಳನ್ನು ಯಶಸ್ವಿಯಾಗಿ ನಡೆಸಿ ಹಿರಿಯರು, ಯುವಕರು, ಮಹಿಳೆಯರು, ದೇವರ ತತ್ವಗಳನ್ನು ತಿಳಿದುಕೊಂಡು ಸಮಾಜದಲ್ಲಿ ಬೆಳೆಯಬೇಕೆಂದು ಕರೆ ನೀಡಿದರು.


ಈ ಸಭೆಯಲ್ಲಿ ಕೃಪಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹುನಗುಂಡಿ ಗ್ರಾಮದಲ್ಲಿ ೯ ವರ್ಷದಿಂದ ಸತತ ಪುರಾಣ, ಕೀರ್ತನ, ನಡೆಸಿಕೊಂಡು ಬಂದಿದ್ದೀರಿ. ಮುಂದಿನ ದಿನಮಾನಗಳವರೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿಕೊಂಡು ಹೋಗಬೇಕೆಂದು ಹಿರಿಯರಿಗೆ, ಯುವಕರಿಗೆ ಮಹಿಳೆಯರಿಗೆ ಆಶೀರ್ವಚನ ನೀಡಿದರು. ಪುರಾಣದ ತತ್ವಗಳನ್ನು ತಿಳಿದುಕೊಂಡು ಸಮಾಜದಲ್ಲಿ ಹೆಚ್ಚಿನ ಸ್ಥಾನ ಬೆಳೆಯಬೇಕೆಂದು ಹುನಗುಂಡಿ ಗ್ರಾಮದ ಎಲ್ಲಾ ಜನರಿಗೂ ಆಶೀರ್ವಚನ ನೀಡಿದರು. ಈ ಸಭೆಯಲ್ಲಿ ಬಿ. ವಾಯ್. ಮಂಡಸೊಪ್ಪಿ, ಎಸ್. ವಾಯ್. ಮಂಡಸೊಪ್ಪಿ, ಹೆಚ್. ವ್ಹಿ. ಮುದೇನಗುಡಿ, ಶಿವಾಜಿ ಎಚ್. ಮಂಡಸೊಪ್ಪಿ, ಎಂ. ಎಚ್ ಜಂತ್ಲಿ, ಕೆ. ಆರ್. ವಿರೇಶನ್ನವರ, ವಿನೋದ ಸಾಲಿಮಠ, ಎಸ್. ಸಿ. ಆಲೂರ, ಮುಂತಾದ ಗ್ರಾಮದ ಹಿರಿಯರು ಸಭೆಯಲ್ಲಿದ್ದರು. ಕೊನೆಯಲ್ಲಿ ವಂದನಾರ್ಪಣೆಯೊoದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ: ವೀರಣ್ಣ ರೋಣ

error: