ಕುಮಟಾ ತಾಲೂಕಿನ , ಮೂರೂರ ಕಂದಳ್ಳಿ ಭಾಗಕ್ಕೆ ಹಟ್ಟೆ ಕೇರಿಯ ಬಿ,ಎಸ್,ಎನ್,ಎಲ್, ಟವರಿನ , ನೆಟವರ್ಕ್ ಹೆಚ್ಚಿಸಲು ಕರ್ನಾಟಕ ರಕ್ಷಣ ವೇದಿಕೆ ವತಿಯಿಂದ ಬಿ,ಎಸ್,ಎನ್,ಎಲ್, ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು
ನಂತರ ಕ, ರ ವೇ ಜಿಲ್ಲಾ ಅಧ್ಯಕ್ಷ ಭಾಸ್ಕರ್ ಪಟಗಾರ ಮಾತನಾಡಿ ತಾಲೂಕಿನ , ಮೂರೂರು ವ್ಯಾಪ್ತಿಯ ಕಂದಳ್ಳಿ ಭಾಗದಲ್ಲಿ, ಯಾವುದೇ ರೀತಿಯ ದೂರವಾಣಿ ಸಂಪರ್ಕವಿಲ್ಲದೆ ಸ್ಥಳೀಯ ಜನರಿಗೆ ತೊಂದರೆಯಾಗಿದೆ . ಬಿ,ಎಸ್,ಎನ್,ಎಲ್ ಟವರ್ ಹಟ್ಟಿ ಕೇರಿಯಲ್ಲಿ ಇರುವುದರಿಂದ , ಅಲ್ಲಿನ ಟವರಿನ ನೆಟವರ್ಕ್ ಹೆಚ್ಚಿಗೆ ಮಾಡುವುದರಿಂದ , ಸುತ್ತಮುತ್ತಲಿನ ಹಳ್ಳಿಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಿಬಹುದು . ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕೋರೋನ , ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ , ಆನ್ಲೈನ್ ತರಗತಿಯನ್ನು ವಿದ್ಯಾರ್ಥಿಗಳು ಪಡೆಯಲು , ದೂರವಾಣಿ ಹಾಗೂ ಇಂಟರ್ನೆಟ್ ಸೌಲಭ್ಯ ಅವಶ್ಯಕತೆ ಇದೆ . ದಯವಿಟ್ಟು ಈ ಕೂಡಲೇ ಹಟ್ಟಿ ಕೇರಿಯ ಟವರಿನ ನೆಟವರ್ಕ್ ಹೆಚ್ಚಿಸುವ ಮೂಲಕ , ಮುಂದಿನ ದಿನದಲ್ಲಿ ಸ್ಥಳೀಯರಿಗೆ ದೂರವಾಣಿ ಸೌಲಭ್ಯವನ್ನು ಒದಗಿಸಬೇಕು ಎಂದರು
ಈ ಸಂದರ್ಭದಲ್ಲಿ. ತಿಮ್ಮಪ್ಪ ನಾಯಕ್. ಅಶೋಕ್ ಗೌಡ. ಮಂಜುನಾಥ್ ಗೌಡ. ಮಹೇಂದ್ರ ನಾಯಕ್. ಸುಬ್ರಾಯ ಗೌಡ. ಶಂಕರಗೌಡ. ರಘುಪತಿ ಗೌಡ. ಮಂಜುನಾಥಗೌಡ ಇದ್ದರೂ
ವರದಿ: ನಟರಾಜ ಗದ್ದೆಮನೆ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ