December 22, 2024

Bhavana Tv

Its Your Channel

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ನನ್ನ ಅಭಿವೃದ್ದಿ ಕಾರ್ಯಕ್ರಮಗಳನ್ನು ಸಹಿಸದೆ ವಿನಾಕಾರಣ ಆರೋಪ- ಶಾಸಕ ದಿನಕರ ಶೆಟ್ಟಿ

ಕುಮಟಾ :ಕಾರ್ಮಿಕರ ಕಿಟ್ ನಾವು ಯಾರಾದರೂ ಮನೆಗೆ ತೆಗೆದುಕೊಂಡು ಹೋಗಿದ್ದೇವಾ ನಾವು ಕಾರ್ಮಿಕರ ಕಾರ್ಡ ಹೊಂದಿರುವರಿಗೆ ಪ್ರಾಮಾಣಿಕವಾಗಿ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ನನ್ನ ಅಭಿವೃದ್ದಿ ಕಾರ್ಯಕ್ರಮಗಳನ್ನು ಸಹಿಸದೆ ವಿನಾಕಾರಣ ಅವರು ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿಯವರು ಹೇಳಿದರು.

ಅವರು ಕಾರ್ಮಿಕರ ಇಲಾಖೆಯ ಪುಡ್ ಕಿಟ್ ಕುಮಟಾದ ಕತಗಾಲ್‌ನಲ್ಲಿ ವಿತರಿಸಿ ಮಾತನಾಡಿದರು.
ನಾನು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಅವರಲ್ಲಿ ವಿನಂತಿ ಮಾಡಿ ೧೦೦೦೦ ಪುಡ್ ಕಿಟ್ ನೀಡಲು ಹೇಳಿದ್ದೆ ಆದರೆ ಅವರು ೮೦೦೦ ಪುಡ್ ಕಿಟ್ ಕುಮಟಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ನಾನು ಮಾಡುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರಿಗೆ ತಮ್ಮ ರಾಜಕೀಯ ನೆಲೆ ಕಳೆದುಕೊಳ್ಳುತ್ತಾರೆ ಎನ್ನುವ ಭಯದಿಂದ ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.ನನ್ನ ಕ್ಷೇತ್ರದಲ್ಲಿ ಉತ್ತಮವಾದ ರಸ್ತೆ ಕಾಮಗಾರಿಯನ್ನು ಮಾಡಿದ್ದೇನೆ ಎಲ್ಲಾದರೂ ನಾನು ಮಾಡಿದ ಕಾಮಗಾರಿಯಲ್ಲಿ ಕಳಪೆ ಕಾಮಗಾರಿಯಾಗಿದೆ ಎಂದು ಪ್ರಶ್ನಿಸಿದರು. ನನ್ನ ಬಗ್ಗೆ ತಪ್ಪು ಹುಡುಕಲು ಆದುಷ್ಟಶಕ್ತಿಗಳಿಗೆ ಅವಕಾಶ ಇಲ್ಲವಾಗಿತ್ತು. ಅವರು ಕಾರ್ಮಿಕರ ಕಿಟ್ ಹಂಚಿಕೆಯ ವಿರುದ್ದ ನನ್ನ ಬಗ್ಗೆ ಆರೋಪ ಮಾಡಿ ಜನತೆಯಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನು ಏನಾದ್ರೂ ಪುಡ್ ಕಿಟ್ ಮಾರಾಟ ಮಾಡಿದ್ದೇನಾ, ನಾನು ಕೋವಿಡ್ ಸಂದರ್ಭದಲ್ಲಿ ಪುಡ್ ಕಿಟ್ ಉಚಿತವಾಗಿ ಜನರಿಗೆ ನೀಡಿದ್ದೇನೆ ತರಕಾರಿಯನ್ನು ನೀಡಿದ್ದೇನೆ. ಎಂದು ಹೇಳಿದರು.

ನಮ್ಮ ಮೇಲೆ ಹಾಗೂ ಶಾಸಕರ ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಆರೋಪವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ , ಸತ್ಯವಾಗಿದ್ದರೆ ನಾವು ತಿದ್ದಿಕೋಳ್ಳುತ್ತೇವೆ, ನಾವು ಬಡವರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ನೀಡುತ್ತಿದ್ದೇವೆ. ಕಿಟ್ ಎಷ್ಟೋ ಕಾರ್ಮಿಕರಿಗೆ ಸಿಗದೆ ಇರುವುದು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರೆ ನೇರ ಕಾರಣ. ಜನರಿಗೆ ನೀವು ಬನ್ನಿ ನಾವು ಕಿಟ್ ಕೋಡುತ್ತೇವೆ ಎಂದು ಹೇಳಿ ಕಾರ್ಮಿಕರ ಕಚೇರಿಗೆ ಕರೆದುಕೊಂಡು ಬಂದು, ನಂತರ ನಮ್ಮ ಪಕ್ಷ ಹಾಗೂ ಶಾಸಕರಿಗೆ ಬೈಯುವುದು ಹಾಗೂ ತಹಶಿಲ್ದಾರ್ ಕಚೇರಿಗೆ ಹೋಗಿ ಮನವಿಕೊಡುವುದು ಮಾಡಿದ್ದರಿಂದ ಸರಿಯಾಗಿ ಜನರಿಗೆ ಕಿಟ್ ತಲುಪಿಸಲು ಸಾಧ್ಯವಿಲ್ಲ. ನಾವು ಜನಸೇವೆಗಾಗಿ ರಾಜಕೀಯಕ್ಕೆ ಬಂದಿರುವುದು, ನಮ್ಮ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರ ಜನರಪರ ಕಾರ್ಯಕ್ರಮವನ್ನು ಕೊಟ್ಟಿದ್ದರಿಂದ ಜನರು ಮತ್ತೊಮ್ಮೆ ಬಿಜೆಪಿಯ ಪರ ಇರುತ್ತಾರೆ, ಮತ್ತೆ ದಿನಕರ ಶೆಟ್ಟಿಯವರು ಶಾಸಕರಾಗುತ್ತಾರೆ ಎನ್ನುವ ಭಯದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಕೋವಿಡ್ ಬಂದಾಗ ನೀವು ಎಲ್ಲಿ ಮಲಗಿದ್ದರಿ ಬಿಜೆಪಿಯ ಮಂಡಲಾಧ್ಯಕ್ಷರಾದ ಹೇಮಂತಕುಮಾರ ಗಾಂವ್ಕರ್ ಹೇಳಿದರು.

ಜಿಲ್ಲಾಪಂಚಾಯತ ಸದಸ್ಯರಾದ ಗಜು ಪೈ ಮಾತನಾಡಿ ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಹೊಸ ಅಂಬ್ಯುಲೆಸ್ಸ್ ಇಲ್ಲ. ಆದರೆ ಶಾಸಕರು ನಮ್ಮ ಕತಗಾಲ್ ಆರೋಗ್ಯ ಕೇಂದ್ರಕ್ಕೆ ಹೊಸ ಆಂಬ್ಯುಲೆಸ್ ನೀಡಿದ್ದಾರೆ, ನನ್ನ ಮೂರೂರು ಜಿಲ್ಲಾ ಪಂಚಾಯತ ಕ್ಷೇತ್ರಕ್ಕೆ ಶಾಸಕರು ಸಾಕಷ್ಟು ಅನುದಾನವನ್ನು ನೀಡಿದ್ದಾರೆ, ಕಾರ್ಮಿಕ ಇಲಾಖೆಯ ಏಜೆಂಟರು ಅನ್ನು ಮೊದಲು ತೆಗೆದು ಹಾಕಬೇಕು ಯಾಕೆಂದರೆ ಅವರು ಜನರಿಗೆ ಪೋನ್ ಮಾಡಿ ಅನವಶ್ಯಕವಾಗಿ ಗೊಂದಲು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ವರದಿ: ನಟರಾಜ ಗದ್ದೆಮನೆ

error: