December 27, 2024

Bhavana Tv

Its Your Channel

ಕನ್ನಡದಲ್ಲಿ ವ್ಯವಹಾರ ಮಾಡದ ಬ್ಯಾಂಕಿನ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಕರವೇ

ಕುಮಟಾ: ಕೆನರಾ ಬ್ಯಾಂಕಿನ ಸಿಬ್ಬಂದಿ. ಕನ್ನಡದಲ್ಲಿ ವ್ಯವಹಾರ ಮಾಡುವುದಿಲ್ಲ ಎಂದು ತಿಳಿದು ಬ್ಯಾಂಕಿನ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಘಟನೆ ಕುಮಟಾದಲ್ಲಿ ನಡೆದಿದೆ.

ಹಣಕಾಸಿನ ವ್ಯವಹಾರಕ್ಕಾಗಿ ಬರುವ ಗ್ರಾಹಕರು, ಹಿರಿಯರು,ನಾಗರೀಕರು ಹಾಗೂ ಮಹಿಳೆಯರ ಜೊತೆಗೆ ಬ್ಯಾಂಕ್ ಸಿಬ್ಬಂದಿ ಸರಿಯಾಗಿ ಕನ್ನಡ ಮಾತನಾಡಲ್ಲ ಈ ಕಾರಣಕ್ಕೆ ಗ್ರಾಹಕರಿಗೆ ವ್ಯವಹರಿಸಲು ಕಷ್ಟವಾಗುತ್ತಿದೆ. ಈ ಕೂಡಲೇ ಕನ್ನಡ ಭಾಷೆ ಗೊತ್ತಿರುವ ಸಿಬ್ಬಂದಿ ನೇಮಿಸಬೇಕೆಂದು ಕರವೆ ಮುಖಂಡ ಭಾಸ್ಕರ ಪಟಗಾರ ಆಗ್ರಹಿಸಿದರು.

ಇನ್ನೂ ಕರವೇ ಅಧ್ಯಕ್ಷ ಭಾಸ್ಕರ್ ಪಟಗಾರ ಮಾತನಾಡಿ ಈ ಬ್ಯಾಂಕ್ ನಲ್ಲಿ ಹಲವಾರು ಗ್ರಾಹಕರಿದ್ದಾರೆ ಬ್ಯಾಂಕ್ ನ ಸಿಬ್ಬಂದಿ ಬೇಜವಾಬ್ದಾರಿಯ ವರ್ತನೆ ಹಾಗೂ ನಿಧಾನಗತಿಯಿಂದ ಗ್ರಾಹಕರು ಅಸಮಾಧಾನಗೊಂಡಿದ್ದಾರೆ. ಅವರ ಸ್ಥಳದಲ್ಲಿ ಬೇರೊಬ್ಬರನ್ನು ನೇಮಿಸಬೇಕು. ಬ್ಯಾಂಕಿನ ಸಿಬ್ಬಂದಿ ಹೆಚ್ಚಾಗಿ ಹಿಂದಿ ಭಾಷೆ ಬಳಸುತ್ತಾರೆ. ಕನ್ನಡವೇ ಆಡಳಿತ ಭಾಷೆಯಾಗಿರುವುದರಿಂದ ಕನ್ನಡವನ್ನೇ ಬಳಸಬೇಕು ಎಂದರು

ಈ ಸಂದರ್ಭದಲ್ಲಿ ಶಿವರಾಮ್ ಹರಿಕಾಂತ. ಉದಯ ಹರಿಕಾಂತ ಇದ್ದರೂ

error: