December 27, 2024

Bhavana Tv

Its Your Channel

ಸ್ವಾತಂತ್ರ‍್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸೋಣ- ಸಹಾಯಕ ಆಯುಕ್ತ ರಾಹುಲ್ ರತ್ಮಮ್ ಪಾಂಡೆ

ಕುಮಟಾ: ಸ್ವಾತಂತ್ರ‍್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸೋಣ. ದೇಶದ ಅಭಿವೃದ್ಧಿಗೆ ಕೈಜೋಡಿಸಲು ಈ ಶುಭ ದಿನದಂದು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಕುಮಟಾ ಸಹಾಯಕ ಆಯುಕ್ತ ರಾಹುಲ್ ರತ್ಮಮ್ ಪಾಂಡೆ ಹೇಳಿದರು.

ಅವರು ಭಾನುವಾರ ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ೭೫ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ನಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸೋಣ. ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ಕುಮಟಾವನ್ನು ಪ್ಲಾಸ್ಟಿಕ್ ಮುಕ್ತಗೊಳಿಸೋಣ. ಇನ್ನು ಕೋವಿಡ್ ೩ನೇ ಅಲೆ ಆರಂಭಗೊAಡಿದ್ದು, ನಾವೆಲ್ಲ ಕೊವಿಡ್ ನಿಯಮಾವಳಿಗಳನ್ನು ಪಾಲಸುವ ಮೂಲಕ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸೋಣ ಎಂದರು.

ರೈತರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ ಬೆಳೆ ಸಮೀಕ್ಷೆ ಆಪ್ ಕಂಡು ಹಿಡಿದಿದ್ದು, ರೈತರು ಕಂದಾಯ, ತೋಟಗಾರಿಕಾ ಹಾಗೂ ಕೃಷಿ ಇಲಾಖೆಯ ಮಾಹಿತಿ ಪಡೆಯಬಹುದು. ಅಲ್ಲದೇ, ಬೆಳೆ ಪರಿಹಾರ, ಬೆಳೆ ಸಾಲ, ಬೆಳೆ ವಿಮೆ ಮುಂತಾದ ಯೋಜನೆಯ ಸೌಲಭ್ಯಗಳ ಮಾಹಿತಿಯನ್ನು ಈ ಆಪ್ ಮೂಲಕ ಪಡೆಯಬಹುದು. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪಿಎಸ್‌ಐ ಆನಂದಮೂರ್ತಿ ನೇತೃತ್ವದ ತಂಡ ಗೌರವ ವಂದನೆ ಸಲ್ಲಿಸಿತು.
ತಾಪಂ ಇಒ ಸಿ.ಟಿ.ನಾಯ್ಕ, ಜಿಪಂ ಎಇಇ ಆರ್.ಜಿ.ಗುನಗಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ, ಟಿಎಚ್‌ಒ ಆಜ್ಞಾ ನಾಯಕ, ಗಣೇಶ ಪಟಗಾರ, ಅಗ್ನಿ ಶಾಮಕ ಸಿಬ್ಬಂದಿ ರಾಜೇಶ ಮಡಿವಾಳ, ಪುರಸಭೆ ತೆರಿಗೆ ಸಂಗ್ರಾಹಕ ರಾಮಾ ನಾಯ್ಕ, ಪೌರ ಕಾರ್ಮಿಕ ವಿಜಯಕಾಂತ, ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಶಿವಪ್ರಕಾಶ ನಾಯ್ಕ, ತಹಸೀಲ್ದಾರ್ ವಿವೇಕ ಶೇಣ್ವಿ, ತಾಪಂ ಆಡಳಿತಾಧಿಕಾರಿ ಈಶ್ವರ ನಾಯ್ಕ, ಪುರಸಭೆ ಸದಸ್ಯೆ ಗೀತಾ ಮುಕ್ರಿ, ಬಿಇಒ ರಾಜೇಂದ್ರ ಭಟ್ಟ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಡಿ.ನಾಯ್ಕ, ಗ್ರೇಡ್ ೨ ತಹಸೀಲ್ದಾರ್ ಅಶೋಕ ಭಟ್ಟ, ಸತೀಶ ಗೌಡ, ಶಿಕ್ಷಕರು ಉಪಸ್ಥಿತರಿದ್ದರು.

error: