December 22, 2024

Bhavana Tv

Its Your Channel

ಸಮುದ್ರದಲ್ಲಿ ಈಜಲು ತೆರಳಿದ್ದ ವಕೀಲರೋರ್ವ ಅಲೆಗಳ ರಭಸಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಮೃತ

ಕುಮಟಾ: ಸಮುದ್ರದಲ್ಲಿ ಈಜಲು ತೆರಳಿದ್ದ ವಕೀಲರೋರ್ವರು ಅಲೆಗಳ ರಭಸಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ವನ್ನಳ್ಳಿ ಕಡಲತೀರದಲ್ಲಿ ನಡೆದಿದೆ.

ಶಿರಸಿ ಮಾರಿಕಾಂಬಾ ನಗರದ ನಿವಾಸಿ ಸುಬ್ರಹ್ಮಣ್ಯ ಗೌಡ (೩೪) ಮೃತಪಟ್ಟ ವ್ಯಕ್ತಿಯಾಗಿದ್ದು ಸೆ.೧೪ ಮಂಗಳವಾರ ಶಿರಸಿಯಿಂದ ಸ್ನೇಹಿತ ಇಬ್ಬರ ಜೊತೆಗೆ ಕಾರ್ಯನಿಮಿತ್ತ ಕುಮಟಾಗೆ ಬಂದು ಉಳಿದುಕೊಂಡಿದ್ದರು. ಮರುದಿನ ಬುಧವಾರ ವನ್ನಳ್ಳಿ ಸಮುದ್ರ ತೀರದಲ್ಲಿ ಇರುವ ಕುರಿತು ಪೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿ ನಂತರ ಈಜಲು ತೆರಳಿದ್ದಾಗ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಮೃತ ಸುಬ್ರಹ್ಮಣ್ಯ ಅವರ ಪತ್ನಿ ಸವಿತಾ ಸುಬ್ರಹ್ಮಣ್ಯ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಟರಾಜ ಗದ್ದೆಮನೆ ಕುಮಟಾ

error: