December 22, 2024

Bhavana Tv

Its Your Channel

ಸೆ.೨೬: ಚಂದ್ರಶೇಖರ ಪಡುವಣಿ ಅವರ ಎರಡು ಕೃತಿ ಬಿಡುಗಡೆ

ಕುಮಟಾ :- ಕುಮಟಾ ಮಾನೀರನಲ್ಲಿನ ಗ್ರಾಮ ಒಕ್ಕಲಿಗ ಸಮುದಾಯ ಭವನದಲ್ಲಿ ಸೆ.26 ರಂದು ಮಧ್ಯಾಹ್ನ ೨.೩೦ಕ್ಕೆ ಶಿಕ್ಷಕ ಹಾಗೂ ಲೇಖಕ ಚಂದ್ರಶೇಖರ ಪಡುವಣಿ ತೆಂಗಿನಗುAಡಿ ಅವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಸ್ಥಳೀಯ ಉತ್ತರ ಕನ್ನಡ ಜಿಲ್ಲಾ ಗ್ರಾಮ ಒಕ್ಕಲಿಗ ಸಮುದಾಯ ಭವನ ಸಮಿತಿ ಹಾಗೂ ಹೊನ್ನಮ್ಮ ಪ್ರಕಾಶನ ಪಡುವಣಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಿರ್ಜಾನ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭದಲ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸುವರು.
ಚಂದ್ರಶೇಖರ ಪಡುವಣಿ ಅವರ ‘ಬಲೆಯೊಳಗಿನ ಬದುಕು’ ಕೃತಿಯನ್ನು ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಉಪ ಸಮನ್ವಾಯಾಧಿಕಾರಿ ವೆಂಕಟೇಶ ಪಟಗಾರ ಬಿಡುಗಡೆ ಮಾಡಿದರೆ, ‘ಸಾಂಸ್ಕೃತಿಕ ತಲ್ಲಣ’ ಕೃತಿಯನ್ನು ಸಾಹಿತಿ ಶಂಭು ನಾರಾಯಣ ಹೆಗಡೆ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಯಾಗಿ ಸಾಹಿತಿ ಪಿ.ಆರ್.ನಾಯ್ಕ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಗಾಂವಕರ, ಗ್ರಾ.ಒ.ಸಮುದಾಯ ಭವನ ಸಮಿತಿಯ ಅಧ್ಯಕ್ಷ ಮಂಜುನಾಥ ಗಣೇಶ ಪಟಗಾರ, ಜಿಲ್ಲಾ ಒಕ್ಕಲಿಗ ನೌಕರ ಸಂಘದ ಅಧ್ಯಕ್ಷ ಎಂ.ಕೆ.ಪಟಗಾರ, ಜಿಲ್ಲಾ ಒಕ್ಕಲಿಗ ಯುವ ಬಳಗದ ಅಧ್ಯಕ್ಷ ವಿನಾಯಕ ಪಟಗಾರ, ಸಹಕಾರಿ ಇಲಾಕೆಯ ನಿವೃತ್ತ ಸಹಾಯಕ ನಿರ್ದೇಶಕ ಮಧುಕರ ಪಟಗಾರ ಪಡುವಣಿ, ಭಟ್ಕಳ ಸಹಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಭಟ್ಕಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ ಪಾಲ್ಗೊಳ್ಳುವರು.
ಕೃತಿ ಪರಿಚಯವನ್ನು ಕುಮಟಾ ತಾಲೂಕು ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ, ಅಣಸಿ ಸ.ಪ್ರೌ.ಅಧ್ಯಾಪಕ ವಿಷ್ಣು ಪಟಗಾರ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಲೇಖಕರ ಪರಿಚಯ :
ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದ ಪಡುವಣಿಯಲ್ಲಿ ದಾಮು ರಾಮಪ್ಪ ಪಟಗಾರ ಹಾಗೂ ಹೊನ್ನಮ್ಮ ಅವರ ಮಗನಾದ ಚಂದ್ರಶೇಖರ ಪಡುವಣಿ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಭಟ್ಕಳದ ತೆಂಗಿನಗುAಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಪಡುವಣಿ ಅವರಿರು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಹಲವು ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಸುಮಾರು ೪೦೦೦ ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹಣೆ ಮಾಡಿಕೊಂಡ ಶಿಕ್ಷಕ ಚಂದ್ರಶೇಖರ ಪಡುವಣಿ ಅವರು ಓದುವ ಹವ್ಯಾಸವನ್ನು ರೂಢಿಸಿಕೊಂಡು ಕಥೆ, ಕವನ, ಪ್ರಬಂಧ ರಚನಾ ಪ್ರತಿಭೆಯನ್ನು ತಮ್ಮದಾಗಿಸಿಕೊಂಡರು. ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಜನಪದ ಸಾಹಿತ್ಯದಲ್ಲಿ ವಿಶೇಷ ಒಲವು ಬೆಳೆಸಿಕೊಂಡರು. ಚಂದ್ರಶೇಖರ ಪಡುವಣಿ ಅವರಿಗೆ ಜನ ಮೆಚ್ಚಿದ ಶಿಕ್ಷಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಮತಗಟ್ಟೆ ಅಧಿಕಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

error: