December 27, 2024

Bhavana Tv

Its Your Channel

ಎಮ್.ಎಸ್.ಐ.ಎಲ್. ಮದ್ಯ ಮಾರಾಟ ಮಳಿಗೆ ಸ್ಥಾಪನೆಗೆ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ

ವರದಿ: ನಟರಾಜ ಗದ್ದೆಮನೆ ಕುಮಟಾ

ಕುಮಟಾ : ತಾಲೂಕಿ ಬಾಡ ಗ್ರಾಮದಲ್ಲಿ ಎಮ್.ಎಸ್.ಐ.ಎಲ್. ಮದ್ಯ ಮಾರಾಟ ಮಳಿಗೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಇಂದು ಸ್ಥಳ ವೀಕ್ಷಣೆಗೆ ಬಂದ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಮ್. ಅವರ ಸಮ್ಮುಖದಲ್ಲಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ಉದ್ದೇಶಿತ ಮದ್ಯ ಮಾರಾಟ ಮಳಿಗೆಯು ಬಾಡದ ಜನತಾ ವಿದ್ಯಾಲಯ ಮಾಧ್ಯಮಿಕ ಶಾಲೆಯ ಪಕ್ಕದಲ್ಲಿಯೇ ಬರುತ್ತದೆ. ಅದಲ್ಲದೇ ಸುತ್ತಮುತ್ತಲು ವಸತಿ ಸಮುಚ್ಚಯವಿದೆ. ಇದೇ ಸ್ಥಳದಲ್ಲಿ ಮದ್ಯ ಮಾರಾಟ ಮಳಿಗೆ ತೆರೆದರೆ ಗ್ರಾಮದ ಸ್ವಾಸ್ಥ್ಯ ಹಾಳಗಲಿದೆ ಎಂದು ಸ್ಥಳೀಯರಾದ ನಾಗೇಶ ನಾಯ್ಕ, ಸಚಿನ್ ನಾಯ್ಕ್, ಗುರುನಂದನ ನಾಯ್, ಗಣೇಶ ನಾಯ್ಕ ಸೇರಿದಂಗೆ ಬಹುತೇಕರು ಉಪ ಆಯುಕ್ತರಾದ ಮನಜಾಕ್ಷಿ ಎಮ್. ಅವರ ಬಳಿ ಆಗ್ರಹಿಸಿದರು.

ಇನ್ನು ಉದ್ದೇಶಿತ ಸ್ಥಳದಲ್ಲೇ ಎಮ್.ಎಸ್.ಆಯ್.ಎಲ್ ಮದ್ಯ ಮಾರಾಟ ಮಳಿಗೆ ಸ್ಥಾಪನೆ ಮಾಡಬೇಕು ಎಂದು ಕಟ್ಟಡದ ಮಾಲಿಕರಾದ ರಾಮ ನಾಯ್ಕ, ಸ್ಥಳೀಯರಾದ ರಾಘವ ನಾಯ್ಕ , ವಿನೋದ ನಾಯ್ಕ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಎಮ್.ಎಸ್.ಐ.ಎಲ್. ಪರ ಮಾತನಾಡಲು ಮುಂದಾದ ಬಾಡ ಗ್ರಾಮಸ್ಥರಲ್ಲದವರು ವಿರುದ್ಧ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.

“ಬಾಡ ಗ್ರಾಮದಲ್ಲಿ ಎಮ್.ಎಸ್.ಆಯ್.ಎಲ್ ಬೇಕು ಎನ್ನಲು ನೀವು ಯಾರು” ಎಂಬ ಸ್ಥಳೀಯರ ಆಕ್ಷೇಪದಿಂದ ಪ್ರಾರಂಭವಾದ ಮಾತಿನ ಚಕಮಕಿ ತಾರಕಕ್ಕೇರಿತು. ಮದ್ಯ ಮಾರಾಟ ಮಳಿಗೆ ತೆರೆಯಲು ಸ್ಥಳಿಯರ ಅಹವಾಲನ್ನು ಸ್ವೀಕಾರ ಮಾಡಬೇಕು ಹೊರತಾಗಿ ಬಾಡ ಗ್ರಾಮಸ್ಥರಲ್ಲದವರ ಅಭಿಪ್ರಾಯಕ್ಕೆ ಮನ್ನಣೆ ನೀಡಬಾರದು. ಉದ್ದೇಶಿತ ಮದ್ಯ ಮಾರಾಟ ಮಳಿಗೆಯಿಂದ ೫೦೦ ಮೀಟರ ಸುತ್ತಲಿನ ಮನೆಗಳಿಗೆ ತಾವೇ ಖುದ್ದಾಗಿ ತೆರಳಿ ಅಭಿಪ್ರಾಯ ಸಂಗ್ರಹಣೆ ಮಾಡಬೇಕು ” ಎಂದು ಸ್ಥಳೀಯ ಗ್ರಾಮಸ್ಥರು ಉಪ ಆಯುಕ್ತರ ಬಳಿ ಕೇಳಿಕೊಂಡರು.

ಬಳಿಕ ಅಬಕಾರಿ ಉಪಾಯುಕ್ತೆ ವನಜಾಕ್ಷಿ ಎಮ್. ಅವರು ಮದ್ಯ ಪ್ರವೇಶಿಸಿ ಸರ್ಕಾರದ ನಿಯಮ ಹಾಗೂ ಗ್ರಾಮಸ್ಥರ ಆಗ್ರಹವನ್ನು ಗಣನೆಗೆ ತೆಗೆದುಕೊಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಪ್ರಕ್ಷುಬ್ದ ವಾತಾವರಣವನ್ನು ತಿಳಿಗೊಳಿಸಿದರು.

error: