May 6, 2024

Bhavana Tv

Its Your Channel

ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ಕುರಿತು ಎಚ್ಚರಿಕೆ ನೀಡಿದ ಕುಮಟಾ ಅಭಿವೃದ್ಧಿ ಸಮಿತಿ

ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕ ಸಭೆ ಕರೆದು ಅದರ ಕುರಿತು ಸಮಗ್ರ ಚಿತ್ರಣವನ್ನು ಅಧಿಕಾರಿಗಳು ನೀಡಬೇಕು. ಒಂದು ವೇಳೆ ಅವೈಜ್ಞಾನಿಕ ಕಾಮಗಾರಿ ನಡೆಸಿದರೆ ಜನಾಂದೋಲನ ಹಮ್ಮಿಕೊಳ್ಳಲಾಗುತ್ತದೆ ಎಂದು ಕುಮಟಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ವಕೀಲ ಆರ್.ಜಿ.ನಾಯ್ಕ ಎಚ್ಚರಿಕೆ ನೀಡಿದರು.

ಮುಖಂಡ ಹರೀಶ ಶೇಟ ಮಾತನಾಡಿ, ರಾಜ್ಯದ ೧೩ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ೩೫೦ ಕೋಟಿ ರೂ. ಏಕಕಾಲದಲ್ಲಿ ಮಂಜೂರಿ ದೊರಕಿತ್ತು. ಆದರೆ ಯಾವ ಕಾಮಗಾರಿಯೂ ಸಂಪೂರ್ಣಗೊAಡಿಲ್ಲ. ಈಗ ಹೆಚ್ಚುವರಿಯಾಗಿ ೬೯.೮೦ ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಜನರ ತೆರಿಗೆಯ ಹಣ ಕೊಳ್ಳೆ ಹೊಡೆಯುವ ಹುನ್ನಾರ ಅಡಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆ ಕರೆಯಲಿ. ತಾಂತ್ರಿಕ ವರದಿ ವಿವರಿಸಲಿ, ಯೋಜನೆಯಡಿ ಹಿಂದೆ ನಡೆದಿದ್ದು ತನಿಖೆಯಾಗಲಿ, ಇಲ್ಲಿದ್ದರೆ ಕಾಮಗಾರಿಗೆ ವಿರೋಧಿಸಬೇಕಾದೀತು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಸೂರಜ ನಾಯ್ಕ, ಪ್ರಮುಖರಾದ ಅಶೋಕ ಗೌಡ, ಸುಧಾಕರ ತಾರಿ, ಗಜು ನಾಯ್ಕ ಅಳ್ವೇಕೋಡಿ ಸೇರಿದಂತೆ ಮತ್ತಿತರರು ಇದ್ದರು..

error: