May 17, 2024

Bhavana Tv

Its Your Channel

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ನಲ್ಲಿ ವಾಲ್ಮೀಕಿ ಜಯಂತಿ

ಹಿರೇಗುತ್ತಿ : ” ವಸ್ತುವಿನ ಶ್ರೇಷ್ಠತೆ,ಕರ್ತೃವಿನ ಹಿರಿಮೆ,ಪುರುಷಾರ್ಥ ಪ್ರತಿಪಾದನೆ, ಆಧ್ಯಾತ್ಮ ಚಿಂತನೆ ಈ ಎಲ್ಲಾ ದೃಷ್ಟಿಯಿಂದಲೂ ವಾಲ್ಮೀಕಿ ಉತ್ತುಂಗ ಸ್ಥಾನದಲ್ಲಿ ನಿಲ್ಲುತ್ತಾನೆ. ಅದೆಂತಹ ಚಿತ್ರವೆಂದರೆ “ರಾಮೋ ವಿಗ್ರಹವಾನ್ ಧರ್ಮಃ ಎಂದೇ ತೃಪ್ತರಾಗುತ್ತಾರೆ. ಹೀಗೆ ಕಾವ್ಯ – ಆಧ್ಯಾತ್ಮ- ಚರಿತ್ರೆ ಮೂರನ್ನು ಏಕತ್ರ ಸಂಯೋಜಿಸಿದ ಆದಿಕವಿ ವಾಲ್ಮೀಕಿ ನಿತ್ಯ ಪಾರಾಯಣ ಗೃಂಥವನ್ನು ನಮಗೆ ನೀಡಿದ್ದಾರೆ. ಅಲ್ಲದೇ ಈಗ ವಾಲ್ಮೀಕಿ ರಾಮಾಯಣದ ಮೇಲೆ ಜಗತ್ತಿನಾದ್ಯಂತ ಮರುನೋಟ ಹರಿದಿದೆ” ಎಂದು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಸಣ್ಣಪ್ಪ ಗಾಂವಕರ ನುಡಿದರು. ಅವರು ಹಿರೇಗುತ್ತಿ ಹೈಸ್ಕೂಲ್ ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ” ವಾಲ್ಮೀಕಿಯವರ ನೀತಿ – ಬೋಧನೆ ಗಳನ್ನು ಪಾಲಿಸುವ ಮಹತ್ತರ ಜವಬ್ದಾರಿಯಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್. ನಾಗರಾಜ ನಾಯಕ. ಮಹಾದೇವ ಗೌಡ. ವಿಶ್ವನಾಥ ಬೇವಿನಕಟ್ಟಿ. ಇಂದಿರಾ ನಾಯಕ. ಶಿಲ್ಪಾ ನಾಯಕ. ಜಾನಕಿ ಗೊಂಡ. ದೇವಾಂಗಿನಿ ನಾಯಕ. ಗೋಪಾಲಕೃಷ್ಣ ಗುನಗಾ. ಉಪಸ್ಥಿತರಿದ್ದರು.

error: