May 6, 2024

Bhavana Tv

Its Your Channel

ಅತಿವೃಷ್ಟಿಯಿಂದ ಅರಣ್ಯವಾಸಿ ಮನೆ ನಷ್ಟ: ಪುನರ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಆತಂಕ ಖಂಡನಾರ್ಹ

ಕುಮಟಾ: ಅನಾಧಿಕಾಲದಿಂದ ಅರಣ್ಯ ಭೂಮಿಯಲ್ಲಿ ವಾಸ್ತವ್ಯಕ್ಕಾಗಿ ಕಟ್ಟಿಕೊಂಡ ಮನೆ ಅತೀವೃಷ್ಠಿ ಸಂದರ್ಭದಲ್ಲಿ ನಷ್ಠಕ್ಕೆ ಒಳಗಾದ ಕಟ್ಟಡ ರೀಪೇರಿ ಮತ್ತು ಪುನರ್ ನಿರ್ಮಾಣಕ್ಕೆ ಸಮಸ್ಯೆ ಉಂಟುಮಾಡುತ್ತಿರುವ ಅರಣ್ಯ ಅಧಿಕಾರಿಗಳ ಕ್ರಮ ಖಂಡನಾರ್ಹ. ಅತೀವೃಷ್ಠಿಯಿಂದ ಉಂಟಾದ ವಾಸ್ತವ್ಯದ ಇಮಾರತುಗಳಿಗೆ ಶೀಘ್ರ ಪುನರ್ ನಿರ್ಮಾಣಕ್ಕೆ ಅರಣ್ಯ ಅಧಿಕಾರಿಗಳು ಆತಂಕ ಉಂಟುಮಾಡದAತೆ ಜಿಲ್ಲಾಡಳಿತವು ಸ್ಪಷ್ಟ ನಿರ್ದೇಶನ ನೀಡಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಜಿಲ್ಲಾಡಳಿತಕ್ಕೆ ಅಗ್ರಹಿಸಿದರು.

ಅವರು ಇಂದು ಅತೀವೃಷ್ಟಿಯಿಂದ ವಾಸ್ತವ್ಯದ ಇಮಾರತಿಗೆ ನಷ್ಟ ಉಂಟಾಗಿ ಪುನರ್ ನಿರ್ಮಾಣಕ್ಕೆ ಅರಣ್ಯ ಅಧಿಕಾರಿಗಳು ಆತಂಕ ಉಂಟುಮಾಡುತ್ತಿರುವ ಕುಮಟ ತಾಲೂಕಿನ ಸೊಪ್ಪಿನಹೊಸಳ್ಳಿ, ಹತ್ತಿಹಳ್ಳಿ, ಸಂತೊಳ್ಳಿ, ಬಗಣೆ, ಚಂದಾವರ ಮುಂತಾದ ಗ್ರಾಮಗಳ ಮನೆ ಬಿದ್ದಿರುವಂತಹ ಅರಣ್ಯವಾಸಿಗಳ ಮನೆಗಳಿಗೆ ಭೇಟಿಕೊಟ್ಟಂತ ಸಂದರ್ಭದಲ್ಲಿ ಮಾತನಾಡುತ್ತಾ ಮೇಲಿನಂತೆ ಜಿಲ್ಲಾಡಳಿತಕ್ಕೆ ಅಗ್ರಹಿಸಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಜಿಪಿಎಸ್ ಜರುಗಿರುವಂತಹ ಕ್ಷೇತ್ರದಲ್ಲಿ ಅನಾಧಿಕಾಲದಿಂದ ಸ್ಥಳೀಯ ಸಂಸ್ಥೆಗೆ ಮನೆಕರ ಭರಣ ಮಾಡುವುದೊಂದಿಗೆ ರೇಷನ್ ಕಾರ್ಡ, ಮತದಾರರ ಚೀಟಿ ಹೊಂದಿದ್ದು ವಾಸ್ತವ್ಯದ ಇಮಾರತಿಗೆ ಸರಕಾರದಿಂದ ಅತೀವೃಷ್ಟಿ ಭಾಗಶಃ ಪರಿಹಾರ ಧನ ಸಹಿತ ಬಂದಿದ್ದರೂ ಮನೆ ರೀಪೇರಿ ಹಾಗೂ ಪುನರ್ ನಿರ್ಮಾಣಕ್ಕೆ ಅಧಿಕಾರಿಗಳು ಆತಂಕ ಉಂಟುಮಾಡುತ್ತಿರುವುದು ಖೇದಕರ ಎಂದು ರವಿಂದ್ರ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರ, ಗ್ರಾಮ ಪಂಚಾಯತ ಸದಸ್ಯ ಈಶ್ವರ ಮರಾಠಿ, ಅನಂತ ಮರಾಠಿ, ಜಯಂತ ಮರಾಠಿ, ಭೀರ ಗೌಡ, ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.
ನೂರಾರು ಮನೆ ನೆಲಸಮ :
ಇತ್ತೀಚಿನ ಮೂರು ವರ್ಷದ ಅತೀವೃಷ್ಟಿಯಿಂದ ಜಿಲ್ಲಾದ್ಯಂತ ಸುಮಾರು ನಾಲ್ಕನೂರಕ್ಕೂ ಮಿಕ್ಕಿ ಮನೆಗಳು ನೆಲಸಮವಾದರೇ, ಸಾವಿರಕ್ಕೂ ಮಿಕ್ಕಿ ಮನೆಗಳಿಗೆ ಭಾಗಶಃ ಮತ್ತು ಅಲ್ಪ ಪ್ರಮಾಣದ ನಷ್ಟ ಉಂಟಾಗಿರುವುದನ್ನ ಕಂದಾಯ ಇಲಾಖೆಯ ಸಮೀಕ್ಷೆಯಲ್ಲಿ ಉಲ್ಲೇಖಿಸಿದ್ದಾಗಿಯೂ ಅರಣ್ಯ ಇಲಾಖೆ ಆತಂಕ ಮಾಡುತ್ತಿರುವುದನ್ನು ತೀವ್ರ ತರದ ಹೋರಾಟ ಮಾಡಲಾಗುವುದೆಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

error: