May 4, 2024

Bhavana Tv

Its Your Channel

ಕುಮಟಾದ ಬರ್ಗಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಸಂಸ್ಕೃತ ಕಾರ್ಯಾಗಾರ

ಕುಮಟಾ : ವಿಶ್ವ ಮನೋಜ್ಞವಾದ ಸಂಸ್ಕೃತ ಭಾಷೆಯು ಶ್ರೀಮಂತವಾದ ಪರಂಪರೆಯನ್ನು ಹೊಂದಿದ್ದು, ಸಂಸ್ಕೃತದ ಅಧ್ಯಯನದಿಂದ ಸಂಸ್ಕೃತಿಯ ಸಂವರ್ಧನೆಯು ಸಾಧ್ಯವೆಂದು ಕುಮಟಾ ತಾಲ್ಲೂಕಿನ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಬಾಡದ ಜನತಾ ವಿದ್ಯಾಲಯದ ಅಧ್ಯಾಪಕ ಆಯ್.ವಿ.ಭಟ್ಟರವರು ಹೇಳಿದರು.

ಅವರು ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸಂಸ್ಕೃತ ಪರಿಷತ್, ಕುಮಟಾ ತಾಲ್ಲೂಕಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಕುಮಟಾ ತಾಲ್ಲೂಕಾ ಮಟ್ಟದ ಸಂಸ್ಕೃತ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಇತರ ಭಾಷೆ ಮತ್ತು ವಿಷಯಗಳೊಂದಿಗೆ ಅಭಿನಾಭಾವ ಸಂಬAಧವುಳ್ಳ ಸಂಸ್ಕೃತದ ಬಗ್ಗೆ ಅಸಡ್ಡೆಯು ಸಲ್ಲದೆಂದ ಅವರು, ಸಂಸ್ಕೃತಾಭ್ಯಾಸಕ್ಕೆ ಕರೆ ಕೊಟ್ಟರು. ಕಾರ್ಯಾಗಾರವನ್ನು ಉದ್ಘಾಟಿಸಿದ ಬರ್ಗಿಯ ಪ್ರೌಢಶಾಲೆಯ ಮುಖ್ಯಾಧ್ಯಾಪಕರ ಪ್ರಭಾರದಲ್ಲಿದ್ದ ಹಿರಿಯ ಶಿಕ್ಷಕಿ ಸರಸ್ವತಿ ನಾಯಕರವರು, ತಾಲ್ಲೂಕಿನ ಸಂಸ್ಕೃತ ಶಿಕ್ಷಕರೆಲ್ಲರ ಸಮಾಗಮಕ್ಕೆ ತಮ್ಮ ಪ್ರೌಢಶಾಲೆಯನ್ನು ಆಯ್ದುಕೊಂಡ ಕುರಿತು ಸಂತಸವನ್ನು ವ್ಯಕ್ತಪಡಿಸಿ, ಸಂಪನ್ಮೂಲ ವ್ಯಕ್ತಿಗಳ ವಿಚಾರ ಮಂಥನದಿAದ ಕಾರ್ಯಾಗಾರವು ಫಲಪ್ರದವಾಗುತ್ತದೆ ಎಂದು ನುಡಿದರು. ಸಂಸ್ಕೃತ ಸಂಘದ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಗೀತಾ ಭಟ್ಟ ಹಾಗೂ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ಸುರೇಶ ಭಟ್ಟರವರು ಮಾತನಾಡಿದರು.
ವೃತ್ತಿ ಶಿಕ್ಷಕಿ ತಾರಾ ನಾಯ್ಕ ಪ್ರಾರ್ಥಿಸಿದರು. ದೈಹಿಕ ಶಿಕ್ಷಕಿ ಚಂಪಾವತಿ ನಾಯ್ಕ ಸ್ವಾಗತಿಸಿದರು. ಕರ್ನಾಟಕ ಸಂಸ್ಕೃತ ಪರಿಷತ್ ನ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ, ಬರ್ಗಿ ವಂದಿಸಿದರು. ಗಣಿತ ಶಿಕ್ಷಕಿ ಗೀತಾ ನಾಗೇಕರ ನಿರೂಪಿಸಿದರು. ಸತ್ಯನಾರಾಯಣ ಭಟ್ಟ, ಭವ್ಯಾ ಭಟ್ಟ, ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜು ನಾಯ್ಕ, ಆದಿತ್ಯಾ ಪಟಗಾರ, ಗಣೇಶ ಗುನಗ, ರೋಷನ್ ಪಟಗಾರ, ನಿತಿನ ಪಟಗಾರ, ಪ್ರಣೀತ ಜಾಲಿಸತ್ಗಿ, ಪಲ್ಲವಿ ಆಗೇರ, ಪುನೀತ್ ಎನ್. ವಿ ಹಾಗೂ ಫಿರೋಜ್ ಖಾನ ಮುಂತಾದವರು ಉಪಸ್ಥಿತರಿದ್ದರು.

error: