May 6, 2024

Bhavana Tv

Its Your Channel

ಶಾಸಕ ದಿನಕರ ಶೆಟ್ಟಿ ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವರು

ಕುಮಟಾ: ತಾಲೂಕಿನ ಮಾದನಗೇರಿಯ ಶತಮಾನೋತ್ಸವ ಕಂಡ ಪ್ರಾಥಮಿಕ ಶಾಲೆಯ ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು, ತಕ್ಷಣ ದುರಸ್ಥಿಗೊಳಿಸುವಂತೆ ಆ ಭಾಗದ ಸಾರ್ವಜನಿಕರು ಶಾಸಕ ದಿನಕರ ಶೆಟ್ಟಿಯವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.ಈ ಬಗ್ಗೆ ಶಾಸಕ ದಿನಕರ ಶೆಟ್ಟಿಯವರು ತಕ್ಷಣ ಸ್ಪಂದಿಸಿ 20 ಲಕ್ಷ ರೂ ಅನುದಾನ ಬಿಡುಗಡೆ ಮಾಡಿಸಿದ್ದಾರೆ.
ಶತಮಾನೋತ್ಸವ ಕಂಡ ಮಾದನಗೇರಿಯ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ತೀರಾ ಜೀರ್ಣಾವಸ್ಥೆಯಲ್ಲಿತ್ತು. ಗೋಡೆಗಳು ಮಣ್ಣಿನಿಂದ ಕೂಡಿತ್ತು. ಹೀಗಾಗಿ ಅವಘಡಗಳು ಸಂಭವಿಸಬಹುದಾದ ಸಾಧ್ಯತೆ ಮನಗಂಡ ಊರಿನ ನಾಗರೀಕರು ಶಾಸಕ ದಿನಕರ ಶೆಟ್ಟಿಯವರಿಗೆ ಮನವಿ ಸಲ್ಲಿಸಿ ತಕ್ಷಣ ದುರಸ್ಥಿಗೊಳಿಸುವಂತೆ ಆಗ್ರಹಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ಕೂಡಲೆ ಶಿಕ್ಷಣ ಸಚಿವರ ಗಮನ ಸೆಳೆದು 20 ಲಕ್ಷ ರೂ ಅನುದಾನ ಮಂಜೂರಿ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಶಾಸಕರ ತಕ್ಷಣದ ಸ್ಪಂದನೆಗೆ ಮಾದನಗೇರಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರೌಢಶಾಲೆ ಆರಂಭಕ್ಕೆ ಮನವಿ:-
ಶತಮಾನೋತ್ಸವ ಕಂಡ ಮಾದನಗೇರಿ ಹಿರಿಯ ಪ್ರಾಥಮಿಕ ಶಾಲೆ ಗ್ರಾಮೀಣ ಪ್ರದೇಶದಲ್ಲಿದ್ದು, 1 ರಿಂದ 8 ನೇ ತರಗತಿಯವರೆಗೆ ಉನ್ನತಿಕರಿಸಲಾಗಿದೆ. ಈ ಶಾಲೆಯಲ್ಲಿ ಪ್ರಸ್ತುತ 196 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುತ್ತಲಿನ ಮೂಲೆಕೇರಿ,ಹಿತ್ತಲಮಕ್ಕಿ,ಸಿದ್ದೇಶ್ವರ,ಮಾದನಗೇರಿ,ದೇವಿಗದ್ದೆ,ಅಂಬುಕೋಣ,ಉಳುವರೆ,ಬೋಳುಕOಟೆ,ಹೋಸೂರು,ಆoದ್ಲೆ, ಬಳಲೆ ಭಾಗದ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, 9 ಮತ್ತು ಹತ್ತನೇ ತರಗತಿ ಕಲಿಕೆಗಾಗಿ ಬೇರೆ ಶಾಲೆಗೆ ತೆರಳಬೇಕಾಗಿದೆ. ಹೀಗಾಗಿ ತಮ್ಮೂರ ಶಾಲೆಯನ್ನೂ ಪೂರ್ಣ ಪ್ರಮಾಣದ ಪ್ರೌಢಶಾಲೆಯಾಗಿಸಿ ಮಕ್ಕಳ ಭವ್ಯ ಭವಿಷ್ಯಕ್ಕೆ ಅನುವು ಮಾಡಿಕೊಡುವಂತೆ ಶಾಸಕ ದಿನಕರ ಶೆಟ್ಟಿಯವರಲ್ಲಿ ಮನವಿ ಮಾಡಿದಾಗ ಅವರು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶರವರಲ್ಲಿ ವಿನಂತಿಸಿದ್ದಾರೆ.ಸದ್ಯದಲ್ಲಿ ಮಂಜೂರಾತಿ ದೊರಕುವ ಆಶಯವನ್ನು ಹೊಂದಿದ್ದಾರೆ.

error: