May 5, 2024

Bhavana Tv

Its Your Channel

ಸ್ಯಾಟಲೈಟ್ ಫೋನ್ ಸಿಗ್ನಲ್ ಕಾರ್ಯಾಚರಣೆ, ಆತಂಕ ಪಡುವ ಅಗತ್ಯವಿಲ್ಲ: ಶಾಸಕ ದಿನಕರ ಶೆಟ್ಟಿ

ಕುಮಟಾ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಕಾರ್ಯಾಚರಣೆ ಕುರಿತಾದ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಪತ್ತೆಗೆ ಸಂಬoಧಪಟ್ಟoತೆ ತೀವ್ರ ತನಿಖೆಗೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅವರು ಹೇಳಿದರು.
ಈ ಕುರಿತು ಮಂಗಳವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಮುಂಬೈ, ಉತ್ತರಕನ್ನಡ, ಮಂಗಳೂರು ಸೇರಿದಂತೆ ಕರಾವಳಿ ಭಾಗವೇ ಉಗ್ರರ ಪ್ರಮುಖ ಟಾರ್ಗೆಟ್ ಆಗಿದೆ. ಕೇಂದ್ರದ ಮಹತ್ವದ ಯೋಜನೆಗಳು ಕೂಡ ನಮ್ಮ ಭಾಗದಲ್ಲಿವೆ. ಶಿರಸಿ ಯಲ್ಲಾಪುರ ತಾಲೂಕಿನ ನಡುವೆ ಸ್ಯಾಟಲೈಟ್ ಫೋನ್ ಆಕ್ಟಿವ್ ಆದ ಬಗ್ಗೆ ಇನ್ನೂ ಸಂಪೂರ್ಣ ಖಚಿತತೆ ಇಲ್ಲ. ಹಾಗಂತ ನಾವು ಅದನ್ನು ನಿರ್ಲಕ್ಷ್ಯ ವಹಿಸುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಭದ್ರತಾ ವ್ಯವಸ್ಥೆ ಪ್ರಬಲವಾಗಿದೆ. ಸ್ಯಾಟಲೈಟ್ ಕರೆ ಯಾರಿಂದ ಯಾರಿಗೆ ಹೋಗಿದೆ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂಬುದನ್ನು ಗೃಹ ಮಂತ್ರಿಗಳಾದ ಅರಗ ಜ್ಞಾನೇಂದ್ರ ಅವರು ಕೂಡ ಭರವಸೆ ನೀಡಿದ್ದಾರೆ. ಈ ಸಂಬoಧವಾಗಿ ಜಿಲ್ಲೆ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ವರದಿ: ನಟರಾಜ ಗದ್ದೆಮನೆ ಕುಮಟಾ

error: