May 4, 2024

Bhavana Tv

Its Your Channel

ಕುಮಟಾ ತಾಲೂಕಿನ ಮಿರ್ಜಾನ್ ನಲ್ಲಿ ಅಪರೂಪದ ಬಿಳಿ ಹೆಬ್ಬಾವು ಪತ್ತೆ. ಉರಗ ತಜ್ಞ ಪವನ್ ನಾಯ್ಕ ಅವರಿಂದ ರಕ್ಷಣೆ

ಕುಮಟಾ ತಾಲೂಕಿನ ಮಿರ್ಜಾನಿನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಅಪರೂಪದ ಬಿಳಿ ಹಾವು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಗೊಂದಲವುAಟು ಮಾಡಿತು. ಈ ವಿಷಯವನ್ನು ಉರಗ ತಜ್ಞ ಪವನ್ ನಾಯ್ಕ ಅವರಿಗೆ ತಿಳಿಸಿದಾಗ, ಕೂಡಲೇ ಸ್ಥಳಕ್ಕೆ ಧಾವಿಸಿದ ಪವನ್ “ಈ ಬಿಳಿ ಹಾವು ಹೆಬ್ಬಾವು” ಎಂದು ಖಾತ್ರಿಪಡಿಸುವುದರೊಂದಿಗೆ ಜನರ ಆತಂಕವನ್ನು ತಿಳಿಗೊಳಿಸಿದರು. ಹಾವನ್ನು ಸಲೀಸಾಗಿ ಹಿಡಿದು ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದರು.

ಈ ಬಿಳಿ ಹೆಬ್ಬಾವಿನ ಕುರಿತು ಸಾರ್ವಜನಿಕರಿಗೆ ಪವನ್ ನಾಯ್ಕ ಮಾಹಿತಿ ನೀಡಿದರು.
“ಇಂತಹ ಹಾವುಗಳು ಬೇರೆಯ ಜಾತಿಯ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ನ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನ ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ. ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕಾಗುತ್ತದೆ. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರೋ ಕಾರಣ ಇದನ್ನ ಅಲ್ಬಿನೋ ಹಾವಿನ ಗುಂಪಿಗೆ ಸೇರಿಲು ಸಾಧ್ಯವಿಲ್ಲ. ನನ್ನ ಅನುಭವದಲ್ಲಿ ಇದು ಕರ್ನಾಟಕದಲ್ಲಿ ಸಿಕ್ಕಿರೋ 2 ನೇ ದಾಖಲೆ” ಎಂದರು.

ವರದಿ : ನರಸಿಂಹ ನಾಯ್ಕ್ ಹರಡಸೆ

error: