May 4, 2024

Bhavana Tv

Its Your Channel

ವಲಯ ಮಟ್ಟದ ಕ್ರೀಡಾ ಕೂಟ ಉದ್ಘಾಟಿಸಿದ ಕೆಡಿಸಿ.ಸಿ ಬ್ಯಾಂಕ್ ನಿರ್ದೆಶಕ ಗಜಾನನ ಪೈ

ಕುಮಟಾ: ದೈಹಿಕವಾಗಿ ಆರೋಗ್ಯವನ್ನು ಹೊಂದಲು ಹಾಗೂ ಮಾನಸಿಕವಾಗಿ ನೆಮ್ಮದಿ, ಪರಸ್ಪರ ಪ್ರೀತಿ ಗೆಳೆತನವನ್ನು ಬೆಳಸಲು ಕ್ರೀಡಾ ಕೂಟ ಸಹಾಯಕವಾಗುತ್ತದೆ ಎಂದು ಜಿ.ಪಂ ನಿಕಟಪೂರ್ವ ಸದಸ್ಯರು ಹಾಗೂ ಕೆಡಿಸಿ.ಸಿ ಬ್ಯಾಂಕ ನಿರ್ದೆಶಕರಾದ ಗಜಾನನ ಪೈ ಹೇಳಿದರು.

ಅವರು ವಲಯ ಮಟ್ಟದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆ ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಲು ಹಿಂಜರಿಯುತ್ತಿದ್ದಾರೆ. ಯಾಕೆಂದರೆ ಇವತ್ತಿನ ದಿನಗಳಲ್ಲಿ ಶಿಕ್ಷಣಕ್ಕೆ ಪೈಪೋಟಿ ಆರಂಭವಾಗಿದ್ದು, ತಮ್ಮ ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಶಿಕ್ಷಣಕ್ಕಿಂತ ಮಕ್ಕಳಿಗೆ ಕ್ರೀಡಾ ಪಂಧ್ಯಾವಳಿಯಲ್ಲಿ ಆಸಕ್ತಿ ಜಾಸ್ತಿ ಆಗಬಹುದು ಎನ್ನುವ ದೃಷಿಯಲ್ಲಿ ಪಾಲಕರು ಇದ್ದಾರೆ. ವಿದ್ಯಾರ್ಥಿಗಳು ವಲಯಮಟ್ಟದಿಂದ ತಾಲೂಕಾ ಮಟ್ಟಕ್ಕೆ ಹಾಗೂ ಜಿಲ್ಲಾಮಟ್ಟಕ್ಕೆ ಹೋಗಿ ತಮ್ಮ ಪ್ರತಿಭೆಯನ್ನು ಬೆಳಸಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್ ಭಟ್ ಕಳೆದೆರಡು ವರ್ಷದಿಂದ ಕ್ರೀಡಾಪಂದ್ಯಾವಳಿಗಳು ಇಲ್ಲದೇ ಇರುವುದು ಮಕ್ಕಳಲ್ಲಿ ಕ್ರೀಡಾ ಪಂದ್ಯವಳಿಯಲ್ಲಿ ಇರುವ ಆಸಕ್ತಿ ಕಡಿಮೆಯಾಗಿದೆ. ಈ ವರ್ಷ ಇಲಾಖೆಯಿಂದ ಕ್ರೀಡಾ ಕೂಡಾ ನಡೆಯುತ್ತಿದೆ. ಮಕ್ಕಳು ಅತ್ಯಂತ ಸಂತೋಷದಿAದ ಭಾಗವಹಿಸುತ್ತಿದ್ದಾರೆ. ಅವರ ಉತ್ಸಾಹವನ್ನು ನಾವೆಲ್ಲರೂ ಸೇರಿ ಬೆಂಬಲಿಸುವAತ ಕೆಲಸವಾಗಬೇಕು ಕ್ರೀಡಾ ಕೂಟದಲ್ಲಿ ಭಾಗಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು. ವಲಯ ಮಟ್ಟದ ಕ್ರೀಡಾಕೂಟವನ್ನು ಉತ್ತಮವಾಗಿ ಸಂಘಟನೆ ಮಾಡಿರುವುದಕ್ಕೆ ಗಿಬ್ ಹೈಸ್ಕೂಲ್ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಬಾಡ ವಲಯ ಮಟ್ಟದ ಪ್ರೌಢಶಾಲಾ ಇಲಾಖೆ ಕ್ರೀಡಾಕೂಟದಲ್ಲಿ 6 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾ ಧ್ವಜಾರೋಹಣವನ್ನು ಜಿ.ಪಂ ನಿಕಟಪೂರ್ವ ಸದಸ್ಯರು ಹಾಗೂ ಕೆಡಿಸಿ.ಸಿ ಬ್ಯಾಂಕ ನಿರ್ದೆಶಕರಾದ ಗಜಾನನ ಪೈ ನೆರವೇರಿಸಿದರು. ಕ್ರೀಡಾ ಜ್ಯೋತಿಯನ್ನು ಕುಮಾರ ಸುಬ್ರಹ್ಮಣ್ಯ ನಾಯ್ಕ ಬೆಳಗಿಸಿದರು. ಕುಮಾರ ಶೇಟ್ ಪ್ರತಿಜ್ಞಾ ಸ್ವೀಕಾರವನ್ನು ಮಾಡಿದರು. ವಂದನಾರ್ಪಣೆಯನ್ನು ಶಿಕ್ಷಕರಾದ ವಿಜಯ ಕುಮಾರ ನಾಯ್ಕ ನೇರವೇರಿಸದರು.

error: