May 18, 2024

Bhavana Tv

Its Your Channel

ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ

ಕುಮಟಾ ತಾಲೂಕಾ ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ , ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಕುರಿತು ಕಾನೂನು ಸಾಕ್ಷರತ ಕಾರ್ಯಕ್ರಮ ಕಮಲಾ ಬಾಳಿಗಾ, ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರಧಾನ ಸಿವಿಲ್ ನ್ಯಾಯದೀಶರಾದ ನರೇಂದ್ರ. ಬಿ.ಆರ್ ಅವರು ಗಿಡಕ್ಕೆ ನೀರು ಏರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಮ್ಮ ದೇಶದ ಸಂವಿಧಾನವು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಭಾರತದ ಸಂವಿಧಾನವು ನಮಗೆ ನೀಡಿದೆ, ಹಕ್ಕು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖಗಳು ಇದ್ದ ಹಾಗೆ, ನಾವು ಹಕ್ಕುಗಳ ಬಗ್ಗೆ ನಾವು ದಿನ ನಿತ್ಯವು ರೂಡಿಸಿಕೊಂಡಿರುತ್ತೇವೆ ಆದರೆ ಕರ್ತವ್ಯಗಳನ್ನು ಹೆಚ್ಚು ಪ್ರಚಲಿತವಾಗಿ ಬಳಸುತ್ತಿಲ್ಲ. ನಾವು ನಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳುತ್ತೇವೆ ಆದರೆ ನಾವು ನಮ್ಮ ಕರ್ತವ್ಯವನ್ನು ತಿಳಿದುಕೊಂಡು, ಹಾಗೆ ನಡೆದುಕೊಳ್ಳುವುದಿಲ್ಲ.ನಾವು ನಮ್ಮ ಸಂವಿಧಾನ ನೀಡಿದ ಕರ್ತವ್ಯವು ನೀಡಿದ ಜವಬ್ದಾರಿಯನ್ನು ನಾವು ಪಾಲಿಸಬೇಕು, ಹಾಗೂ ಹಕ್ಕುಗಳನ್ನು ಪಡೆದುಕೊಂಡು ಕರ್ತವ್ಯವನ್ನು ನಿರ್ಲಕ್ಷ ಮಾಡಬಾರದು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೀತಿ ಭಂಡಾರಕರ ಮಾತನಾಡಿ ವೇಧ ಕಾಲದ ಋಗ್ವೇಧದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಅತ್ಯಂತ ಅದ್ಬುತವಾಗಿ ಜ್ಞಾನವನ್ನು ನೀಡಿದ್ದಾರೆ, ಆಕಾರಣದಿಂದ ವೇಧಗಳಿಗೆ ಈಗಲೂ ಕೂಡಾ ಅತ್ಯಂತ ಬೆಲೆ ಬರಲು ಸಾಧ್ಯವಿದೆ. ನಮ್ಮ ಸ್ವಾತಂತ್ರ‍್ಯದ ಹಕ್ಕು ಇರಲಿ,ಸಮಾನತೆಯ ಹಕ್ಕು ಅವುಗಳ ಜೋತೆಗೆ ಕರ್ತವ್ಯಗಳನ್ನು ನಾವು ಪಾಲಿಸುವುದು ಅಗತ್ಯವಿದೆ ನಮ್ಮ ದೇಶದಲ್ಲಿ ಸಂವಿಧಾನ ರಚನೆಯನ್ನು ಮಾಡಬೇಕಾದರೆ ಒಳ್ಳೇಯ ಅಂಶಗಳನ್ನು ಆದರಿಸಿ,ಸಂವಿಧಾನ ರಚನೆ ಮಾಡಲಾಗಿದೆ, ಸಂವಿಧಾನವೂ ಕೊಟ್ಟ ಹಕ್ಕುಗಳನ್ನು ದುರಪಯೋಗ ಪಡೆಸಿಕೊಂಡಾಗ, ಸಂವಿಧಾನವನ್ನು ರಕ್ಷಣೆ ಮಾಡುವುದು ಸರ್ವೊಚ್ಚ ನಾಯ್ಯಾಲಯ ಹಾಗೂ ಉಚ್ಚ ನಾಯ್ಯಾಲಯವಾಗಿದೆ ಎಂದು ಹೇಳಿದರು.
ಈ ವೇಳೆ ಸಹ ಪ್ರಾದ್ಯಾಪಕರಾದ ಉಮೇಶ ನಾಯ್ಕ, ವಕೀಲರಾದ ಮಧು ಟಿ ಹೆಗಡೆ, ಹಾಗೂ ಕಮಲಾ ಬಾಳಿಗಾ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.ಈ ಕಾರ್ಯಕ್ರಮಜಚಿ ಸ್ವಾಗತವನ್ನು ಮಾರುತಿ ನಾಯ್ಕ ನಿರೂಪಣೆ ಬಿಂದು ಅವಧಾನಿ ನೆರವೇರಿಸಿಕೊಟ್ಟರು

ವರದಿ: ನಟರಾಜ್ ಗದ್ದೆಮನೆ ಕುಮಟಾ

error: