December 22, 2024

Bhavana Tv

Its Your Channel

ಚಿತ್ರಗಿಯ ಗಾಣಿಗ ಯುವ ಬಳಗದ ವತಿಯಿಂದ ಶ್ರೀ ರಾಮಚಂದ್ರ ಮಠದಲ್ಲಿ ಭಜನಾ ಸಂಕೀರ್ತನೆ ಹಾಗೂ ಕಾರ್ತೀಕ ದೀಪೋತ್ಸವ

ಕುಮಟಾ ತಾಲೂಕಿನ ಚಿತ್ರಗಿಯ ಗಾಣಿಗ ಯುವ ಬಳಗದ ವತಿಯಿಂದ ಚಿತ್ರಗಿಯ ಶ್ರೀ ರಾಮಚಂದ್ರ ಮಠದಲ್ಲಿ ಭಜನಾ ಸಂಕೀರ್ತನೆ ಹಾಗೂ ಕಾರ್ತೀಕ ದೀಪೋತ್ಸವ ವಿಜೃಂಭಣೆಯಿAದ ನೆರವೇರಿತು.
ಚಿತ್ರಗಿಯ ಗಾಣಿಗ ಯುವ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಾಣಿಗ ಸಮಾಜದ ಪುರಾತನ ದೇವಾಲಯವಾದ, ಚಿತ್ರಗಿಯ ಶ್ರೀ ರಾಮಚಂದ್ರ ಮಠದಲ್ಲಿ ಯಶಸ್ವಿ ನಾಲ್ಕನೇ ವರ್ಷದ ಕಾರ್ತೀಕ ದೀಪೋತ್ಸವವು ಸಡಗರ ಸಂಭ್ರಮದಿAದ ನೆರವೇರಿತು.
ದೀಪೋತ್ಸವದ ಪ್ರಯುಕ್ತ ಸಂಜೆ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಜನಪ್ರಿಯ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಅಪಾರ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ “ಕುಮಟಾದ ಶ್ರೀ ಮಾರುತಿ ಭಜನಾ ಮಂಡಳಿ” ಯವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ರಾಜ್ಯಪ್ರಶಸ್ತಿ ಪುರಸ್ಕೃತ ಮಾರುತಿ ನಾಯ್ಕ ಕೂಜಳ್ಳಿ, ಶಂಕರ್ ನಾಯ್ಕ್, ವೀರೇಂದ್ರ ಗುನಗ ಸುಮಧುರವಾಗಿ ಹಾಡಿದರು. ಅತಿಥಿ ಗಾಯಕರಾಗಿ ಪಾಲ್ಗೊಂಡಿದ್ದ ರಾಜೇಶ್ ಶೆಟ್ಟಿ ಮತ್ತು ದೀಪಕ್ ಸಹ ಸೊಗಸಾಗಿ ಹಾಡುವ ಮೂಲಕ ಭಕ್ತವೃಂದದ ಶ್ಲಾಘನೆಗೆ ಸಾಕ್ಷಿಯಾದರು. ಖ್ಯಾತ ಕೀಬೋರ್ಡ್ ವಾದಕ ವಿಜಯ್ ಮಹಾಲೆ ಹಾರ್ಮೋನಿಯಂ ಹಾಗೂ ಹರೀಶ್ ಶೇಟ್ ತಬಲಾ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಭಜನೆಯ ಬಳಿಕ ಶ್ರೀ ರಾಮಚಂದ್ರ ದೇವರ ಸನ್ನಿಧಿಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಗಾಣಿಗ ಸಮಾಜ ಬಂಧುಗಳು, ಗಾಣಿಗ ಯುವ ಬಳಗದ ಪ್ರೋತ್ಸಾಹಕರು ಹಾಗೂ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಶ್ರೀ ದೇವರ ಅನುಗ್ರಹಕೆ ಪಾತ್ರರಾದರು.

ವರದಿ: ನರಸಿಂಹ ನಾಯ್ಕ್ ಹರಡಸೆ

error: