ಕುಮಟಾ: ಬಿಜೆಪಿಯವರು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳು ಇಲ್ಲದೆ ಮನೆ ಖಾಲಿಯಾಗಿದೆ ಅಂತ ಹೇಳುತ್ತಿದ್ರು ಆದರೆ ಚುನಾವಣೆಗೆ ಟಿಕೇಟ್‌ಗಾಗಿ ಅರ್ಜಿ ಹಾಕಿದ ಅಭ್ಯರ್ಥಿಗಳ ಸಂಖ್ಯೆ 1200ಕ್ಕೂ ಅಧಿಕ ಜನರು ರಾಜ್ಯದಲ್ಲಿ ಅರ್ಜಿಯನ್ನು ಹಾಕಿದ್ದಾರೆ. ನನಗೆ ವಿಶ್ವಾಸ ಇದೆ 140 ರಿಂದ 150 ಸೀಟು ಜನರ ಆರ್ಶಿವಾದದಿಂದ ಗೆಲ್ಲುತ್ತಾರೆ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಅಂತ, ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಕುಮಟಾದ ಮಣಕಿ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಿಂದ ಬಿಜೆಪಿ ಮತ್ತೊಬ್ಬ ಮಾಜಿ ಶಾಸಕರಾದ ವಿ.ಎಸ್ ಪಾಟೀಲ್ ಅವರು ಕೂಡಾ ಕಾಂಗ್ರೆಸ್ ಪಕ್ಷವನ್ನು ಸೆರ್ಪಡೆಯಾಗಲಿದ್ದಾರೆ. ಯುವಕರಿಗೆ ಉದ್ಯೋಗವನ್ನು ಸೃಷ್ಠಿ ಮಾಡುತ್ತೇವೆ, ನೀರುದ್ಯೋಗ ಸಮಸ್ಯೆ ಬಗೆಹರಿಸುತ್ತೇವೆ ಅಂತ ಹೇಳಿದ್ರು, ಜನರ ಖಾತೆಗೆ ಹಣವನ್ನು ಹಾಕುತ್ತೇವೆ ಅಂತ ಹೇಳಿದ್ರು, ರಾಹುಲ್‌ಗಾಂಧಿಯವರು ಕನ್ನಾ ಕುಮಾರಿಯಿಂದ ಕಾಶ್ಮಿರದ ವರೆಗೆ ನಡೆಯುತ್ತಿದ್ದಾರೆ. ಎಲ್ಲಾ ಜಿಲ್ಲೆಯಿಂದ ಕಾರ್ಯಕರ್ತರು ಬಂದು ಭಾರತ ಜೋಡೋ ಪಾದಯಾತ್ರೆಗೆ ಬೆಂಬಲಿಸಿದಿರಿ ನೀವು ಇಡಿ ದೇಶಕ್ಕೆ ಶಕ್ತಿಯನ್ನ ನೀಡಿದ್ರಿ ಎಂದು ಹೇಳಿದ್ರು,
ಮಾಜಿ ಸಚಿವರಾದ ಯು.ಟಿ ಖಾದರ್ ಅವರು ಮಾತನಾಡಿ, ಯಾವ ಪರೇಶ ಮೇಸ್ತಾನ ಸಾವಿನ ಲಾಭ ಪಡೆದು ಚುನಾವಣೆಯನ್ನು ಗೆದ್ದಿದಿದ್ದಾರೆ, ಅದೇ ಪರೇಶ ಮೇಸ್ತಾನ ಹೆಸರಿನಲ್ಲಿ ಜನರು ನಿಮ್ಮನ್ನು ಮನೆಗೆ ಕಳುಹಿಸುವ ಕೆಲಸ ಮಾಡುತ್ತಾರೆ,ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಂಡ ಬಿಜೆಪಿಯವರು, ರಾಜ್ಯದಲ್ಲಿ ಇಂಜಿನ್ ಇಲ್ಲದ ಸರಕಾರ ಇದೆ, ಬರಿ ಸೈಲೆಸ್ಸರ್ ಮಾತ್ರ ಶಬ್ದ ಮಾಡುತ್ತದೆ. ಮೀನುಗಾರಿಗೆ ಅಭಿವೃದ್ದಿ ಪೂರಕವಾದ ಯೋಜನೆಯಿಲ್ಲ. ಕಾಂಗ್ರೆಸ್ ಸರಕಾರ ನೀಡಿದ, ಡಿಸೇಲ್ ಸಬ್ಸಿಡಿಯನ್ನು ನೀಡದೆ ಇದ್ದಾರೆ, ಮೀನುಗಾರಿಗೆ ಡಿಸೇಲ್ ನೀಡುವಂತಹ ಯೋಗ್ಯತೆ ಇಲ್ಲ ಎಂದು ಅವರು, ರಾಜ್ಯದ ಜನರು ಬಿಜೆಪಿಗೆ ಸ್ಪರ್ಷವಾದ ಬಹುಮತ ನೀಡಿಲ್ಲ. 2008ರಲ್ಲೂ ಕೂಡಾ ನೀಡಿಲ್ಲ. ಹಾಗೂ 2019ರಲ್ಲೂ ಕೂಡಾ ನೀಡಿಲ್ಲ. ವಾಮ ಮಾರ್ಗದ ಮೂಲಕ ಬೇರೆ ಬೇರೆ ತಂತ್ರದಿAದ ಶಾಸಕರನ್ನು ಖರೀದಿ ಮಾಡಿ ಇಂದು ಅಧಿಕಾರಕ್ಕೆ ಬಂದು, ಲೂಟಿ ಮಾಡಲು ಹಣ ಖರ್ಚು ಮಾಡಿ , ಜನಪರ ಯಾವುದೇ ಕೆಲಸವನ್ನು ಮಾಡಿಲ್ಲ. ಮನೆ ಕಟ್ಟಿಕೊಳ್ಳಲು ಒಂದು ನಯಾ ಪೈಸಾ ಬಿಡುಗಡೆ ಮಾಡಲು ಯೋಗ್ಯತೆ ಇಲ್ಲದ ಸರಕಾರ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ಮಾತನಾಡಿ, ಬಡವರಿಗೆ ಭೂಮಿಯನ್ನು ಹಾಗೂ ಉಚಿತವಾಗಿ ರೈತರಿಗೆ ವಿದ್ಯುತ್ ನೀಡಿದೆ,ಸಿದ್ದರಾಮಯ್ಯ ರಾಜ್ಯದ ಜನತೆಗೆ ಹೊಟ್ಟೆಗೆ ಅನ್ನುವ ನೀಡುವ ಕೆಲಸ ಮಾಡಿದ್ದಾರೆ. ಆದರೆ ಇಂತಹ ಜನಪರ ಕಾರ್ಯಕ್ರಮಗಳನ್ನು ಒಂದು ಬಿಜೆಪಿಯ ಸರಕಾರದನ್ನು ಕಾಣಿಸಿ, ಎಂದವರು ಬಂಗಾರಪ್ಪನವರು ಅಕ್ಷಯ, ಆರಾಧನಾ ಕಾರ್ಯಕ್ರಮಗಳನ್ನು ತಂದಿದ್ದು, ಬಡಜನರು ಬುದ್ದಿವಂತರಾಗಲಿ, ಪೆನ್ನು ಹಿಡಿದು ಅಕ್ಷರಸ್ತರಾಗಲಿ ಅಂತ, ಅವರ ಜೀವನ ಒಳ್ಳೆಯದಾಗಲಿ ಅಂತ, ಆದರೆ ಬಿಜೆಪಿಯವರು ಪೆನ್ನಿನ ಬದಲು ಧರ್ಮ, ಧರ್ಮದ ನಡುವೆ ಬೆಂಕಿ ಹಚ್ಚಿ ಬದೂಕು, ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಪ್ರವೀಣ ನೆಟ್ಟಾರ ಅವರ ಸಾವು ಸಂಭವಿಸಿದಾಗ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ ಕುಮಾರ ಕಟೀಲ್ ಅವರಿಗೆ ಗೋ ಬ್ಯಾಕ್ ಅಂತ ಹೇಳಿದ್ರು, ಅವರ ಕಾರು, ಪಂಚರ ಮಾಡಿದವರು ಯಾರು ಇದೆ ಬಜರಂಗದಳದವರು, ಅಲ್ಲಿ ಆರ್.ಎಸ್.ಎಸ್. ಮುಖಂಡರಿಗೆ ದಿಕ್ಕಾರ ಕೂಗಿದವರು ಯಾರು ಆರ್.ಎಸ್.ಎಸ್ ಕಾರ್ಯಕರ್ತರೆ, ಅಲ್ಲಿ ಬಂದAತ ಮಂತ್ರಿಗೆ ಗೋ ಬ್ಯಾಕ್ ಅಂತ ಹೇಳಿದವರು ಇದೆ ಬಜರಂಗದಳದವರು, ಇವರೆ ಬಿಜೆಪಿಯವರಿಗೆ ಅಧಿಕಾರ ಕೊಟ್ಟು, ಗೋ ಬ್ಯಾಕ್ ಅಂತ ಹೇಳಿ, ಬಿಜೆಪಿಗೆ ಅಧಿಕಾರ ನೀಡಿ, ಈಗ ಗೋ ಬ್ಯಾಕ್ ಅಂತಿರಾ ನಿಮಗೆ ಮಾನ ಮರ್ಯಾದೆ ಇದೆಯಾ, ಹಿಂದು, ಮುಸ್ಲಿಂ ನಡುವೆ ಬೇದ ಭಾವ ತಂದು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಿರಿ ಅಂತ ಹೇಳಿದರು.
ಮಾಜಿ ಶಾಸಕರಾದ ಶಾರದಾ ಶೆಟ್ಟಿ ಮಾತನಾಡಿ, ಪರೇಶ ಮೇಸ್ತಾ ಸಾವು ಸಂಭವಿಸಿದಾಗ ಬಿಜೆಪಿಯವರು ಭಾವನಾತ್ಮಕವಾಗಿ ಜನರನ್ನು ಕೆರಳಿಸಿ, ಶವದ ಮುಂದೆ ರಾಜಕಾರಣ ಮಾಡಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬಾರದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಯುವಕನ್ನು ಸಾಯಿಸಿ ಬಿಡುತ್ತಾರೆ ಅಂತ ಹೇಳಿಕೆ ನೀಡಿದ್ರು, ಪರೇಶ ಮೇಸ್ತಾನ ಸಾವಿನ ಫಲಾನುಭವಿಗಳು ಈ ಭಾಗದಲ್ಲಿ ಸಾಕಷ್ಟು ಜನರು ಇದ್ದಾರೆ, ಪರೇಶ ಮೇಸ್ತಾನ ಸಾವಿನ ಮೆರವಣಿಗೆಯಲ್ಲಿ ಶವದ ಎಡ, ಬಲ ನಿಂತವರು ಎಲ್ಲರೂ ಈಗ ಶಾಸಕರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಪೂರ್ವದಲ್ಲಿ ವಂದೆ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಕೆಲ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೆರ್ಪಡೆಯಾದರು,
ಈ ಸಂಧರ್ಭದಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಸಚಿನ್ ಮಿಘಾ, ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಪಿ.ಸಿ.ಸಿ ರಾಜ್ಯ ಉಸ್ತುವಾರಿ ಮಯೂರ್ ಕುಮಾರ ಜೈನ್, ಮಾಜಿ ಶಾಸಕರಾದ ಜೆ.ಡಿ.ನಾಯ್ಕ, ಮಂಕಾಳು ವೈಧ್ಯ, ಸತೀಶ ಶೈಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿಮಣ್ಣ ನಾಯ್ಕ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ, ಮುಖಂಡರಾದ, ಭಾಸ್ಕರ ಪಟಗಾರ, ಮಂಜುನಾಥ ನಾಯ್ಕ, ಪ್ರದೀಪ ನಾಯಕ ದೇವರಭಾವಿ, ರತ್ನಾಕರ ನಾಯ್ಕ ಸೇರಿದಂತೆ ಇತರಿದ್ದರು.
ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ