December 22, 2024

Bhavana Tv

Its Your Channel

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹೊರಟಿರುವ ರೋಲರ್ ಸ್ಕೇಟಿಂಗ್ ಯಾತ್ರೆ, ಕುಮಟಾ ಗಿಬ್ ಸರ್ಕಲ್ ನಲ್ಲಿ ಯಾತ್ರಿಗಳಿಗೆ ಸ್ವಾಗತ

ಕುಮಟಾ : ಧ್ಯೇಯವಾಕ್ಯದೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹೊರಟಿರುವ ರೋಲರ್ ಸ್ಕೇಟಿಂಗ್ ಯಾತ್ರೆಯು ಬುಧವಾರ ಮಧ್ಯಾಹ್ನ 2ಗಂಟೆಗೆ ಕುಮಟಾವನ್ನು ತಲುಪಿತು.

ಈ ಸಂದರ್ಭದಲ್ಲಿ ಪಟ್ಟಣದ ಗಿಬ್ ಸರ್ಕಲ್ ನಲ್ಲಿ ಸ್ಕೇಟಿಂಗ್ ಯಾತ್ರಿಗಳಿಗೆ ಸ್ವಾಗತಿಸಿ, ಪುಷ್ಪಾಭಿಶೇಕ ಅರ್ಪಿಸಿ ಗೌರವಿಸಲಾಯಿತು. ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಶಾಸಕ ದಿನಕರ ಶೆಟ್ಟಿ, ಕುಮಟಾ ಮಂಡಲ ಅಧ್ಯಕ್ಷ ಹೇಮಂತಕುಮಾರ ಗಾಂವಕರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ|| ಸುರೇಶ ಹೆಗಡೆ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು- ಕಾರ್ಯಕರ್ತರು, ಸಂಘದ ಸ್ವಯಂ ಸೇವಕರು, ಎ.ಬಿ.ವಿ.ಪಿ.ಯವರು ಇದ್ದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಶುಭ ಕೋರಿದರು.
ವರದಿ:ವಿಶ್ವನಾಥ ಜಿ ನಾಯ್ಕ ಕುಮಟಾ

error: