December 27, 2024

Bhavana Tv

Its Your Channel

ಹೊಲನಗದ್ದೆಯಲ್ಲಿ ನೂತನವಾಗಿ ನಿರ್ಮಿಸಿದ “ಸ್ವರ್ಗ ತೀರ ರೆಸಾರ್ಟ್” ಶುಭಾರಂಭದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ

ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ನೂತನವಾಗಿ ನಿರ್ಮಿಸಿದ “ಸ್ವರ್ಗ ತೀರ ರೆಸಾರ್ಟ್” ಶುಭಾರಂಭದ ಪ್ರಯುಕ್ತ, ಸ್ವರ ಸಾಗರ ಮೆಲೋಡಿಸ್ ಕುಮಟಾದವರು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿತು.

ಹೊಲನಗದ್ದೆ ಮಾರುತಿ ಪಟಗಾರ್ ಹಾಗೂ ಗಣೇಶ ಪಟಗಾರ್ ಮಾಲೀಕತ್ವದ “ಸ್ವರ್ಗ ತೀರ” ರೆಸಾರ್ಟ್ ಅನ್ನು ಗಣಹೋಮ ಮತ್ತು ಶಾಂತಿ ಹೋಮ ಮಾಡುವುದರ ಮೂಲಕ ಮದ್ಯಾಹ್ನ ಆರಂಭಿಸಿದ್ದರು. ಸಂಜೆ ಅತಿಥಿ ಆತ್ಮೀಯರಿಗೆಲ್ಲ ಔತಣಕೂಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ್ ಮಹಾಲೆ ಸಾರಥ್ಯದ “ಸ್ವರ ಸಾಗರ ಮೆಲೋಡಿಸ್ ಕುಮಟಾ” ದವರಿಂದ, ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಕೂಜಳ್ಳಿ ಮಾರುತಿ ನಾಯ್ಕ್, “ಏನ ಹೇಳಲಿ ತಂಗಿ…” ಭಜನೆ ಕ್ಯಾತಿಯ ರಾಘವೇಂದ್ರ ಪಟಗಾರ್ ಹಾಗೂ ಯುವ ಪ್ರತಿಭೆಗಳಾದ ಯಶೋಧ, ಪವಿತ್ರಾ ಸುಮಧುರವಾಗಿ ಹಾಡಿದರು. ಪ್ರತಿಭಾನ್ವಿತ ಗಾಯಕ ಪ್ರಶಾಂತ್ ಗಾವಡಿ ಪ್ರೇಕ್ಷಕರ ಜೊತೆ ಬೆರೆತು ಹಾಡಿ ಕುಣಿದು ಸಂಭ್ರಮಿಸಿದರು. ವಿಜಯ್ ಮಹಾಲೆ ಕೀಬೋರ್ಡ್, ಪ್ರದೀಪ್ ಭಂಡಾರಿ ತಬಲಾ, ಹಾಗೂ ವಿ.ಟಿ. ಭಟ್ ರಿದಮ್ ಪ್ಯಾಡ್ ನಲ್ಲಿ ಸಾಥ್ ನೀಡುವ ಮೂಲಕ ರಸಮಂಜರಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ದಿವ್ಯಾ ಕಲಸಂಕ ಆಕರ್ಷಕವಾಗಿ ನಿರೂಪಣೆ ಮಾಡಿದರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: