December 22, 2024

Bhavana Tv

Its Your Channel

ರಾಜ್ಯ ನಾಮಧಾರಿ ಸಂಘ ದಿಂದ ಸನ್ಮಾನ ಕಾರ್ಯಕ್ರಮ

ಕುಮಟಾ: ರಾಜ್ಯ ನಾಮಧಾರಿ ಸಂಘದ ಅಧ್ಯಕ್ಷರಾದ ಬಿ. ವಿ. ನಾಯ್ಕ ಇವರ ಆದೇಶದ ಮೇರೆಗೆ ರಾಜ್ಯಮಟ್ಟದ ಸದಸ್ಯರಾದ ಸುಕ್ರು ನಾಯ್ಕ ಇವರು ರಾಜ್ಯ ನಾಮಧಾರಿ ಸಂಘದ ಹಿಂದಿನ ಅಧ್ಯಕ್ಷರಾದ ಶ್ರೀ ರೋಹಿದಾಸ್. ನಾಯ್ಕ ಹಾಗೂ ಹೆಗಡೆ ಗ್ರಾಮದ ಅಧ್ಯಕ್ಷರಾದ ಶ್ರೀ ಎನ್ ವಿ ನಾಯ್ಕ ಇವರುಗಳ ಜೊತೆ ಸೇರಿ ಇಂದು ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಹೊನ್ನುಮನೆ ಕುಟುಂಬದ 94 ವರ್ಷ ವಯಸ್ಸಿನ ಹಿರಿಯರಾದ ಹನುಮಂತ ನಾರಾಯಣ ನಾಯ್ಕ ಇವರಿಗೆ ಇವರ ಪತ್ನಿ, ಮಕ್ಕಳು ಅಳಿಯಂದಿರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಅದೇ ರೀತಿ ಹೆಗಡೆ ಗ್ರಾಮದ ಬೂರಿಮನೆ ಕುಟುಂಬದ ಹಿರಿಯರಾದ ಲಕ್ಷ್ಮಿ ನಾರಾಯಣ ನಾಯ್ಕ ಇವರನ್ನು ಇವರ ಮಕ್ಕಳು ಮೊಮ್ಮಕ್ಕಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಇದೇ ರೀತಿ ಇನ್ನು ಅನೇಕರ ಹೆಸರನ್ನು ರಾಜ್ಯ ಸಂಘಕ್ಕೆ ಕಳುಹಿಸಿ ಮುಂದಿನ ದಿನಗಳಲ್ಲಿ ಸನ್ಮಾನಿಸಲಾಗುವುದು ಎಂದು ಸುಕ್ರು ನಾಯ್ಕ ಇವರು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಜಯ ನಾಯ್ಕ ಬೊಗರಿಬೈಲ್, ಶಾಂತಾರಾಮ ನಾಯ್ಕ ಉಪಾಧ್ಯಕ್ಷರು ಗ್ರಾಮ ಪಂಚಾಯತ ಹೆಗಡೆ, ಉಮೇಶ ನಾಯ್ಕ ಹೆಗಡೆ, ನಾಗರಾಜ ಲಕ್ಷ್ಮಣ ನಾಯ್ಕ ಹೆಗಡೆ ಇವರು ಉಪಸ್ಥಿತರಿದ್ದರು.
ವರದಿ ವಿಶ್ವನಾಥ ಜಿ ನಾಯ್ಕ ಕುಮಟಾ

error: