December 22, 2024

Bhavana Tv

Its Your Channel

ಕಾಂಗ್ರೆಸ್ ಪಕ್ಷದ ಮುಖಂಡ ಮೋಂಟಿ ಫರ್ನಾಂಡಿಸ್ ನಿಧನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರಾದ ಮೋಂಟಿ ಫರ್ನಾಂಡಿಸ್ ನಿಧನರಾಗಿದ್ದಾರೆ. ನಿಷ್ಠಾವಂತ ಕಾಂಗ್ರೆಸ ಕಾರ್ಯಕರ್ತರಾದ ಇವರು ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದರು.ಕೇಂದ್ರ ಸರ್ಕಾರದ ಮಾಜಿ ಸಚಿವೆ ಮಾರ್ಗರೇಟ ಆಳ್ವರವರ ನೀಕಟವರ್ತಿಯಾಗಿದ್ದರು. ಇವರ ನಿಧನಕ್ಕೆ ಮಾಜಿ ಸಚಿವರು, ಹಾಲಿ ಶಾಸಕರಾದ ಆರ್.ವಿ.ದೇಶಪಾಂಡೆ,ಎಚ್.ಕೆ.ಪಾಟಿಲ್, ಮಾಜಿ ಶಾಸಕರಾದ ವಿ.ಎಸ್.ಪಾಟೀಲ,ಜಿಲ್ಲಾಧ್ಯಕ್ಷ ಬೀಮಣ್ಣಾ ನಾಯ್ಕ,ಶಿವಾನಂದ ಹೆಗಡೆ ಕಡತೋಕಾ,ಕಾಂಗ್ರೇಸ್ ಮುಖಂಡ ಶ್ರೀನಿವಾಸ ಧಾರ್ತಿ, ಮುಂತಾದವರು ಶೋಕ ವ್ಯಕ್ತಪಡಿಸಿ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

error: