ಕುಮಟಾ: ಜನಪರ ಹೋರಾಟ ವೇದಿಕೆಯ ವತಿಯಿಂದ ನೀರಿನ ಪಂಪ ಸಮರ್ಪಣಾ ಹಾಗೂ ಸನ್ಮಾನ ಕಾರ್ಯಕ್ರಮ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿಯ ಗ್ರಾ.ಪಂ ವ್ಯಾಪ್ತಿಯ ಬಂಗಣೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಿಜೆಪಿಯ ಮಂಡಲಾಧ್ಯಕ್ಷರಾದ ಹೆಮಂತ ಕುಮಾರ ಗಾಂವ್ಕರ ಅವರು ದೀಪಬೇಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸರಕಾರ ನೀಡಿದ ಎಲ್ಲಾ ಕಾರ್ಯಕ್ರಮವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಈ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇಲ್ಲಿನ ಅಂಗನವಾಡಿಗೆ ಜನಪರ ಹೋರಾಟ ವೇಧಿಕೆಯ ಉಪಾಧ್ಯಕ್ಷರಾದ ಉದಯ ಭಟ್ ಅವರು ನೀರಿನ ಪಂಪ್ ಅನ್ನು ವಿತರಣೆ ಮಾಡಿದ್ದಾರೆ, ಅವರ ಸಮಾಜಮುಖಿಯ ಕಳಕಳಿಯು ಉತ್ತಮವಾದದ್ದು. ಸರಕಾರಿ ಶಾಲೆಗಳಿಗೆ ಸರಕಾರ ಹಾಗೂ ದಾನಿಗಳು ಎಲ್ಲಾ ರೀತಿಯ ಮೂಲ ಸೌಕರ್ಯ ನೀಡುತ್ತಾರೆ, ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಾರೆ, ಆದರೆ ಖಾಸಗಿ ಶಾಲೆಯಲ್ಲಿ ಶಿಕ್ಷಣಕ್ಕೆ ಹಣವನ್ನು ನೀಡಿ ಪಾಲಕರು ತಮ್ಮ ಮಕ್ಕಳ ಶಿಕ್ಷಣ ನೀಡುವುದರ ಜೋತೆ ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಪಾಲಕರು ಭಾಗವಹಿಸುವಿಕೆಯನ್ನು ಕಾಣುತ್ತೇವೆ, ಆದರೆ ಸರಕಾರಿ ಶಾಲೆಯಲ್ಲಿ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮಾಣ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ಅಂಗನವಾಡಿಯಲ್ಲಿ ಶಿಕ್ಷಣದ ಕಲಿಕೆಯ ಮೊದಲ ಹೆಜ್ಜೆಯಾಗಿದೆ, ಇಲ್ಲಿ ಮಕ್ಕಳ ಮೂಲಭೂತ ಸೌಕರ್ಯಕ್ಕೆ ನೀಡಲು ದಾನಿಗಳು ಬಂದಾಗ ಪ್ರೋತ್ಸಾಹದ ದೃಷ್ಠಿಯಿಂದ ಪಾಲಕರು ಕೂಡಾ ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕು, ಆಗ ಶಾಲೆಗಳಿಗೆ ದಾನಿಗಳಿಗೆ ಇನ್ನು ಎನಾದ್ರೂ ನೀಡಲು ಅವರಿಗೆ ಪೋತ್ಸಾಹಿಸಿದಂತಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರ ಹೇಳಿದರು.
ನಾವು ನೈಜತೆಯಿಂದ ಕೃತಕತೆಯ ಕಡೆಗೆ ಸಾಗುತ್ತಿದ್ದೇವೆ, ನಾವು ನೈಜತೆಯಿಂದ ಬದುಕುವುದು ನೆಮ್ಮದಿಯನ್ನು ನೀಡುತ್ತದೆ, ಆದರೆ ನಮ್ಮ ಭಾರತಿಯ ಸಂಸ್ಕ್ರತಿಯು ಪರೋಪಕಾರವನ್ನು ಮಾಡುವುದು,ಗುರುಹಿರಿಯರನು ಗೌರವಿಸುವುದು ಮಾಡಬೇಕು, ನಾವು ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುವಂತಹ ಸಮಾಜ ನಿರ್ಮಾಣವಾಗಬೇಕಾಗಿದೆ ಎಂದು ಬಿಜೆಪಿಯ ಮುಖಂಡರಾದ ಎಂ.ಜಿ.ಭಟ್ ಹೇಳಿದರು.
ನಂತರ ಆಶಾಕಾರ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಹಾಗೂ ಜನಪರ ಹೋರಾಟ ವೇಧಿಕೆಯ ಉಪಾಧ್ಯಕ್ಷರಾದ ಉದಯ ಭಟ್ ಅವರು ಅಂಗನವಾಡಿ ಕೇಂದ್ರಕ್ಕೆ ಪಂಪ್‌ಸೆಟ್ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಈಶ್ವರ ಮರಾಠಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗಣಪತಿ ಮರಾಠಿ, ಶಿಕ್ಷಕರಾದ ಸುಬ್ರಮಣ್ಯ ಹೆಗಡೆ ಇತರಿದ್ದರು
ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ