April 18, 2025

Bhavana Tv

Its Your Channel

ತಾಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಅಸ್ತಿತ್ವಕ್ಕೆ

ಕುಮಟಾ : ರಾಜ್ಯದಲ್ಲಿ ಪ್ರಬಲ ಸಂಘಟನೆಯಾಗಿ ಹೊರಹೊಮ್ಮುತ್ತಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕುಮಟಾ ತಾಲೂಕಾ ಘಟಕ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

ಅಧ್ಯಕ್ಷರಾಗಿ ಕರಾವಳಿ ಧ್ವನಿ ಪತ್ರಿಕೆಯ ಸಂಪಾದಕರಾದ ನೀಲಕಂಠ ಭಲಗಾರ, ಉಪಾಧ್ಯಕ್ಷರಾಗಿ ವಿಜಯಶಾಲಿ ಪತ್ರಿಕೆಯ
ವರದಿಗಾರ ರಾಘವೇಂದ್ರ ಪಟಗಾರ, ಕಾರ್ಯದರ್ಶಿಯಾಗಿ ವಿಜಯಶಾಲಿ ಪತ್ರಿಕೆಯ ವರದಿಗಾರ ಉದಯ ಭಟ್ಟ, ಕೂಜಳ್ಳಿ ಹಾಗೂ
ಕೋಶಾಧ್ಯಕ್ಷರಾಗಿ ಭಾವನಾ ವಾಹಿನಿಯ ಕುಮಟಾ ವರದಿಗಾರ ವಿಶ್ವನಾಥ ನಾಯ್ಕ ಇವರನ್ನು ಉತ್ತರ ಕನ್ನಡ
ಜಿಲ್ಲಾಧ್ಯಕ್ಷರಾದ ಸದಾನಂದ ದೇಶಭಂಡಾರಿ ಅವರ ಸೂಚನೆಯ ಮೇರೆಗೆ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ
ಅವರು ನೇಮಿಸಿ ಆದೇಶ ಪತ್ರ ನೀಡಿದ್ದು, ಸಂಘವನ್ನು ಇನ್ನಷ್ಟು ಸದೃಢವಾಗಿ ಸಂಘಟಿಸುವAತೆ ತಿಳಿಸಿರುತ್ತಾರೆ.

error: